ಭಾಗ 10

*ಚರಿತ್ರೆಯ ಅರೇಬಿಯಾ...* *ಭಾಗ - 10   n.u.t*

ರಮಳಾನ್ ತಿಂಗಳ ಮೊದಲು ನಾನು ಬರೆಯುತ್ತೀದ್ದಂತಹ ಚರಿತ್ರೆಯ ಅರೇಬಿಯಾ ಇದರ ಒಂಭತ್ತು ಭಾಗಗಳ ನಂತರ ಹತ್ತನೇಯ ಭಾಗವನ್ನು ಇಂದು ನಾನು ಆರಂಬಿಸುತಿದ್ದೇನೆ.

  *ಖಾರೂನ್*
  ಮೂಸಾ ನೆಬಿಯ ಸಂತತಿಯಲ್ಲಿ ಜೀವಿಸಿದಂತಹದ ಒಬ್ಬ ಬಲಾಡ್ಯನು ಕಿ.ಪೂ 1300 ರಲ್ಲಿ ಇಜಿಪ್ಟ್ ದೇಶದಲ್ಲಿ ವಾಸಿಸುತಿದ್ದನು.  ಈಜಿಫ್ಟ್ ದೇಶದ ರಾಜಧಾನಿ ಕೈರೋಯಿಂದ ನೂರೈವತ್ತು ಕಿ.ಮೀ ದೂರದಲ್ಲಿ ಕಸರ್ ಕಾರೂನ್ ಎಂಬ ಸ್ಥಳದಲ್ಲಾಗಿತ್ತು ಇವನ ವಾಸ. ಈಗಲೂ ಅಲ್ಲಿ ಇವನ ದೇವಾಲಯ, ಬಾವಿ ಹಾಗೂ ಅನೆಕಟ್ಟುಗಳನ್ನು ಕಾಣಬಹುದು. ಖಾರೂನಿನ ಬಗ್ಗೆ ಪವಿತ್ರ ಕುರಾನ್ ತಿಳಿಸುದೇನೆಂದರೆ,

*ಅಧ್ಯಾಯ 28: ಅಲ್‌ ಕಸಸ್ (ಕಥೆಗಳು), ಸೂಕ್ತ  76

ﺇِﻥَّ ﻗَٰﺮُﻭﻥَ ﻛَﺎﻥَ ﻣِﻦ ﻗَﻮْﻡِ ﻣُﻮﺳَﻰٰ ﻓَﺒَﻐَﻰٰ ﻋَﻠَﻴْﻬِﻢْ ۖ ﻭَءَاﺗَﻴْﻨَٰﻪُ ﻣِﻦَ ٱﻟْﻜُﻨُﻮﺯِ ﻣَﺎٓ ﺇِﻥَّ ﻣَﻔَﺎﺗِﺤَﻪُۥ ﻟَﺘَﻨُﻮٓﺃُ ﺑِﭑﻟْﻌُﺼْﺒَﺔِ ﺃُﻭ۟ﻟِﻰ ٱﻟْﻘُﻮَّﺓِ ﺇِﺫْ ﻗَﺎﻝَ ﻟَﻪُۥ ﻗَﻮْﻣُﻪُۥ ﻻَ ﺗَﻔْﺮَﺡْ ۖ ﺇِﻥَّ ٱﻟﻠَّﻪَ ﻻَ ﻳُﺤِﺐُّ ٱﻟْﻔَﺮِﺣِﻴﻦَ*

ಕಾರೂನನು ಮೂಸಾರ ಜನಾಂಗದವನೇ ಆಗಿದ್ದನು ಮತ್ತು ಅವನು ಅವರ ವಿರುದ್ಧ ವಿದ್ರೋಹಿಯಾದನು. ನಾವು ಅವನಿಗೆ ಅನೇಕ ಖಜಾನೆಗಳನ್ನು ನೀಡಿದ್ದೆವು. ಎಷ್ಟೆಂದರೆ, ಅವುಗಳ ಚಾವಿಗಳು ಒಂದು ಶಕ್ತಿಶಾಲಿ ತಂಡದ ಪಾಲಿಗೂ ಭಾರವೆನಿಸುತ್ತಿದ್ದವು. ಅವನ ಜನಾಂಗವು ಅವನೊಡನೆ ಹೇಳಿತು; ನೀನು ದೊಡ್ಡಸ್ತಿಕೆ ಮೆರೆಯಬೇಡ. ದೊಡ್ಡಸ್ತಿಕೆ ಮೆರೆಯುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ.

     
        ಕೃಷಿ ಹಾಗೂ ಮೀನು ಸಾಕುದರಲ್ಲಿ ಪರಿಣತನಾಗಿದ್ದ ಕಾರೂನನು ತನ್ನಲ್ಲಾದ ಸಂಪತ್ತಿನ ಅಹಂಕಾರದಿಂದ ಧಿಕ್ಕಾರಿಯಾಗಿ ಜೀವಿಸಿದೆ.  ಅಲ್ಲಾಹನ ಬಗ್ಗೆ ಇವನಿಗೆ ನಂಬಿಕೆ ಇರಲಿಲ್ಲ ಹಾಗೂ ಪರಲೋಕ ಹಾಗೂ ಅಂತ್ಯ ದಿನಗಳನ್ನು ಇವನು ನಿಷೇಧಿಸಿದ. ಅದಲ್ಲದೇ ಅವನು ಗೂಂಡಾಗಿರಿ ಆರಂಭಿಸಿದ. ಜೊತೆಗೆ ಮೂಸಾ ನೆಬಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸತೊಡಗಿದ.

     ಒಂದು ದಿನ ಕಾರೂನ್ ತನ್ನ ವೈಭವದೊಂದಿಗೆ ತನ್ನ ಜನಾಂಗದವರ ಮುಂದೆ ಹೊರಟನು. ಆಗ ಕೇವಲ ಈ ಲೋಕದ ಬದುಕನ್ನು ಬಯಸಿದ್ದವರು ಹೇಳಿದರು : *ಕಾರೂನನಿಗೆ ನೀಡಲಾಗಿರುವುದೆಲ್ಲವೂ ನಮ್ಮ ಬಳಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು... ಅವನು ಖಂಡಿತ ಮಹಾ ಭಾಗ್ಯವಂತ*
        ಆದರೆ ಜ್ಞಾನವಂತರು ಹೇಳಿದರು;  *ನಿಮ್ಮ ಸ್ಥಿತಿಯು ಶೋಚನೀಯವಾಗಿದೆ. ಸತ್ಯವನ್ನು ನಂಬಿದ ಹಾಗೂ ಸತ್ಕರ್ಮ ಮಾಡಿದವನ ಪಾಲಿಗೆ, ಅಲ್ಲಾಹನು ನೀಡುವ ಪ್ರತಿಫಲವೇ ಇದೆಲ್ಲಕ್ಕಿಂತ ಶ್ರೇಷ್ಠವಾಗಿದೆ ಮತ್ತು ಅದು ಸಹನಶೀಲರಿಗೆ ಮಾತ್ರ ಸಿಗುತ್ತದೆ*

       ಕೊನೆಗೆ ಅಲ್ಲಾಹನು ಕಾರೂನ್'ನನ್ನು ಮತ್ತು ಅವನ ನಿವಾಸವನ್ನು ಭೂಮಿಯಲ್ಲಿ ಅದುಮಿ ಬಿಟ್ಟರು. ಆಗ ಅಲ್ಲಾಹನ ಹೊರತು ಬೇರೆ ಯಾವ ಪಡೆಯೂ ಅವನ ನೆರವಿಗೆ ಲಭ್ಯವಿರಲಿಲ್ಲ, ಮತ್ತು ಅವನಿಗೆ ಅವನೇ ನೆರವಾಗಲಿಕ್ಕೂ ಅವನಿಗೆ ಸಾಧ್ಯವಾಗಲಿಲ್ಲ.

    ನೋಡಿ ಗೆಳೆಯರೆ.. ಹಣ ಸಂಪತ್ತು ಇದೆಯೆಂದು ದರ್ಪಮೆರೆಯುವ ಸಮುದಾಯದ ಆಧುನಿಕ ಕುಟುಂಭಗಳು ಹಾಗೂ ಯುವ ನಾಗರಿಕರಿಗೆ ಇದು ಪಾಠವಲ್ಲವೆ. ಭೂಲೋಕದ ಸಂಪತ್ತಿಗೆ ಆಸೆ ಪಡದೆ ಪರಲೋಕದ ಜೀವನಕ್ಕಾಗಿ ಬದುಕುವ. ಅಲ್ಲಾಹು ತೌಫೀಕ್ ನೀಡಲಿ..  ಆಮೀನ್..

*ಮುಂದುವರಿಯುವುದು.....*

- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ