ಭಾಗ 7

#ಚರಿತ್ರೆಯ #ಅರೇಬಿಯಾ....   #ಭಾಗ - 7  n.u.t*

#ಮೂಸಾ #ನೆಬಿ* ಅ.ಸ

ನಿನ್ನೆಯ ಸಂಚಿಕೆಯಿಂದ...
                 ಹಾಗೆ ಮೂಸಾ ನೆಬಿಯು ಶುಐಬರ ಬಳಿಗೆ ಬಂದರು. ನಂತರ ನಡೆದ ವಿಷಯವನ್ನೆಲ್ಲಾ ತಿಳಿಸಿದರು. ಆಗ ಶುಐಬ್ ನೆಬಿ ಹೇಳಿದರು ನೀವೇನೂ ಹೆದರಬೇಡಿ. ನೀವೀಗ ಅಕ್ರಮಿತ ಜನಾಂಗದವರಿಂದ ಸುರಕ್ಷಿತರಾಗಿರುವಿರಿ.                         ನಂತರ ಶೊಐಬರ ಮಗಳಲ್ಲಿ ಒಬ್ಬಾಕೆ ಹೇಳಿದಳು ಅಪ್ಪಾ ಈತನನ್ನು ಸೇವಕನಾಗಿ ನೇಮಿಸಿಕೊಳ್ಳಿರಿ. ನೀವು ಸೇವಕನಾಗಿ ನೇಮಿಸುವುದಕ್ಕೆ ಶಕ್ತಿವಂತ ಹಾಗೂ ನಂಬಲರ್ಹ ವ್ಯಕ್ತಿಯು ಯೋಗ್ಯರಲ್ಲವೇ ಎಂದಳು.

      ಹಾಗೆಯೇ ಶುಐಬ್ ಹೇಳಿದರು ನೀವು ಎಂಟು ವರ್ಷ ನನ್ನ ಬಳಿ ಸೇವೆ ಸಲ್ಲಿಸುವುದಾದರೆ ನಾನು ಈ ನನ್ನ ಇಬ್ಬರು ಪುತ್ರಿಯರ ಪೈಕಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುವೆನು. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಇಷ್ಟಕ್ಕನುಸಾರವಾಗಿದೆ. ನಾನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಜ್ಜನನಾಗಿ ಕಾಣುವಿರಿ ಎಂದರು.
     ಅದಕ್ಕುತ್ತರವಾಗಿ ಮೂಸಾ ನೆಬಿ ಹೇಳಿದರು ಇದು ನನ್ನ ಹಾಗೂ ನಿಮ್ಮ ನಡುವಣ ಒಪ್ಪಂದವಾಗಿದೆ, ನಾನು ಈ ಎರಡು ಅವಧಿಗಳ ಪೈಕಿ ಯಾವುದನ್ನು ಪೂರ್ತಿಗೊಳಿಸಿದರೂ ನನ್ನ ಮೇಲೆ ಯಾವುದೇ ಋಣ ಉಳಿಯದು. ನಮ್ಮ ಮಾತುಗಳಿಗೆ ಅಲ್ಲಾಹನೇ ಸಾಕ್ಷಿ ಎಂದರು.

   ಈಗೆ ಹತ್ತು ವರ್ಷಗಳು ಮದಿಯನ್ ಪ್ರದೇಶದಲ್ಲಿ ವಾಸಿಸಿದ ನಂತರ ತನ್ನ ಮಡದಿಯೊಂದಿಗೆ ಯಾತ್ರೆ ಮಾಡುತ್ತಾ ಈಗಿನ *ಈಜಿಫ್ಟ್ ದೇಶದ ದಕ್ಷಿಣ ಸಿನಾದ ತುವಾ ಎಂಬ ಪ್ರದೇಶಕ್ಕೆ ತಳುಪಿದರು*. ರಾತ್ರಿಯ ಕತ್ತಲಲ್ಲಿ ಅಲ್ಲಾಹನು ಮೂಸಾ ನೆಬಿಯೊಂದಿಗೆ ನೇರವಾಗಿ ಮಾತನಾಡಿದರು.  ನಾನೇ ನಿಮ್ಮ ಒಡೆಯ. ನೀವು ನಿಮ್ಮ ಬೂಟುಗಳನ್ನು ಕಳಚಿರಿ. ನೀವು ಪವಿತ್ರವಾದ *ತುವಾ* ಕಣಿವೆಯಲ್ಲಿದ್ದೀರಿ. ನಾನು ನಿಮ್ಮನ್ನು ಆರಿಸಿಕೊಂಡಿರುವೆನು. ಇದೀಗ ನಿಮಗೆ ನೀಡಲಾಗುವ ದಿವ್ಯವಾಣಿಯನ್ನು ಕೇಳಿರಿ.
ಖಂಡಿತವಾಗಿಯೂ ನಾನೇ ಅಲ್ಲಾಹು, ನನ್ನ ಹೊರತು ಬೇರೆ ದೇವರಿಲ್ಲ. ನನ್ನನ್ನು ಅರಾಧಿಸಿರಿ ಮತ್ತು ನನ್ನ ನೆನಪನ್ನು ಉಳಿಸಿಕೊಳ್ಳಲು ನಮಾಝ್ ಅನ್ನು ಪಾಲಿಸಿರಿ.

      ತುವಾ ಪ್ರದೇಶದ ಭಾಗದಲ್ಲಿ *ಕಿ.ಪೂ 330* ರಲ್ಲಿ ಕ್ರಿಷ್ಚಿಯನ್ ಚಕ್ರವರ್ತಿ ಕಾಷ್ಟಂಡೈನ್ ನಿರ್ಮಿಸಿದ ಮತ್ತು *ಕಿ.ಪೂ 530* ರಲ್ಲಿ ಜಶ್ಚೀನಿಯನ್ ಚಕ್ರವರ್ತಿಯ ನಿರ್ದೇಶನದಂತೆ ನಿರ್ಮಿಸಿದ  *ಸನ್ ಖ್ಯಾದರಿಂಗ್* ಎಂಬ ಎರಡು ಕಟ್ಟಡಗಳು ಈಗಲೂ ಆ ಪ್ರದೇಶದಲ್ಲಿದೆ.
          ಮೂಸಾ ನೆಬಿಯು ಅಲ್ಲಾಹನೊಂದಿಗೆ ಸಂದರ್ಶನ ನಡೆಸಿದ್ದು ಒಂದು ಮರದ ಅಡಿಯಲ್ಲಾಗಿತ್ತು. ಆ ಮರದ ಅವಶೇಷಳ ಎಡೆಯಲ್ಲಿ ನಂತರದ ದಿನಗಳಲ್ಲಿ ನೆಟ್ಟಂತಹ ಮರವು ಈ ಪ್ರದೇಶದಲ್ಲಿ ಈಗಲೂ ಇದೆ.

      ಕ್ರಿಷ್ಚಿಯನರು ನಿರ್ಮಿಸಿದ ಈ ಕಟ್ಟಡವನ್ನು ಸಂರಕ್ಷಿಸುವಂತೆ *ಹಿಜಿರ ಆರನೇ ವರ್ಷ ನೆಬಿ ಮುಹಮ್ಮದ್ ಮುಸ್ತಫಾ ಸ.ಅ ರು ಕಳುಹಿಸಿ ಕೊಟ್ಟ ಪತ್ರದ ನಕಲಿ ಭಾಗವು ಈ ಸನ್ ಖ್ಯಾದರಿಂಗ್ ಕಟ್ಟದ ಒಳಗಡೆ ಪ್ರದರ್ಶೀಸಲ್ಪಡುತ್ತಿದೆ*

*(ಮುಂದುವರಿಯುವುದು....*)

- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ