ಭಾಗ 13

#ಚರಿತ್ರೆಯ_ಅರೇಬಿಯಾ.... ಭಾಗ -13  n.u.t

#ಝಲ್‌ಕರ್‌ನೈನ್_ಚಕ್ರವರ್ತಿ.

     ಯುರೋಪ್ ರಾಷ್ಟ್ರದ ಸೋವಿಯತ್ ಜೋರ್ಜ್ ದೇಶದ ರಾಜದಾನಿಯಾದ ತಬ್ಲೀಷ್ ಎಂಬಲ್ಲಿ, ಕಿ.ಪೂರ್ವ 600 ರಲ್ಲಿ ಝಲ್‌ಕರ್‌ನೈನ್ ಚಕ್ರವರ್ತಿ ಹಾಗೂ ಅವರ ಜನತೆಯು ಜೀವಿಸುತಿದ್ದರು.
  ಇವರ ಕಾಲದಲ್ಲಿ ನೂಹ್ ನೆಬಿಯವರ ಮಗನಾದ ಯಾಪಿಸ್ ಇವರ ಸಂತತಿಗಳಾಗಿದ್ದ ಯಹ್ಜೂಜ್ ಮಹ್ಜೂಜ್ ವಂಶಸ್ಥರೂ ವಾಸಿಸುತಿದ್ದರು .

       ತಬ್ಲೀಷ್ ನಿಂದ ದಾರಿಯಲ್ ಪ್ರದೇಶಕ್ಕೆ ಸಂಚರಿಸುವಾಗ ಸಿಗುವ ಬೈಹತ್ ಆಕಾರದ ಬೆಟ್ಟಗಳ ತಪ್ಪಲಲ್ಲಿ ಜೀವಿಸುತಿದ್ದ ಸಮೂಹವಾಗಿತ್ತು ಯಹ್ಜೂಜ್ ಮಹ್ಜೂಜ್.  ತೀರ ಅಸಂಸ್ಕೃತಿ ಹಾಗೂ ದರೋಡೆಕೋರರಾಗಿದ್ದರು ಇವರು. ಇವರು ದಾರಿಯಲ್ ಬೆಟ್ಟವನ್ನು ದಾಟಿ ಬಂದು ಕಾಕಸಸ್ ಎಂಬ ಪ್ರದೇಶದಲ್ಲಿ ದರೋಡೆ ನಡೆಸುತಿದ್ದರು.

     ಇವರ ದರೋಡೆಯ ಸಂಖ್ಯೆಯು ಹೆಚ್ಚಾಗತೊಡಗಿದಾಗ ಅವರಿಂದ ನಮ್ಮನ್ನು ರಕ್ಷಿಸುವಂತೆ ಜೋರ್ಜಿಯನ್ ದೇಶದ ಜನತೆ ಝಲ್‌ಕರ್‌ನೈನ್ ಚಕ್ರವರ್ತಿಯಲ್ಲಿ ಬೇಡಿಕೆ ಇಟ್ಟರು.

              ಆಗ ಝಲ್‌ಕರ್‌ನೈನ್ ಹೇಳಿದರು. ನೀವು ಜನ ಬಲದ ಮೂಲಕ ನನಗೆ ನೆರವಾಗಿರಿ. ನಾನು ನಿಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸುವೆನು. ಮತ್ತೆ  ನನಗೆ ಉಕ್ಕಿನ ಹಾಳೆಗಳನ್ನು ತಂದು ಕೊಡಿರಿ. ಹೀಗೆ, ಅವರು ಎರಡು ಪರ್ವತಗಳ ನಡುವಣ ಅಂತರವನ್ನು ಮುಚ್ಚಿದ ಬಳಿಕ, ತಾಮ್ರನ್ನುವನ್ನು ಚೆನ್ನಾಗಿ ಉರಿಸಿರಿ ಎಂದು ಆದೇಶಿಸಿದರು. ಕೊನೆಗೆ ಅವರು ಅದನ್ನು ಬೆಂಕಿಯಾಗಿಸಿದರು. ಆಗ ಝಲ್‌ಕರ್‌ನೈನ್  ಮತ್ತೆ ಹೇಳಿದರು ನನ್ನ ಬಳಿಗೆ ಕರಗಿದ ತಾಮ್ರವನ್ನು ತನ್ನಿರಿ, ನಾನು ಅದನ್ನು ಇದರ ಮೇಲೆ ಸುರಿಯುತ್ತೇನೆ’’ ಎಂದರು. ಹೀಗೆ ಬಲಾಡ್ಯ ಹಾಗೂ ಶಕ್ತಿಯುತ ತಡೆಗೋಡೆಯು ನಿರ್ಮಾನವಾಯಿತು.

      ಮತ್ತೆ ಝಲ್‌ಕರ್‌ನೈನ್ ಹೇಳಿದರು ಈ ಗೋಡೆಯನ್ನು ಒಡೆದು ಹಾಕಲೋ ಅಥವಾ ಕನ್ನ ಕೊರೆಯಲೋ ಯಾರಿಗೂ ಸಾಧ್ಯವಿಲ್ಲ ಎಂದರು.

       ಝಲ್‌ಕರ್‌ನೈನ್ ಹೇಳಿದರು. ಅಂತ್ಯದಿನಗಳಲ್ಲಿ ದೇವರ ಆದೇಶದಂತೆ ಒಂದು ದಿನ ಆ ಗೋಡೆಯನ್ನು ನೆಲಸಮಗೊಳಿಸಲಾಗುವುದು. ಆ ದಿನ ಆ ಜನಾಂಗದವರು ಎಲ್ಲಾ ಸ್ಥಳಗಳಲ್ಲೂ ಘರ್ಷನೆ ಸೃಷ್ಟಿಸುತ್ತಾರೆ. ಆ ದಿನವು ನರಕವು ಜನರ ಕಣ್ಣ ಮುಂದೆಯೇ ಬರಲಿದೆ.

ಈ ಚರಿತ್ರೆಯನ್ನು ಅಧ್ಯಾಯ 18: ಅಲ್ ಕಹಫ್ (ಗುಹೆ) ಅಧ್ಯಾಯದಲ್ಲಿ ಈ ಸಂಭವವನ್ನು ವಿವರಿಸಲಾಗಿದೆ.

- ಮುಂದುವರಿಯುವುದು.

- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

ಕಳೆದ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ..
http://nizamuddintabukuppinangady.blogspot.com/?m=1

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ