ಭಾಗ 2

#ಚರಿತ್ರೆಯ #ಅರೇಬಿಯಾ.....   #ಭಾಗ - 2 ....  n.u.t  

#ಸ್ವಾಲಿಹ್ #ನೆಬಿ (ಅ.ಸ) ಮತ್ತು #ಸಮೂದ್ (ಗೋತ್ರ) #ಸಮುದಾಯ

    ಸುಮಾರು  5000 ವರ್ಷಗಳ ಹಿಂದೆ ಜೀವಿಸಿದ ಜನ ಸಮುದಾಯವಾಗಿದೆ ಸಮೂದ್ ಜನಾಂಗ. ಸಮೂದ್ ಗೋತ್ರಕ್ಕೆ ಅಲ್ಲಾಹನು ನಿಯೋಜಿಸದ ನೆಬಿಯಾಗಿದೆ ಸ್ವಾಲೀಹ್ ನೆಬಿ
      ಮದೀನದಿಂದ 405 ಕಿ.ಮೀ ಕ್ರಮಿಸಿದಾಗ ಸುಗುವ ಪ್ರದೇಶವಾಗಿದೆ ಮದನ್ - ಸಾಲ.
    ತಬೂಕಿಗೆ ಹತ್ತಿರ ಪ್ರದೇಶವಾದ ಈ ಪ್ರದೇಶಗಳಿಗೆ ಕಳೆದ ಬಾರಿ ನಾನು ಭೇಟಿಕೊಟ್ಟಿದ್ದೆ.  ಸಮೂದ್ ಗೋತ್ರದ ಪಳೆಯುಳಿಕೆ ಮನೆಗಳು, ಮಂಟಪ, ಹಾಗೂ ಬಾವಿ ಇತ್ಯಾದಿ ಕಾಣಬಹುದು.  ಅಲ್ಲೂಲ ಮ್ಯೂಸಿಯಂಗೆ ತೆರಳಿದರೆ ಪಳೆಯುಳಿಕೆಗಳು ಕಾಣಬಹುದು. ಸೌದಿ ಆನಿವಾಸಿಗಳು ಭೇಟಿಕೊಟ್ಟರೆ ಚರಿತ್ರೆಗಳಿಂದ ಪಾಠ ಕಲಿಯಬಹುದು.

 ಸ್ವಾಲಿಹ್ ನೆಬಿಯ ಮುಲಕ ಅಲ್ಲಾಹನು ಕಲ್ಪಿಸಿದರು

ಅಧ್ಯಾಯ 11: ಹೂದ್, ಸೂಕ್ತ  61

ﻭَﺇِﻟَﻰٰ ﺛَﻤُﻮﺩَ ﺃَﺧَﺎﻫُﻢْ ﺻَٰﻠِﺤًﺎ ۚ ﻗَﺎﻝَ ﻳَٰﻘَﻮْﻡِ ٱﻋْﺒُﺪُﻭا۟ ٱﻟﻠَّﻪَ ﻣَﺎ ﻟَﻜُﻢ ﻣِّﻦْ ﺇِﻟَٰﻪٍ ﻏَﻴْﺮُﻩُۥ ۖ ﻫُﻮَ ﺃَﻧﺸَﺄَﻛُﻢ ﻣِّﻦَ ٱﻷَْﺭْﺽِ ﻭَٱﺳْﺘَﻌْﻤَﺮَﻛُﻢْ ﻓِﻴﻬَﺎ ﻓَﭑﺳْﺘَﻐْﻔِﺮُﻭﻩُ ﺛُﻢَّ ﺗُﻮﺑُﻮٓا۟ ﺇِﻟَﻴْﻪِ ۚ ﺇِﻥَّ ﺭَﺑِّﻰ ﻗَﺮِﻳﺐٌ ﻣُّﺠِﻴﺐٌ

ಸಮೂದ್ ಜನಾಂಗದೆಡೆಗೆ, (ದೂತರಾಗಿ) ಅವರ ಸಹೋದರ ಸಾಲಿಹ್ ಬಂದರು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ನಿಮಗೆ ಅವನ ಹೊರತು ಬೇರೆ ಯಾರೂ ದೇವರಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅದರಲ್ಲಿ ನಿಮ್ಮನ್ನು ನೆಲೆಸಿದನು. ನೀವು ಅವನಲ್ಲಿ ಕ್ಷಮೆಯನ್ನು ಬೇಡಿರಿ ಮತ್ತು ಅವನೆದುರು ಪಶ್ಚಾತ್ತಾಪ ಪಡಿರಿ. ಖಂಡಿತವಾಗಿಯೂ ನನ್ನ ಒಡೆಯನು ತುಂಬಾ ನಿಕಟನೂ ಸ್ಪಂದಿಸುವವನೂ ಆಗಿದ್ದಾನೆ.

ಸಮೂದ್ ಗೋತ್ರವು ಕಲ್ಲಿನಿಂದ ದೊಡ್ಡ ಮನೆಗಳನ್ನು  ಸೃಷ್ಟಿಸುತಿದ್ದರು ಇದನ್ನು ಕುರಾನ್ ವ್ಯಕ್ತಪಡಿಸಿದೆ.

 ಅಧ್ಯಾಯ 15: ಅಲ್ ಹಿಜ್ರ್, ಸೂಕ್ತ  82

ﻭَﻛَﺎﻧُﻮا۟ ﻳَﻨْﺤِﺘُﻮﻥَ ﻣِﻦَ ٱﻟْﺠِﺒَﺎﻝِ ﺑُﻴُﻮﺗًﺎ ءَاﻣِﻨِﻴﻦَ
ಅವರು ನಿರ್ಭೀತರಾಗಿ ಪರ್ವತಗಳಲ್ಲಿ ನಿವಾಸಗಳನ್ನು ಕೊರೆಯುತ್ತಿದ್ದರು.

ಅಧ್ಯಾಯ 89: ಅಲ್‌ ಫಜ್ರ್ (ಮುಂಜಾವು), ಸೂಕ್ತ  9

ﻭَﺛَﻤُﻮﺩَ ٱﻟَّﺬِﻳﻦَ ﺟَﺎﺑُﻮا۟ ٱﻟﺼَّﺨْﺮَ ﺑِﭑﻟْﻮَاﺩِ
ಬಯಲುಗಳಲ್ಲಿ ಕಠೋರ ಕಲ್ಲುಗಳನ್ನು ಕೆತ್ತಿದ್ದ ಸಮೂದರು...

           ನೆಬಿ ಮಹಮ್ಮದ್ ಮುಸ್ತಫಾ (ಸ.ಅ)  ತಬೂಕಿಗೆ ಯಾತ್ರೆ ಕೈಗೊಂಡಾಗ ಈ ಪ್ರದೇಶಕ್ಕೆ ತಲುಪಿದಾಗ ಇದು ಅಲ್ಲಾಹನ ಅಝಾಬ್ ಶಿಕ್ಷೆ ಎರಗಿದ ಸ್ಥಳ ಎಂದು ಎಚ್ಟರಿಸುತಿದ್ದರು.

    ಆ ಕಾಲದಲ್ಲಿ 9 ರೌಡಿ ಸಂಘಗಳು ಅಲ್ಲಿ ಇದ್ದವು.  ಬಹುದೈವಾರಾಧನೆ, ಲೂಟಿ, ಅನ್ಯಾಯ, ಅಕ್ರಮ, ಧಿಕ್ಕಾರ ಮೈಗೂಡಿಸಿಕೊಂಡಿದ್ದರು.

      ದೈವ ಲೀಲೆಯಂತೆ ಅಸಾಧಾರಣವಾಗಿ ಒಂದು ಒಂಟೆಯನ್ನು ಸೃಷ್ಟಿಸಲಾಗಿತ್ತು.  ಆ ಒಂಟೆಯು ಅವರ ನಡುವೆ ಸಂಚರಿಸುತಿತ್ತು. ಅದನ್ನು ಉಪದ್ರಿಸಬಾರದೆಂದು ಅಲ್ಲಾಹನು ಆಜ್ಙಾಪಿಸಿದರು.   ಆದರೆ ಅಲ್ಲಾಹನ ಮಾತಿಗೆ ವಿರುದ್ದವಾಗಿ ಆ ಒಂಟೆಯನ್ನು ಕೊಂದು ಹಾಕಿದರು. ಅದಕ್ಕುತ್ತರವಾಗಿ ಅಲ್ಲಾಹನ ಶಿಕ್ಷೆಯು ಎರಗಿಯೇ ಬಿಟ್ಟಿತ್ತು.
ಭೀಕರ ಶಬ್ದವು ಅವರನ್ನು ನಿರ್ಣಾಮಗೊಳಿಸಿತು.  ಇದನ್ನು ಕುರಾನ್ ವಿವರಿಸಿದ ರೀತಿ ಇದು..

ಅಧ್ಯಾಯ 11: ಹೂದ್, ಸೂಕ್ತ  67

ﻭَﺃَﺧَﺬَ ٱﻟَّﺬِﻳﻦَ ﻇَﻠَﻤُﻮا۟ ٱﻟﺼَّﻴْﺤَﺔُ ﻓَﺄَﺻْﺒَﺤُﻮا۟ ﻓِﻰ ﺩِﻳَٰﺮِﻫِﻢْ ﺟَٰﺜِﻤِﻴﻦَ

 ಅತ್ತ ಒಂದು ಭೀಕರ ಶಬ್ದವು ಅಕ್ರಮಿಗಳನ್ನು ಆವರಿಸಿಕೊಂಡಿತು ಮತ್ತು ಬೆಳಗಾದಾಗ, ಅವರು ತಮ್ಮ ಮನೆಗಳಲ್ಲೇ ಅಧೋಮುಖರಾಗಿ ಬಿದ್ದುಕೊಂಡಿದ್ದರು.

#ಹೂದ್ #ನೆಬಿ (ಅ.ಸ) ಮತ್ತು  #ಆದ್ #ಸಮುದಾಯ

       ಸರಿಸುಮಾರು 7000 ವಷಗಳ ಹಿಂದೆ, ಇಂದಿನ ಒಮಾನ್ ದೇಶದಲ್ಲಿ ಒಳಪಟ್ಟ ಶಿಝರ್ ಎಂಬ ನಾಡಲ್ಲಾಗಿತ್ತು ಇವರ ವಾಸ. 1992 ರಲ್ಲಿ ವಿಜ್ಞಾನಿಗಳು ಮರಳು ರಾಶಿಗಳನ್ನು ಸರಿಸುತ್ತಾ ಹೊದಂತೆ ಅವಶೇಷಗಳು ಪತ್ತೆಯಾದ ಪ್ರದೇಶವಾಗಿದೆ "ಉಬಾರ್"
           ಒಮಾನ್ ದೇಶದ ಸ್ವಲಾಲ ಎಂಬ ಪ್ರದೇಶದಿಂದ 172 ಕಿ.ಮೀ ಮರುಭೂಮಿಯಲ್ಲಿ ಯಾತ್ರೆ ಕೈಗೊಂಡಾಗ ಉಬಾರ್ ಪ್ರದೇಶ ತಲುಪಬಹುದು. ಹೂದ್ ನೆಬಿಯವರ ಆದ್ ಸಮುದಾಯ ಜೀವಿತ ಪ್ರದೇಶವಾಗಿದೆ ಈ ಉಬಾರ್.
ಈ ಜನತೆಯ ಅವಶೇಷಗಳು ಮನೆಗಳು ಇಲ್ಲಿ ಕಾಣಬಹುದು.  ಅಲ್ಲಾಹನು ಅವನ ಕುರಾನಿನಲ್ಲಿ ಇವರ ಕುರಿತು ಈ ರೀತಿ ಹೇಳಿದ್ದಾರೆ.

ಅಧ್ಯಾಯ 11: ಹೂದ್, ಸೂಕ್ತ  50

ﻭَﺇِﻟَﻰٰ ﻋَﺎﺩٍ ﺃَﺧَﺎﻫُﻢْ ﻫُﻮﺩًا ۚ ﻗَﺎﻝَ ﻳَٰﻘَﻮْﻡِ ٱﻋْﺒُﺪُﻭا۟ ٱﻟﻠَّﻪَ ﻣَﺎ ﻟَﻜُﻢ ﻣِّﻦْ ﺇِﻟَٰﻪٍ ﻏَﻴْﺮُﻩُۥٓ ۖ ﺇِﻥْ ﺃَﻧﺘُﻢْ ﺇِﻻَّ ﻣُﻔْﺘَﺮُﻭﻥَ
ಆದ್ ಜನಾಂಗದ ಕಡೆಗೆ (ದೂತರಾಗಿ) ಅವರ ಸಹೋದರ ಹೂದ್ ಬಂದರು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ಯಾರೂ ದೇವರಿಲ್ಲ. ನೀವು ಕೇವಲ ಸುಳ್ಳುಗಳನ್ನು ರಚಿಸಿಕೊಂಡಿರುವಿರಿ.

      ಮೂರ್ತಿ ಆರಾಧನೆಯು ಹಾಗೂ ಸತ್ಯ ನಿಷೇಧ ಅಧಿಕಗೊಂಡಾಗ ಹೂದ್ ನೆಬಿ ಅವರಲ್ಲಿ ಮನವರಿಕೆ ಮಾಡಲೆತ್ನಿಸಿದರೂ ಅವರು ಕಿವಿಗೊಡದಾಗ, ಅಲ್ಲಾಹು ಹೂದ್ ನೆಬಿ ಹಾಗು ಸತ್ಯ ವಿಸ್ವಾಸಿಗಳನ್ನು ರಕ್ಷಿಸಿ ಆದ್ ಗೋತ್ರವನ್ನು ನಾಶಗೊಳಿಸಿದರು...  ಇದನ್ನು ಕೂಡ ಕುರಾನ್ ನಮಗೆ ತಿಳಿಸುತ್ತದೆ..

 ಅಧ್ಯಾಯ 69: ಅಲ್ ಹಾಕ್ಕಃ (ನೈಜ ಸಂಭವ), ಸೂಕ್ತ  6 ಮತ್ತು 7

ﻭَﺃَﻣَّﺎ ﻋَﺎﺩٌ ﻓَﺄُﻫْﻠِﻜُﻮا۟ ﺑِﺮِﻳﺢٍ ﺻَﺮْﺻَﺮٍ ﻋَﺎﺗِﻴَﺔٍ
ಆದ್‌ರನ್ನು ತೀವ್ರ ವೇಗದ ಬಿರುಗಾಳಿಯೊಂದರ ಮೂಲಕ ನಾಶ ಮಾಡಲಾಯಿತು.
ﺳَﺨَّﺮَﻫَﺎ ﻋَﻠَﻴْﻬِﻢْ ﺳَﺒْﻊَ ﻟَﻴَﺎﻝٍ ﻭَﺛَﻤَٰﻨِﻴَﺔَ ﺃَﻳَّﺎﻡٍ ﺣُﺴُﻮﻣًﺎ ﻓَﺘَﺮَﻯ ٱﻟْﻘَﻮْﻡَ ﻓِﻴﻬَﺎ ﺻَﺮْﻋَﻰٰ ﻛَﺄَﻧَّﻬُﻢْ ﺃَﻋْﺠَﺎﺯُ ﻧَﺨْﻞٍ ﺧَﺎﻭِﻳَﺔٍ

ಅದನ್ನು ಸತತ ಏಳು ರಾತ್ರಿ ಹಾಗೂ ಎಂಟು ದಿನಗಳ ಕಾಲ ಅವರ ಮೇಲೆ ಹೇರಲಾಯಿತು. ಮತ್ತು ಅಲ್ಲಿದ್ದವರೆಲ್ಲರೂ ಟೊಳ್ಳಾದ ಖರ್ಜೂರದ ಕಾಂಡಗಳೋ ಎಂಬಂತೆ ಸತ್ತು ಬಿದ್ದಿರುವುದು ನಿಮಗೆ ಕಾಣಿಸುತ್ತಿತ್ತು.

ಆಡಂಭರ ಜೀವನ ಹಣದ ವ್ಯಾಮೋಹ ಕಾಮಿಸಿ ಕಟ್ಟಡಗಳನ್ನು ಪೋಣಿಸುವ ಈ ಮನುಜ ರಾಶಿಗೆ ಈ ಚರಿತ್ರೆಗಳೇ ಪಾಠವಲ್ಲವೇ....

ಮುಂದುವರಿಯುವುದು......

- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

Comments

  1. ಹೂದ್ ನಬಿ ಮಖ್ ಬರ ಯಾವ ದೇಶದಲ್ಲಿದೆ

    ReplyDelete

Post a Comment

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ