Posts

Showing posts from 2015

ನಮ್ಮೊಳಗೆ ಮರೆಯಾಗುತ್ತಿರುವ.  "ಅಕ್ಷರ ಸಂತ"  ಹಾಜಬ್ಬ ----------------------------

ನಮ್ಮೊಳಗೆ ಮರೆಯಾಗುತ್ತಿರುವ.  "ಅಕ್ಷರ ಸಂತ"  ಹಾಜಬ್ಬ ----------------------------                 ✒ N.U.T (ತಬೂಕ್)      ಅದೊಂದು ಪುಟ್ಟ ಊರು, ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ಸಮೀಪದ ಪುಟ್ಟ ಊರೇ ಹರೇಕಳ. ಅಲ್ಲಿ ಒಬ್ಬರು ಬೀದಿ ಬದಿ ವ್ಯಾಪರಸ್ಥರು, ಅವರ ಹೆಸರೇ ಹಾಜಬ್ಬ. ಸುಮಾರು ಅರುವತ್ತು ವರ್ಷ ಪ್ರಾಯದ ಈ ವ್ಯಕ್ತಿ ಬೆಳೆಗ್ಗೆ ಎದ್ದು ಬಸ್ಸು ಹತ್ತಿ ದೂರದ ಮಂಗಳೂರಿಗೆ ತೆರಳಿ, ಅಲ್ಲಿನ ಪರಿಸರದಲ್ಲಿ ಕಿತ್ತಳೆ ಮಾರುತ್ತಲೇ ಜೀವನ ಸಾಗಿಸಿದವರು.     ವಿದ್ಯಭ್ಯಾಸದ ಬಗ್ಗೆ ಅರಿವೇ ಇಲ್ಲದ ಇವರ ಆಡು ಬಾಷೆ ಬ್ಯಾರಿ ಬಿಟ್ಟರೆ ಬೇರೇನು ತಿಳಿದವರಲ್ಲ. ಊರಿನಲ್ಲಿ ತನ್ನ ಹಾಗೆ ಅಕ್ಷರ ಜ್ಞಾನವಿಲ್ಲದ ಮಕ್ಕಳು ಹೆಚ್ಚಾಗುದನ್ನು ಮನಗಂಡ ಈ ಬೀದಿ ಬದಿ ವ್ಯಾಪಾರಸ್ತ, ಕೈಗೊಂಡ ಆ ಮಹಾ ಯೋಜನೆಗೆ ಎಷ್ಟು ಅಭಿನಂದಿಸಿದರೂ ಸಾಲದು.    * ಹರೇಕಳ ಹಾಜಬ್ಬರ ಸಾಧನೆ:=        ಹರೇಕಳದ ಸಮೀಪ ಸ್ವಲ್ಪ ಕಾಲಿ ಪ್ರದೇಶದ ಬಗ್ಗೆ ವಿವರ ಅರೆತವರೇ ಈ ಹಾಜಬ್ಬ,  ಓರ್ವ ಕೇರಳದ ಹೆಸರಾಂತ ವ್ಯಕ್ತಿಯ ಬಳಿ ಸಹಾಯ ಯಾಚಿಸಿ ಅಂದಿನ 5000 ರೂ ಪಡೆದುಕೊಂಡರು. ತಾನು ಚಾಚಿದ ಮೊದಲ ಕೈಗೇ 5000 ರೂ ಸಿಕ್ಕಾಗ ಹಾಜಬ್ಬರ ಕನಸು ದುಪ್ಪಟ್ಟುಗೊಂಡಿತು. ತದನಂತರ ಮತ್ತೊಬ್ಬರು ಮಂಗಳೂರಿನ ಹೆಸರಾಂತ ವ್ಯಕ್ತಿಯ ...

🎋👮🏻 ಅವರೇ ನಿಜವಾದ ಸಿಪಾಯಿಗಳು 👮🏻🎋

🎋👮🏻 ಅವರೇ ನಿಜವಾದ ಸಿಪಾಯಿಗಳು 👮🏻🎋      ಅವರಿಗೂ ಇದೆ ಕುಟುಂಭ, ಮನೆ, ಮಕ್ಕಳು.    ಸಂಸಾರದೊಂದೊಂದಿಗೆ ನೂರಾರು ವರ್ಷ ಸುಖವಾದ ಜೀವನ ನಡೆಸಬೇಕೆಂಬ ಹಂಬಲವಿದೆ. ಅಲ್ಪ ಪುಡಿಗಾಸು ಮಾಡಿ ಊರಲ್ಲೊಂದು ಸಣ್ಣ  ಅಂಗಡಿ ಮಾಡಿ ಹೆಂಡತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕೆಂಬ ಹಂಬಲವಿದೆ. ಆದರೆ....  ಆದರೆ....      ಸಮಾಜದಲ್ಲಾಗುವ ಅನ್ಯಾಯ, ದೌರ್ಜನ್ಯ, ಕೋಮುವಾದ ಇದನೆಲ್ಲ ಮನಗಂಡು ಸುಮ್ಮನಾದರೆ ಅದೆಷ್ಟು ಬಡ ಕುಟುಂಬಗಳು ಬೀದಿಪಾಲಾಗುದು ಖಂಡಿತ, ಎಂದು ಮನಗಂಡವ ಸುಮ್ಮನಿರಲು ಸಾದ್ಯವೇ.....?    ಅನ್ಯಾಯದ ವಿರುದ್ಧ  ಹೋರಾಡಲು ಸಜ್ಜಾಗಿ ನಿಂತ ಸಿಪಾಯಿಗಳವರು.        ಅವರೇ ಪಿ.ಎಫ್.ಐ (p.f.i)    ಸುಮ್ಮನಿರುವವರನ್ನು ಆಡುಭಾಷೆಯಲ್ಲಿ ನಪುಂಸಕ ಎಂದು ಕರೆದರೆ ತಪ್ಪಾಗಲಾರದು....        ಈ ಭಾರತ ದೇಶದಲ್ಲಿ ಅನ್ಯಾಯದ ವಿರುದ್ದ ಧ್ವನಿಯೆತ್ತಿದರೆ ಅವನ ಅವನತಿ ಖಂಡಿತಾ. ಬಹುಶಃ ಇಂತಹಾ ಮನಸ್ಥಿತಿ ಇರುವ ವಿಶ್ವದ ಅತ್ಯಂತ ಭಯಾನಕ ಎರಡು ದೇಶಗಳೆಂದರೆ ಒಂದು ಭಾರತ ಮತ್ತೊಂದು ಇಸ್ರೇಲ್ ಎಂದರೆ ತಪ್ಪಾಗಲಾರದು.      ಭಾರತ ವಿಶ್ವಕ್ಕೆ ಮಾದರಿ ದೇಶ....  ಆದರೆ.., ಈ ದೇಶದಲ್ಲಿರುವ ಸ್ವಯಂಘೋಷಿತ ದೇಶ ಭಕ್ತರು ಮಾಡುತ್ತಿರುವ ಅನ್ಯಾಯ, ಹೀನಾಯ ಕೃತ್ಯ, ಭಾರತ ...

ತಪ್ಪದೇ ಓದಿ ಸತ್ಯ ಘಟನೆ.... ನೆರೆ ಮನೆಯವನ ಮೋಸದ ಪ್ರೀತಿಗೆ ಬಲಿಯಾದಲೇ ರಮ್ಯಾ...?

ತಪ್ಪದೇ ಓದಿ ಸತ್ಯ ಘಟನೆ.... ನೆರೆ ಮನೆಯವನ ಮೋಸದ ಪ್ರೀತಿಗೆ ಬಲಿಯಾದಲೇ ರಮ್ಯಾ...?           ಅದೊಂದು ಬಡ ಹಿಂದೂ ಕುಟುಂಭ. ಒಂದು ಹೆಣ್ಣು ಎರಡು ಗಂಡು ಮಕ್ಕಳೊಂದಿಗೆ ಸುಖವಾಗಿ ಜೀವಿಸುತಿದ್ದ ಶ್ರಮ ಜೀವಿಗಳು. ಉಪ್ಪಿನಂಗಡಿಯಿಂದ ನಮ್ಮ ಮನೆಗೆ ಸುಮಾರು ನಾಲ್ಕು ಕಿಲೋ ಮೀಟರ್ ದೂರವಿದೆ. ನಮ್ಮ ಮನೆಯ ಸಮೀಪ ಅವರು ವಾಸಿಸುತಿದ್ದರು. ಅವರ ತಂದೆ ದಿನಾಲು ಬೆಳಿಗ್ಗೆ ನಾಲ್ಕು ಘಂಟೆಗೆ ಕಾಲ್ನಡಿಗೆಯಲ್ಲೇ ನಾಲ್ಕು ಕಿ.ಮೀ ಕ್ರಮಿಸಿ ರಾತ್ರಿ ಎಂಟು ಘಂಟೆಗೆ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಕೆಲಸಕ್ಕೆ ತೆರಳುತ್ತಿದ್ದರು. ಉಪ್ಪಿನಂಗಡಿಯ ಹೆಸರಾಂತ ಹೋಟೇಲೊಂದರಲ್ಲಿ ಕೆಲಸ ಮಾಡುತಿದ್ದ ಅವರು ಸಿಕ್ಕ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ತನ್ನ ದೊಡ್ಡ ಮಗಳ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಉಳಿದಿಬ್ಬರು ಗಂಡು ಮಕ್ಕಳು ಇನ್ನು ಕಾಲೇಜು ವ್ಯಾಸಾಂಗ ಮಾಡುತ್ತಿದ್ದರು.          ತಾಯಿ ಕೂಡಾ ಶ್ರಮ ಜೀವಿ.  ನೆರೆ ಹೊರೆಯವರೊಂದಿಗೆ ಉತ್ತಮ ಭಾಂಧವ್ಯ, ವಿನಯತೆ, ಮತ್ತೆ ನಾವು ಅನ್ಯ ಧರ್ಮದವರಾಗಿದ್ದರೂ ಸದಾ ಪ್ರೀತಿಯಿಂದಲೇ ಮಾತಾಡಿಸುತಿದ್ದರು.        ದೊಡ್ಡವಳಾದ ಹೆಣ್ಣು ಮಗಳು ರಮ್ಯಾ(ಹೆಸರು ಬದಲಿಸಲಾಗಿದೆ) ದ್ವಿತಿಯ ಪಿ.ಯು.ಸಿ ಮುಗಿಸಿ ಮನೆಯಲ್ಲಿದ್ದಳು. ಮದುವೆ ಪ್ರಾಯ ಆದ್ದರಿಂದ ತಂದೆ ತಾಯಿಯ ಶ್ರಮದಿಂದ ಒಂದು ಹುಡುಗನ ಕಂಡು...

ಹಿಂದುತ್ವವಾದಿಗಳ ನಾಟಕಕ್ಕೆ ಬಲಿಯಾಗುತ್ತಿರುವ ಭಾರತೀಯರು......

ಹಿಂದುತ್ವವಾದಿಗಳ ನಾಟಕಕ್ಕೆ ಬಲಿಯಾಗುತ್ತಿರುವ ಭಾರತೀಯರು......      ಇದೇನೋ ವಿಚಿತ್ರವಾಗಿದೆ. ದೂರದ ಅಫ್ಘಾನಿಸ್ಥಾನ, ಪಾಕಿಸ್ತಾನ, ಇಸ್ರೇಲ್, ಸಿರಿಯಾದಂತಹಾ ದೇಶಗಳಲ್ಲಿ ಮನಷ್ಯರನ್ನು ಮಾನವೀತೆ ಇಲ್ಲದೆ ನಡು ಬೀದಿಗಳಲ್ಲಿ ಕೊಲ್ಲುವ ಚಿತ್ರಗಳು ಕಂಡು ಬೆಚ್ಚಿ ಬೀಳುತಿದ್ದ ನಾವಿಂದು ಈ ಒಂದು ದಸ್ಥಿತಿಯನ್ನು ಇದೀಗ ಭಾರತ ದೇಶದಲ್ಲಿ ಕಾಣಲು ಸಾಧ್ಯವಾಗುತ್ತಿದೆ.          ಹೌದು ಇದಕ್ಕೆಲ್ಲ ಕಾರಣ ಸ್ವಧರ್ಮ, ರಾಮರಾಜ್ಯ, ಕೇಸರೀಕರಣ ಎಂಬಿತ್ಯಾದಿ ಅಜೆಂಡಗಳು. ಕೆಲ ಹಿಂದುತ್ವವಾದಿಗಳ ವಿಕೃತ ಮನಸ್ಸಿನ ಪರಿಯಾಗಿ ಮನುಷ್ಯನನ್ನು ಕೊಲ್ಲಲು ಹಿಂಜರಿಯದ ಮನುಷ್ಯರ ಮಧ್ಯೆ ಉಳಿದವರ ಬಾಳು ಅಲ್ಲೋಲ ಕಲ್ಲೋಲವಾಗುತ್ತಿದೆ.        ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಹಿಂದುತ್ವವಾದಿಗಳ ಅಜೆಂಡಾಗಳನ್ನು ಸಾರ್ಥಕಗೊಳಿಸುವ ಸಲುವಾಗಿ ವ್ಯವಸ್ಥಿತ ಶಡ್ಯಂತ್ರದಂತೆ, ಲೌ ಜಿಹಾದ್, ಗೊ ಮಾತಾ, ದೇಶ ಭಕ್ತಿ, ಭಯೋತ್ಪಾದನೆ ಮುಂತಾದ ಆರೋಪಗಳನ್ನು  ಮುಸ್ಲಿಮರ ಮೇಲೆ ಹಾಕಿ ದೌರ್ಜನ್ಯವೆಸಗಿ ಸಮಾಜದ ಮುಂದೆ ಅಲ್ಪಸಂಖ್ಯಾತರು ಕೆಟ್ಟವರೆಂದು ಬಿಂಬಿಸುತ್ತಾ ಬಂದಿದೆ.       ತನ್ನ ವ್ಯವಸ್ಥಿತ ಶಡ್ಯಂತ್ರಗಳು ಒಂದೊಂದೇ ಬಯಲಾಗುತ್ತಿದ್ದರೂ ಅದನ್ನು ಮುಚ್ಚಿಹಾಕಲು ಹರಸಾಹಸ ಪಡುತ್ತಿದ್ದು ತನ್ನದೇ ಚೇಳಾಗಳಾದ, ಕೆಲ ಮಾಧ್ಯಮದವರು ಹಾಗು 60% ಪೋಲೀಸರು ಇದಕ್ಕೆಲ್ಲ ಸಂಪ...

ಎಚ್ಚೆತ್ತುಕೊಳ್ಳೊಣ ನಮ್ಮನ್ನು ದಮನಿಸುವ ಮೊದಲು.....

ಎಚ್ಚೆತ್ತುಕೊಳ್ಳೊಣ ನಮ್ಮನ್ನು ದಮನಿಸುವ ಮೊದಲು.....       ಏನೆಲ್ಲಾ ಶಡ್ಯಂತ್ರಗಳು, ಏನೆಲ್ಲಾ ಆರೋಪಗಳು ಜೊತೆಗೆ ಒಂದಿಷ್ಟು ಒತ್ತಾಯಪೂರ್ವ ಯೋಜನೆಗಳು...  ಒಟ್ಟಾರೆಯಾಗಿ ಮುಸಲ್ಮಾನರ ಅದಪತನವನ್ನು ತುದಿಗಳಲ್ಲಿ ನಿಂತು ಕಾಯುತ್ತಿರುವ ಕೆಲ ಹಿಂಧುತ್ವವಾದಿಗಳೆದುರು ಇನ್ನೂ ನಾವು ಎಚ್ಚರಗೊಳ್ಳದಿದ್ದರೆ ನಮ್ಮನ್ನು ಮಟ್ಟಹಾಕಳು ನಾವೇ ಧಾರಿಮಾಡಿಕೊಟ್ಟಂಗಾದಿತು.....         ದೇಶದಲ್ಲಿ ಇಷ್ಟೆಲ್ಲಾ ಮಾದ್ಯಮಗಳಲ್ಲಿ ಹಿಂದುತ್ವವಾದಿಗಳ ಬಣ್ಣ ಬಯಲಾಗುತ್ತಿದ್ದರೂ, ಕೇವಲ ಸಾಮಾಜಿಕತಾಣಗಳ ಮೂಲಕ ಬೊಬ್ಬೆಹೊಡೆಯುವ ನಾವು, ನಿಜವಾಗಿ ಅವರ ಹಣೆಬರಹವನ್ನು ಬಿಚ್ಚಿಡಬೇಕಾದದ್ದು, ಮನೆಯಲ್ಲಿ ಮೂಲ ಸೌಕರ್ಯದ ಕೊರತೆ ಇರುವ ಬಡ ಹಿಂದೂ ಕುಟುಂಬಗಳ ಮನೆ ಮತ್ತು ಮನದಲ್ಲಿ.      ಹೌದು ಯಾಕೆಂದರೆ..., ಒಂದುರೀತಿಯಾಗಿ ಗಲಭೆಗಳಿಗೆ, ದೇಶ ಭಕ್ತಿ ಎಂದು ಸುಳ್ಳು ಇತಿಹಾಸ ಸೃಷ್ಟಿಸಿ ಅವರ ಮನ ಪರಿವರ್ತನೆಗೊಳಿಸಿ ಅಮಾಯಕರಲ್ಲಿ ಮುಸ್ಲಿಮರು ನಮ್ಮ ಅಜೇಯ ಶತ್ರುಗಳು ಎಂದು ಬಿಂಬಿಸಿ ಕೋಮುಗಲಭೆಗೆ ಪ್ರಚೋದಿಸುತ್ತಿದ್ದಾರೆ.           ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಗಲಭೆಗಳಿಗೆ ಇದೇ ಕಾರಣ.  ಅಲ್ಲಿ ದೂರದರ್ಶನವಿಲ್ಲ ಬದಲಾಗಿ ಆರೆಸ್ಸೆಸ್ ಶಾಖೆಗಳಿವೆ. ಇದುವೇ ದೊಡ್ಡ ವಿಪರ್ಯಾಸ.  ಹಿಂದುತ್ವ ವಾದಿಗಳ ನಾಲ್ಕು ಮಸಾಲೆಭರಿತ ಮಾತುಗಳಿಗೆ ಮರುಳಾ...

ಯಾರಿಗಯ್ಯ ಈ ಬಾಳು..😢😢

ಯಾರಿಗಯ್ಯ ಈ ಬಾಳು..😢😢 ಬರಿಗೈಯಲಿ ಬಂದವರು ನಾವು ಕಾಲಿ ಕೈಯಲಿ ಹೋಗುವರೇನು ಮಧ್ಯದಿ ನಮಗೆ ವ್ಯಾಮೋಹ ಭೂಲೋಕ ನಶ್ವರವೆಂದರಿತೂ...!! ಹಣದಿ ಆಸೆಪಟ್ಟವರು ನಾವು ಹೆಣವಾಗುದು ಮರೆತವರೇನು ಕಾರು ಬಂಗಲೆ ಸಾಲು ಸಾಲು ಬಂಗಾರದ ಬೆಟ್ಟ ಕಡಿಮೆಯೇನು...!! ಊರಿಗೆ ನಾನೊಬ್ಬ ಮುಂದಾಳು ಹೆಸರು, ಪ್ರಶಸ್ತಿ ನಮಗೆ ಸೀಮಿತ ನಮ್ಮಷ್ಟಿಲ್ಲ ಅವರೆಲ್ಲ ಎನ್ನುವ ನಮಗೂ ಇದೆ ಓ ಮಾನವ... ಆರಡಿ ಮಣ್ಣಿನ ಅರಮನೆ...!! ಲಾಭ ನಷ್ಟದ ಭೂಮಿಯೊಳಗೆ ಸೋಲುತ್ತಿದ್ದರೂ ಹಿಂಜರಿಯದಿರು ಆ ದಿನದ ವಿಜಯಕ್ಕೆ ಮನ್ನುಡಿ ಬರೆಯುತ್ತಲೇ ಇರು ನಿನ್ನ ಧರ್ಮ ನಿಷ್ಠೆಯ ಮೂಲಕ...!! - ನಿಝಾಮುದ್ದೀನ್.ಉಪ್ಪಿನಂಗಡಿ.ತಬೂಕ್

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?       ಪ್ರತಿಭಟನೆ ಅಂದಾಕ್ಷಣ ತಮಗಾದ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸಿ ಕೊಡುಲು ಒಟ್ಟು ಸೇರುವ ಜನ ಸಮೂಹವನ್ನು ಪ್ರಿಭಟನೆ ಎನ್ನುತಿದ್ದರು.       ಕೆಲವೋಂದು ಪ್ರತಿಭಟನೆಗಳು ವಿಕೋಪಕ್ಕೆ ತಿರುಗಿ ಮೂರು ದಿನ ಕಳೆದರೂ ಪ್ರತಿಭಟನೆಯ ಕಾವು ಕಡಿಮೆಯಾಗಿರುದಿಲ್ಲ.          ಕೆಲವೊಂದು ಯೋಜನೆಗಳನ್ನು ಸರ್ಕಾರ ಸ್ವಇಚ್ಚೆಯಿಂದ ನಡೆಸುದು, ಆ ಪ್ರದೇಶದ ಜನರು ಒಗ್ಗೂಡಿ ಹೋರಾಡುದು ಸರ್ವೆ ಸಾಮಾನ್ಯ.        ಕೆಲವು ಪ್ರತಿಭಟನೆಗಳು ಇನ್ನೊಂದು ಕೋಮಿನ ಮೇಲೆ ಅಪವಾದ ಹಾಕಿ ಪ್ರತಿಭಟನೆ ಮಾಡಿ ಜನರ ಸಿಳ್ಳೆ ಪಡೆಯಲಷ್ಟೇ ಯಸಶ್ವಿಯಾಗುದೇ ಹೊರತು ಬೇರೇನು ಪ್ರಯೋಜನವಿರೋದಿಲ್ಲ.        ಇನ್ನು ಎಷ್ಟೇ ಹೆದ್ದಾರಿ ಬಂದ್ ಅಥವಾ ರಾಜ್ಯ ಬಂದ್ ಅಥವಾ ಭಾರತ್ ಬಂದ್ ನಡೆಸಿದರೂ ನಮ್ಮ ಗುರಿ, ಪ್ರತಿಭಟನೆಯ ರೀತಿ, ಅದು ಸಾದ್ಯವೇ ಅನ್ನುವ ನಮ್ಮ ಕಾರ್ಯವೈಕರಿಯಿಂದ ತೀರ್ಮಾನಗೊಳ್ಳಬೇಕೇ ಹೊರತು, ನೂರಾರು ಮಂದಿ ಒಂದೆಡೆ ಸೇರಿದಾಗ ಯಾರು ನ್ಯಾಯಕೊಡಲು ಮುಂದೆ ಬರೋದಿಲ್ಲ.        ಪ್ರತಿಭಟನೆಯ ಹೆಸರಿನಲ್ಲಿ ಬೀದಿಗಿಳಿದು ಹೋರಾಟನಡೆಸಿ ಸಾರ್ವಜನಿಕರ ಆಸ್ತಿ ಪಾಸ್ತಿ ಸೊತ್ತು ನಷ್ಟಗೊಳಿಸಿ ಒಂದು ರೀತಿಯ ಸುಖಪಡೆಯುವನೇ ಜೊ...

ಜಗದೊಡಯನೆ.....

ಜಗದೊಡಯನೆ..... ಜಗದೊಳಗಿನ ತಾಂಡವು ಇದು ನಿನ್ನ ಲೀಲೆಯು ಕರುಣೆ ತೋರು ಯಾ ರಬ್ಬೇ ಈ ಪಾಪಿ ಜನಕೋಟಿಯ ಮೇಲೆ...!! ಏನೂ ಅರಿಯದವರು ನಾವು ಮೊತ್ತ ಅರಿಯುವವನು ನೀನು ನೀನಲ್ಲದೆ ಇಲಾಹಿಲ್ಲ ನಮ್ಮ ನೋವ ಕೊನೆಗಾಣಿಸು...!! ಇಷ್ಟ ಕಷ್ಟ ಸೃಷ್ಠಿಸಿದವನೇ ಬೇಕೆನ್ನುವ ಹಕ್ಕು ನಮಗಿಲ್ಲ ಆದರೂ ನಿನ್ನ ಕರುಣೆಯ ನೋಟ ಈ ಜನಕೋಟಿಯ ಮೇಲಿರಲಿ...!! ಪಾಪ ಪುಣ್ಯವ ತೂಗಿದ ಮೇಲೆ ಪಾಪವ ಮನ್ನಿಸು ಯಾ ದೇವಾ ಪಾಪಿ ನಾನು, ದೋಶಿ ನಾನು ಕೇಳು ನಮ್ಮ ಮನಸೀನ ನೋವಾ...!! - ನಿಝಾಮುದ್ದೀನ್, ಉಪ್ಪಿನಂಗಡಿ, ತಬೂಕ್

ಆಧುನಿಕ ತಂತ್ರಜ್ಞಾನ ಮತ್ತು ವಿವಾದಗಳು.

ಆಧುನಿಕ ತಂತ್ರಜ್ಞಾನ ಮತ್ತು ವಿವಾದಗಳು.          ವ್ರತ್ತಾಕಾರದ ಈ ಭೂ ಮಂಡಲದೊಳಗೆ ಏನೆಲ್ಲಾ ವಿವಾದಗಳು, ಅದರೊಂದಿಗೆ ವಿಮರ್ಶೆಗಳು.  ತಿಳಿಯದಾದದ್ದು ಒಂದೇ ನಾವೆಲ್ಲ ವಿವಾದಗಳಿಂದ ಮುಕ್ತಗೊಳ್ಳುದು ಯಾವಾಗ...?         ಹೌದು , ಎಗ್ಗಿಲ್ಲದೆ ನಡೆಯುತ್ತಿರುವ ವಿವಾದಗಳಿಗೆ ತುಪ್ಪ ಸುರಿಯುತ್ತಿರುದು ನಮ್ಮ ದಿನಬಳಕೆಯ ಆಧುನಿಕ ತಂತ್ರಜ್ಞಾನ.   ಇದನ್ನು ವಿರೋದಿಸಲು ಯಾರಿಂದಲೂ ಸಾಧ್ಯವಿಲ್ಲ.   ಒಂದು ಕಾಲದಲ್ಲಿ ಮೊಬೈಲ್ ಕಂಪ್ಯೂಟರ್ ಹಾಗು ಇತರೇ ಎಲೆಕ್ಟ್ರಾನಿಕ್ ಉಪಕರಣಗಳು ಇಲ್ಲದ ಸಮಯದಲ್ಲಿದ್ದ ಸೌಹಾರ್ದತೆ, ಮಾನವೀಯತೆ, ಸಂಬಂಧ ಇದನ್ನೆಲ್ಲ ನಮ್ಮ ಹಿರಿಯರು ನಮ್ಮ ಬಳಿ ಹೇಳುವಾಗ ನಮಗಾಗುವ ರೋಮಾಂಚನವೇ ಬೇರೆ. ನನಗೆ ತಳಿಯದ ವಿಷಯವೇನೆಂದರೆ, ಆಗಿನ ಕಾಲದಲ್ಲಿದ್ದ ಆ ಜೀವನವನ್ನು, ಈಗಿನ ಕಾಲದಲ್ಲಿ  ಜೀವಿಸಲಾಗುದಿಲ್ಲವೇ....?          ಆಗಬಹುದು ಆದರೆ ನಮ್ಮ ಮನಸ್ಥಿತಿ ನಮ್ಮ ನಿರ್ಧಾರ ಮತ್ತು ನಮ್ಮ  ಕೈಯಲ್ಲಿರುವ ಮೊಬೈಲ್ ಬದಲಾಗಬೇಕು.            ಇತ್ತೀಚೆಗೆ ನಡೆಯುವ ಕೆಲವು ಸಣ್ಣ ಪುಟ್ಟ ವಿವಾದಗಳು ಅದನ್ನು ಆನೆಯಷ್ಟೆತ್ತರದಲ್ಲಿ ತೋರಿಸುವ ಮಾಧ್ಯಮಗಳು ಅದನ್ನು ಫೋಟೋ ಅಥವಾ ವಿಡಿಯೋ ಮಾಡಿ ಕ್ಷಣಾರ್ದದಲ್ಲಿ ಲೋಕಾದ್ಯಂತ ತಲುಪಿಸುವ ವಾಟ್ಸಾಪ್ ಅಥವಾ ಪೇಸ್ಬುಕ್ ನಂಥಹಾ ಆದುನಿ...

ವಾಸ್ತವವೇ ಸತ್ಯ , ನಿತ್ಯ....

ವಾಸ್ತವವೇ ಸತ್ಯ , ನಿತ್ಯ.... *** ಕೊಲ್ಲುವವನಿಗೆ ತಿಳಿಯದಾಗಿದೆ..       ನಾನು ಯಾರನ್ನು ಕೊಲ್ಲುತ್ತಿರುವೆನೆಂದು, ಸತ್ತು ಹೆಣವಾಗಿ ಬೀಳುವವನಿಗೆ ತಿಳಿದಿಲ್ಲ..     ನನ್ನ ಯಾರು ಯಾಕೆ ಕೊಂದರೆಂದು.. ತಾನು ಕಷ್ಟ...

ವರದಕ್ಷಿಣೆಗಿಂತಲೂ ಕ್ರೂರವಾಗುತ್ತಿರುವ       ವರದಕ್ಷಿಣೆ ರಹಿತ ವಿವಾಹವೆಂಬ ನಾಮಕರನ ...

ವರದಕ್ಷಿಣೆಗಿಂತಲೂ ಕ್ರೂರವಾಗುತ್ತಿರುವ       ವರದಕ್ಷಿಣೆ ರಹಿತ ವಿವಾಹವೆಂಬ ನಾಮಕರನ ...        ಕೆಲ ಊರಲ್ಲಿ ಇತ್ತೀಚೆಗೆ ಕೆಲವರು ಹೇಳುತ್ತಾರೆ ಹುಡುಗಿಯ ಬಾಗ್ಯ ನೊಡಿ, ಹುಡುಗನಿಗೆ ಕಾಸಿ ಬೇಡವಂತೆ 35 ಪವ...

ಹೆಣ್ಮಕ್ಕಳ ಕತೆ , ವ್ಯತೆ...

ಹೆಣ್ಮಕ್ಕಳ ಕತೆ , ವ್ಯತೆ.. ಎತ್ತ ಕಡೆ ಈ ಸಮುದಾಯ ಎತ್ತ ಸಾಗುತ್ತಿದೆ ಈ ಯುವ ಸಮುದಾಯ ನಮ್ಮ ಸಮುದಾಯದ ಹೆಣ್ಣುಮಕ್ಕಳಲ, ಕಥೆ, ವ್ಯತೆ ಯಾರೊಡೆ ಹಂಚಲಿ .....ನಾ.. ಸಮುದಾಯದ ಹೆಣ್ಣು ಮಕ್ಕಳ ಮೊಸದ, ಪ್ರೀತಿಯ ನಶೆ ಏರಿಸಿ , ತನ್ನ ಕಾಮವ, ತೀರಿಸುವವರೊಡ ನಾ ಏನು ಹೇಲಳಿ ನರಗದ ಬಯವಿಲ್ವೇ ಏನೆನ್ನಲಿ....ನಾ.. ಕಾಲೇಜು ಕಲಿತೊಡ ಹೆಣ್ಣೊಬ್ಬಲು ಮನೆ ಬೆಳಗ್ಯಾಲು ಎಂದೆ..ನಾ... ಕಾಲೇಜಿನ ಆ ಪುಂಡ ಯವ ಕಾಮುಕರ ಕ್ರತ್ಯಕೆ ಬಲಿಯಾದರಾ ನಮ್ಮ ಸಹೊದರಿಯರು.... ಸ್ವಲ್ಲ ಬುದ್ದಿ ಗಿದ್ದಿ ಹೇಳಬೇಕಾದೊರು, ಕಂಡು ಕಾಣದಂಗೆ ನಟಿಸ್ಯಾರ.. ನಂ ಗುರುವರ್ಯರ ಕತೆ ಹೇಳಂಗಿಲ್ಲ ನಮ್ ಸಮಸ್ಯೆ ಅಗಾರವಾಗಿದಯ್ಯ.. ಹೆಣ್ಣು ಮಕ್ಕಳು ಮೊಬೈಲ್ ಮ್ಯಾಲ, ಹೆಚ್ಚು ಒಲವು ತೊರಿದಾಗ.. ಮೊಬೈಲ್ ಕೈಗಿರಿಸುವ ಅಣ್ ತಮ್ಮದಿರು , ಸ್ವಲ್ಪ ಹುಸಾರು ನಮ್ ಹೆಣ್ಣುಮಕ್ಕಳ ಮ್ಯಾಲ...  .                      ನಿಝಾಮುದ್ದೀನ್                       ಉಪ್ಪಿನಂಗಡಿ , ತಬೂಕ್
ಕಥೆಯು ಜಿವನವೇ..... ಕಥೆಯು ಜಿವನವೇ ಅಲ್ಲ ಜೀವನವೆಂಬುದು ಒಂದು ಕಥೆಯೇ.. ಜೀವನದಲ್ಲಿ ಸಾವಿದೆಯೇ ಅಲ್ಲ ಸಾವಿನಲ್ಲಿ ಒಂದು ಜೀವನವೆದೆಯೇ.. ಹಣ ನಮ್ಮನ್ನು ದುಡಿಸುದೇ ಅಲ್ಲ ದುಡಿಮೆಗೆ ಹಣ ಸಿಗುತ್ತಿದೆಯೇ... ಸಾಗರಕ್ಕೆ ದಡವಿಲ್ಲವೇ ಅಲ್ಲ ದಡವಿದ್ದೂ ನಂಬಿಸುತಿದ್ದಾರೆಯೇ... ಇಂದಿನ ಕೂನೆ ನಾಳೆಯೇ ಅಲ್ಲ  ನಾಳೆಯ ಆರಂಬ ಇಂದಿನ ಕೊನೆಯೇ.. ಸಂಶಯ ಹುಟ್ಟುತ್ತಿದೆಯೇ ಅಲ್ಲ ಕೊನೆಯೆಲ್ಲದ ಸಂಶಯ ಅಡಗಿದೆಯೇ..                 ನಿಝಾಮುದ್ದೀನ್                  ಉಪ್ಪಿನಂಗಡಿ , ತಬೂಕ್
ಜನರ ಜನಗಣತಿ.  . . ....!! ಜನರ ಅಲೆಯುವ ಜನಗಣತಿ ಆಗಿದೆ ಕೆಲ ಜನರಿಗೆ ಸಂಗಾತಿ ಗೊತ್ತಾಗುತಿಲ್ಲ ಯಾರಿಗೂ ಮಾಹಿತಿ ಒಂದು ತಿಳಿಯದೆ ಆದೆ ನಾ ಪಜೀತಿ.... ಸಮುದಾಯಾವುದೆಂದು ಗೊಂದಲಗೊಂಡೆ ಬ್ಯಾರಿ ಸಮುದಾಯದ ಮರೆತುಬಂದೆ ಸುನ್ನಿಯೆಂದು ನಾನು ದಾಕಲಿಸಿಕೊಂಡೆ ಸರ್ಕಾರದ ಸವಲತ್ತುಗಳು ಕಳೆದುಕೊಂಡೆ.... ಸುನ್ನಿ, ಸಲಪೀ, ಜಮಾಅತ್ ಎಂದು ತೊರಿಸಿ ತಮ್ಮ ಅಸ್ತಿತ್ವ ಉಳಿಸಲೆಂದು ಸರ್ಕಾರಕ್ಕೆ ನಿನ್ನ ಲೆಕ್ಕ ಕೊಟ್ಟು  ಏನು ಪಡೆಯುತ್ತೀರಿ ಎಂದು ಸ್ವಲ್ಪ ತೊರಿಸಿ... ಮುಸ್ಲಿಮರೆಲ್ಲ ನಾವು ಎನ್ನುವ ಬದಲು ಪಾರ್ಟಿಯಾಗಿ ವಿಂಗಡೆಮಾಡಿ  ನಾವು ಸರ್ಕಾರ ನಮ್ಮ ಏಳಿಗೆಗೆ ಜನಗಣತಿ ಮಾಡುದು ಮರೆತು ಸರ್ಕಾರಕ್ಕೆ ನಮ್ಮ ವರಮಾನ ಹೆಚ್ಚಿಸಲು ಹೊರಟಿರುವೆವು ನಾವು.....  ನಮ್ಮ ಏಳಿಗೆಯ ಮೊದಲು , ನನ್ನ ಏಳಿಗೆ ಯಾವಾಗ                  ನಿಝಾಮುದ್ದೀನ್                  ಉಪ್ಪಿನಂಗಡಿ , ತಬೂಕ್
http://nizamuddintabukuppinangady.blogspot.com/?m=1
*  * ಆಲೌಟಾದರೆ * * ಮೊನ್ನಯ ತನಕ ಭಾರತ ತಂಡದ ವಿರುದ್ಧ ಆಡಿದ ಎಲ್ಲ ತಂಡದವರೂ ಆಲೌಟಾಗಿ ಮನೆ ಕಡೆ ಹೊರಟರು. ಭಾರತೀಯರೆಲ್ಲ ನಕ್ಕರು . ಬಾರತ ತಂಡ ಮಾತ್ರ ಹಾಯಾಗಿತ್ತು.. . ಇವತ್ತು ಭಾರತ ತಂಡ ಸೆಮಿಫೈನಲ್ನಲ್ಲಿ  ಆಲೌಟಾಗಿ   ಮನೆ ಕಡೆ ಹೊರಟರು  . . ಆಸ್ಟ್ರೇಲಿಯದ ಜನತೆ ನಕ್ಕರು.. . ಆಸ್ಟ್ರೇಲಿಯ ತಂಡ ಮಾತ್ರ ಹಾಯಾಗಿತ್ತು.. ........... ಜೀವನದಲ್ಲೂ ಅದೇ ಕಣ್ರಿ.. ಇವತ್ತು ನಾವು ಆಸ್ತಿ , ಅಂತಸ್ತು , ಹಣ ಕೂಡಿಟ್ಟು ಜಂಬಕೊಚ್ಚಿ ಬಡವರೇದುರು ಅಹಂಕಾರದಿಂದ ಮುನ್ನುಗ್ಗುವೆವು.. .. ದೇವರು ಇಚ್ಛಿಸಿದರೆ, ಅದೇ ಬಡವನು ಕೂಡ ಮುಂದೊಂದು ದಿನ ಹಣ , ಸಂಪತ್ತು ಎಲ್ಲವೂ ಸಂಪಾದಿಸುವನು .. ************* ಒಂದು ಮಾತು ಏನೇ ಇದ್ದರು ಅದು ಬೂಲಕಕ್ಕೆ ಶಾಶ್ವತ .. ಅಂತ್ಯದಿನದಲ್ಲ್ಲಿ ಬಾರತ ತಂಡದ ತರ ಜಯ ಗಲಿಸಿದವನು , ಸೊತವನು ಆಲೌಟಾಗಿ ಮನೆಕಡೆ ಹೊರಟುಹೊಗೊತರ ಬೂಮಿ ಬಿಟ್ಟು ಹೊರಟು ಹೊಗಲೇಬೇಕು.. *******                         ನಿಝಾಮುದ್ದೀನ್                     ಉಪ್ಪಿನಂಗಡಿ , ತಬೂಕ್
***  # ವರ(ನಿಗೆ)ದಕ್ಷಿಣೆ #  ***** ಕೆಲ ದಿನಗಳಿಂದ ನಾನು ವರದಕ್ಷಿಣೆಯ ವಿರುದ್ಧ ಆಂದೋಲನವೆಂಬಂತೆ ಕಲ ಪೊಸ್ಟ್ಗಳನ್ನು ವಾಟ್ಸಪ್ಪಲ್ಲಿ ಕಂಡೆ.. ಬಹಳಾ ಕುಷಿಯಾಯಿತು... ಕುಷಿಗಿಂತ ಹೆಚ್ಚು ಬೇಸರವಾಯಿತು... ಯಾಕೆಂದರೆ.. ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಹರಾಂ ಆಗಿದೆ , ಮತ್ತೂ 1450  ವರ್ಷಗಳ ಹಿಂದೆ ಬಂದ ನಮ್ಮ ಅಂತ್ಯ ಪ್ರವಾದಿ ಮೊಹಮ್ಮದ್ ಮುಸ್ತಪಾ ( ಸ.ಅ ) ರವರು ಕಲಿಸಿಕೊಟ್ಟ ಹಾಗೆ ವರದಕ್ಷಿಣೆ ವಿರುದ್ಧವಾದ ಮಾತು ಅದೆಷ್ಟು ಬಾರಿ ಬಾರಿ ಮನವಿ ಮಾಡಿ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ . ಅಂದರೆ ನಾವೇನು ಆ ವಿಷಯದಲ್ಲಿ ಅಷ್ಟೊಂದು ಗಂಬೀರತೆ ವಹಿಸಿಲ್ಲವೆಂಬಂತಾಗಿದೆ. ಅದೆಷ್ಟು ವರದಕ್ಷಿಣೆ ವಿರೊದಿ ಚಳುವಳಿ ನಡೆದವು , ನಾಟಕ ರಚನೆಯಾದವು , ಕತೆ ಕಾದಂಬರಿ ಬರೆದರು , ಚಲನಚಿತ್ರ ರಚನೆಯಾದವು ಆದರೂ ಆ ವರದಕ್ಷಿಣೆಯ ಚಾಳಿ ಬಿಡಿಸಲು ಹಗಳಿರುಳು ಹೊರಾಡುವವರು ತಲೆ ಮೇಲೆ ಕೈ ಇಟ್ಟು ಆಲೊಚಿತಿರುವರು . ಗೆಳೆಯರೇ ನಾವು ಬದಲಾಗೊನ        ವರದಕ್ಷಿಣೆ ತನಿಂದ ತಾನೇ ಮಾಯವಾಗಲಿದೆ.. * ವರದಕ್ಷಿಣೆ ಪಡೆದ ಮದುವೆ ದಿಕ್ಕಾರಿಸಿ, * ವರದಕ್ಷಿಣೆ ಪಡೆಯುವ ವರನೊಂದಿಗೆ ಗೆಳೆತನ ಸಂಬಂಧ ಕಡಿತಗೊಳಿಸಿ, * ವರದಕ್ಷಿಣೆ ಪಡೆದ ವರನಿಗೆ ಸಾಲ ಕೊಡಬೇಡಿ, * ವರದಕ್ಷಿಣೆ ಪಡೆದ ಮದುವೆಮನೆಯ ಕೆಲಸಕ್ಕೆ ಹೊಗಬೇಡಿ * ವರದಕ್ಷಿಣೆ ಪಡೆದ ಮದುವೆಗೆ ತಮ್ಮ ವಾಹನ ಬಾಡಿಗೆ ನಿಡದಿರಿ, * ವರದಕ್ಷಿಣೆ ಪಡೆದ ...
🇯🇴🇮🇷🇸🇦🇹🇦🇪🇸🇾🇷🇨🇲🇨🇮 ಯೆಮನ್ ದೇಶದಲ್ಲಿ ಏನು ನಡೆಯುತ್ತಿದೆ..? ....... ಕಲಹ ನಡೆಯಲೂ ಕಾರನವೇನು..? ಈಕೆಲಗಿನ ಲೇಖನ ಓದಿ... ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸಾಮಾನ್ಯವಾದರೂ ಸದ್ಯ ಯೆಮೆನ್‌ ಅಕ್ಷರಶಃ ರಣರಂಗವಾಗಿದೆ. ಶಿಯಾ ಬಂಡುಕೋರರು ಮತ್ತು ಸುನ್ನಿ ಬೆಂಬಲಿತ ಸರ್ಕಾರದ ನಡುವೆ ಬಿಕ್ಕಟ್ಟು ತಾರಕ್ಕೇರಿದೆ. ಈ ನಡುವೆ ಬಿಕ್ಕಟ್ಟನ್ನು ನಿರ್ವಹಿಸಲಾಗದೇ ಯೆಮೆನ್‌ ಅಧ್ಯಕ್ಷ ಅಬೆದ್ರಬ್ಬೊಮನ್ಸೂರ್‌ ಹದಿ ವಿದೇಶಕ್ಕೆ ಪಲಾಯನ ಗೈದಿದ್ದು, ಸೌದಿ ಅರೇಬಿಯಾದ ನೆರವು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳ ಒಕ್ಕೂಟ ಯೆಮೆನ್‌ ಮೇಲೆ ವಾಯು ದಾಳಿ ನಡೆಸುತ್ತಿದೆ. ಮಾ.25 ನಂತರ ಯೆಮನ್‌ನಲ್ಲಿ ಯುದ್ಧ ಸದೃಶ ವಾತಾವರಣ ಸೃಷ್ಟಿಯಾಗಿದೆ. ಇದು ಇತರ ರಾಷ್ಟ್ರಗಳಿಗೂ ಹಬ್ಬುವ ಆತಂಕ ಎದುರಾಗಿದೆ. ಈ ನಡುವೆ ಅಲ್ಲಿ ಅತಂತ್ರರಾಗಿರುವ ಭಾರತೀಯರನ್ನು ರನ್ನು ರಕ್ಷಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟಿಗೆ ಏನು ಕಾರಣ? ಯೆಮೆನ್‌ನಲ್ಲಿ ಏನು ನಡೆಯುತ್ತಿದೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ. ಯೆಮೆನ್‌ನಲ್ಲಿ ಏನಾಗುತ್ತಿದೆ. 2011ರಿಂದ ಆಂತರಿಕ ಕಲಹಕ್ಕೆ ಸಿಲುಕಿ ಛಿದ್ರವಾಗಿರುವ ಯೆಮೆನ್‌ನಲ್ಲಿ ಸದ್ಯ ಉಗ್ರರದ್ದೇ ಸಾಮ್ರಾಜ್ಯ ಎನ್ನುವಂತಾಗಿದೆ. ಅಧಿಕಾರ ಮತ್ತು ಸಂಪನ್ಮೂಲದ ಅಸಮಾನ ಹಂಚಿಕೆಯ ಫ‌ಲವಾಗಿ ಯೆಮೆನ್‌ನಲ್ಲಿ ಇತ್ತೀಚೆಗೆ ಘರ್ಷಣೆ ಹಿಂಸಾಚಾರ ಸಾಮ...
ಕ್ಲೀನ್ ಸಿಟಿ ಮತ್ತು  ಧೂಳು  ಸಿಟಿ.. ...........      ಹೌದು ಗೆಳೆಯರೇ , ನಿನ್ನೆಯ ತನಕ ದುಬಾಯಿ ಮತ್ತು ರಿಯಾದ್ ಎಂಬೀ ನಗರಗಳಲ್ಲಿ ದುಡಿಯುವ ಪ್ರವಾಸಿಗರಿಗೇನೊ ಒಂದು ಕುಷಿ . ನಾವೆಲ್ಲ ಇರುದು ಕ್ಲೀನ್ ಸಿಟಿ ಯಲ್ಲಿ ಎಂದು..      ಪಾಪ ನಿನ್ನೆ ಅಂದುಕೊಂಡದೆಲ್ಲ ಸುಲ್ಲಾಯಿತು , ಒಮ್ಮೆಲೇ ಆಕ್ರಮಿಸಿದ ಆ ದೈತ್ಯ ಹುಡಿಗಾಳಿಗೆ ತತ್ತರಿಸಿ ಹೊದ ಜನ ದೂಳಿಲ್ಲದ ಸ್ಥಳಹುಡುಕುವಲ್ಲೇ ಬ್ಯುಸಿಆದರೇನೊ.         ಮೊನ್ನೆ ನನ್ನೊಬ್ಬ ದುಬಾಯಿಯ ಗೆಳೆಯ ಪೊನುಮಾಡಿ ಸಮಾಲೋಚನೆ ವಿಚಾರಿಸಿದಾಗ , ನೀನಿರುವುದು ತಬೂಕಿನಲ್ಲಿಯಾ ಎಂದಾಗ ಹೌದು ಎಂದೆ. ಆಗ ಅವನು , ಓ ಮಾರಯ ಅದೊಂದು ಸಣ್ಣ ಊರು , ಒಂತರಾ ಹಳ್ಳಿತರ ಎಂದ.  ನಾನಿರುವುದು ದುಬಾಯಿಯಲ್ಲಿ ಇಲ್ಲಿ ಸುಂದರವಾದ ಕಟ್ಟಡಗಳು , ಶಾಪಿಂಗ್ ಮಾಲುಗಲು , ವಿಶ್ದ ನಾನಾಕಡೆಯ ಪ್ರವಾಸಿಗರು , ಮನೊರಂಜನೆಯ ನಗರಗಳು ಆಹಾ ಒಂತರಾ ಕುಶಿಕೊಡುವ ಪ್ರದೇಶ ಎಂದ. ಆಗ  ನಾನು ಮುಂದಿನವರ್ಷ ದುಬಾಯಿಗೆ ಕಲಸಹುಡುಕಲು ಹೊಗಬಹುದೇನೇ ಅಂದುಕೊಂಡೆ .       ಇಂದು ನನಗಾಯಿತು ಅಲ್ಲಾಹನ ವಿದಿಯಾಟದ ಮುಂದೆ ಯಾವ ಸುಂದರ ನಗರಗಳು ತಲೆ ಎತ್ತಲು ಸಾದ್ಯವಿಲ್ಲ. ಅಲ್ಲಾಹನ ಒಂದು ಸಣ್ಣ ಪರಿಕ್ಷಣಕ್ಕೆ ಎಷ್ಟೋ ಸಾವಿರ ಕೊಟಿ ರೂಪಾಯಿ ನಷ್ಟವಾಗಿ, ಅಂಗಡಿ ಮುಂಗಟ್ಟು ಮುಚ್ಚಿ , ಶಾಲಾ ಕಾಲೇಜು ರಜೆ ಸಾರಿ , ಆಪೀಸು ಬಂದು ಮಾಡಿ ಮನ...
ಸತ್ಯಕ್ಕೆ ಸಾವಿಲ್ಲ , ವಿರೊದಿಗಲ ಮಾತಿಗೆ ಮಿತಿಯಿಲ್ಲ.................. *****  ವಿರೊದಿ ಗಳು ಹುಟ್ಟುತಿಹರು ಜೈತ್ರಯಾತ್ರೆಯ ತಡೆಯಲೆಂದು.. ಇಲ್ಲ ಇದು ನಿಲ್ಲಲ್ಲ ನಮ್ಮಲ್ಲೊಬ್ಬನ ಕೊನೆಯುಸಿರುವ ವರೆಗೂ... ಯವುದೋ ಕೊಮುವಾದಿಗಳ ತೆರೆಯ ಹಿಂದಿನ ಆಟಕ್ಕೆ ತಲೆಕೆಡಿಸಿಲ್ಲ ನಾವು.. ನ್ಯಾಯದ ಮೇಲೆ ಭರವಸೆ ಇಟ್ಟು ಅನ್ಯಾಯದ ಮೇಲೆ ಹೊರಾಡುವೆವು ನಾವು... ಯಾರದೊ ಮಾತು ಕೇಳಿಹುಟ್ಟಿದಲ್ಲ ಈ ಒಂದು ಸುಂದರ ಸಂಘಟನೆ.. ಪಿಪಿಗಲಲ್ಲ ಪಾಪಿಗಳೆಂದು ಕರೆದರು ನಮ್ಮ ಪ್ರಯತ್ನಕೆ ಕೊನೆಯಿಲ್ಲ... ಜೀವನದ ಮೇಲೆ ಆಸೆಇಲ್ಲ ಮರಣದ ಮೇಲೆ ಭಯವೂ ಇಲ್ಲ.. ಯಾರೊ ಮಾಡಿದ ತಪ್ಪು ನಮ್ಮ ಮೇಲೆ  ಹಾಕಿದರೂ , ಸತ್ಯಕ್ಕೆ ಸಾವಿಲ್ಲ...  ಸತ್ಯ , ಶಾಂತಿ , ನ್ಯಾಯ , ಸಮಾನತೆ ಇರುವ  ಸುಂದರ ಭಾರತ ಕಟ್ಟಲು.. ಪಣತೊಟ್ಟಿರುವೆವು ನಾವು., ಬನ್ನಿ ಗೆಳೆಯರೆ ಕೈಜೊಡಿಸಿ ನೀವು, ನಮ್ಮೊಳಗಿನ ತಪ್ಪನು ಹುಡುಕಿತಿರುವ ನೀವು, ನಮ್ಮ ಬಗ್ಗೆ ತಿಳಿದು ನಮ್ಮೊಂದಿಗೆ ಕೈ  ಜೊಡಿಸುವ ದಿನವ ಕಾಯುವೆವು ನಾವು...                     ಇನ್ಶಾ ಅಲ್ಲಾ...                    ನಿಝಾಮುದ್ದೀನ್                 ಉಪ್ಪಿನಂಗಡಿ , ತಬೂಕ್
ಸುನ್ನಿ ಮುಸ್ಲಿಂ , ಬ್ಯಾರಿ ಮುಸ್ಲಿಂ.          ಯಾರಿಗೆ ಲಾಬ ಯಾರಿಗೆ ನಷ್ಟ....! ಜಾತಿ ಜನಗಣತಿ ವಿಚಾರದಲ್ಲಿ ಉಪಜಾತಿ ಎಂಬ ಕಾಲಂ ಹಿಂದೂಗಳಿಗೆ ಮಾತ್ರ .ಮುಸ್ಲಿಂಮರಲ್ಲಿ ಉಪಜಾತಿ ಇಲ್ಲದ ಕಾರಣ ಅವರಿಗೆ ಅನ್ವಯಿಸೂದಿಲ್ಲ. ಎಂಬ ಮಾತು ಇದೆ. ಒಂದು ವೇಲೆ ಮುಸ್ಲಿಮರ ಉಪಜಾತಿ ಕಾಲಂ ಇದ್ದರೆ ಬ್ಯಾರಿ ಮುಸ್ಲಿಂ ಎಂದು ಹಾಕಿ , ಯಾಕೆಂದರೆ ,           ಹೌದು ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾತಿ ಜನಗಣತಿ ನಡೆಯುತ್ತಿದೆ . ಕರಾವಳಿ ಬಾಗದ ಜನ ಮುಸ್ಲಿಂ ಸಮುದಾಯದವರ ಗೊಂದಲ ತಾರಕಕ್ಕೇರಿದೇ . ಸುನ್ನೀ ಮುಸ್ಲಿಂ , ಸಲಪೀ ಮುಸ್ಲಿಂ , ಜಮಾಅತ್ ಮುಸ್ಲಿಂ , ಎಂದು ನಮ್ಮ ನಮ್ಮ ಅಸ್ತಿತ್ವ ತೊರಿಸಲು ಹೊರಟರೇ ನಮ್ಮ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಲಿದೆ.            ಯಾಕೆಂದರೆ.., ಕರ್ನಾಟಕ ಸರಕಾರದ ಮುಂದಿನ ಯೋಜನೆಗಳು ಕರಾವಳಿ ಬಾಗದ ಬ್ಯಾರಿ , ತುಳು , ಕೊಂಕನಿ ಈ ಮೂರು ಪಂಗಡಗಳಿಗೆ ಅನುದಾನ ದೊರೆಯಲಿದೆ . ಇದರಲ್ಲಿ ಅಂದರೆ ಸುನ್ನಿಗಳು , ಸಲಪಿಗಳು , ಜಮಾಅತ್ ಇಸ್ಲಾಮಿಗರು ಎಲ್ಲಾ ಒಟ್ಟಿಗೆ ನಿಂತರೆ ಸರಕಾರದ ಅನೇಕ ಸವಲತ್ತುಗಳು ಬ್ಯಾರಿ ಸಮುದಾಯದ ಪಾಲಾಗಲಿದೆ .        ಸುನ್ನಿ ಮುಸ್ಲಿಂ , ಸಲಪೀ ಮುಸ್ಲಿಂ , ಜಮಾಅತ್ ಮುಸ್ಲಿಂ, ಎಂದು ಬೇರೆ ಬೇರೆ ಪಂಗಡದ ಹೆಸರು ಉಪಜಾತಿ ಕಾಲಂನಲ್ಲಿ ಹಾಕಿದರೆ ಏನು ತೊಂದರೆಯಿಲ್ಲ , ...
ಚರ್ಚಿಸುವ ಗೆಳೆಯಾ,       ಚರ್ಚಿಸುವ ವಿಷಯ ತುಂಬಾ ಇದೆ ಗೆಳೆಯಾ... **** ದೊಡ್ಡ ದೊಡ್ಡ ಚರ್ಚೆ ನಡೆಸುತಿಹರು ಗೊಂದಲಗೊಲಿಸುವ ಉರೂಸಿನ ಬಗ್ಗೆ...... ಚರ್ಚೆ ಮಾಡಲ್ಲ ಸಮುದಾಯದಲ್ಲಿ ಒಂದೊತ್ತು ಊಟಸಿಗದವರ ಬಗ್ಗೆ..... ಅದೆಷ್ಟೋ ನಿರಪರಾದಿಗಲು ಜೈಲಲ್ಲಿ ಕಾಲ ಕಲೆಯುತಿಹರು ಅವರ ಬಗ್ಗೆ ಇಲ್ಲ ಚರ್ಚೆ.... ತನ್ನ ಮನೆಯಲ್ಲಿರುವ ನಾಲ್ಕೈದು ಹೆಣ್ಣಿನ ಕುರಿತು ದುಃಖಿಸುವವರ ಬಗೆಗಿಲ್ಲ ಚರ್ಚೆ..... ಒಂದು ಸಣ್ಣ ಗುಡಿಸಲಿನ ಆಸೆಗಾಗಿ ಶುಕ್ರವಾರ ಮಸಿದಿಕಡೆ ಹೊರಟವರ ಬಗ್ಗೆ ಇಲ್ಲ ಚರ್ಚೆ.... ವರದಕ್ಷಿಣೆಯೆಂಬ ಪೆಡುಂಬೂತದ ಆಕ್ರಮನದ ಬಗ್ಗೆ ತಲೆಕೆಡಿಸುವ ತಂದೆತಾಯಿಯ ಬಗ್ಗೆ ಇಲ್ಲ ಚರ್ಚೆ.... ಅಲ್ಲಾಹನ ವಿದಿಯಾಟದ ಆಕ್ಸಿಡೆಂಟ್ನಲ್ಲಿ ಕಾಲು ತುಂಡಾಗಿ ಮನೆಯಲ್ಲಿ ಕಣ್ಣೀರಿಡವವನ ಬಗ್ಗೆ ಇಲ್ಲ ಚರ್ಚೆ.... ಅನಾವಷ್ಯಕ ಕರ್ಚಿನಿಂದ ಆಡಂಬರದ ಮದುವೆ, ಮಾಡಿ ಊರ ಬಡ ಹೆಣ್ಣುಮಕ್ಕಳಲಿ ಆಸೆ ಉಟ್ಟಿಸೊರ ಬಗ್ಗೆ ಇಲ್ಲ ಚರ್ಚೆ... ಯಾವುದೊ ಒಬ್ಬನ ಕಾಮಕೃತ್ಯಕ್ಕೆ ತುತ್ತಾದ ಮಕ್ಕಳ ಬವಿಷ್ಯದ ಬಗ್ಗೆ ಇಲ್ಲ ಚರ್ಚೆ... ಪಾಶ್ಚಾತ್ಯ ಸಂಸ್ಕೃತಿಗೆ ತುತ್ತಾಗಿ ಅನ್ಯನೊಂದಿಗೆ ಓಡಿಹೊಗೊರ ಬಗ್ಗೆ  ಇಲ್ಲ ಚರ್ಚೆ... ಬುದ್ದಿ ಇರುವ ಓ ನನ್ನ ಸಹೊದರ .... ಯಾರದೊ ಆಚರನೆಯ ಬಗ್ಗೆ ಚರ್ಚಿಸದೆ, ಸಮುದಾಯದ ಕಷ್ಟದ ಬಗ್ಗೆ ಚರ್ಚಿಸು ಬಾ.....                 .. ...
ಜೋರ್ಡಾನಿನ ಆ ಪುಟ್ಟ ಬಾಲಕ.....!       ಹೌದು ಗೆಳೆಯರೇ , ಮೊನ್ನೆ ನಾನು ಜೋರ್ಡಾನಿಗೆ ಭೇಟಿ ಕೊಟ್ಟಾಗ ನನ್ನ ಕನ್ನೆದುರು ಒಂದು ವಿಶೇಷ ಘಟನೆ ನಡೆಯಿತು. ತಾನು ಕೆಲ ಹೊತ್ತು ಆ ಘಟನೆಯ ನಂತರ ಚಿಂತಿಸಿ ಆ ಬಾಲಕನಿಗೆ ಬೇಷ್ಎಂದೆ..   ಯಾಕೆಂದರೆ,           ನಾನು ಜೋರ್ಡಾನಿನ ಅಮ್ಮಾನ್ ಎಂಬ ನಗರದಲ್ಲಿ ಮಸೀದಿಯ ಬಳಿಇರುವ ಸಾರ್ವಜನಿಕ ಶೌಚಾಲಯದ ಬಳಿ ಹೊಗುತಿದ್ದೆ.  ಅಲ್ಲಿ ಒಂದು ವ್ರದ್ದರು ಶೌಚಾಲಯಕ್ಕೆ ನೀರು ಹಾಕಿ ವೈಪರ್ನಿಂದ ಎಳೆಯುತಿದ್ದರು , ಅವರು ನೀರು ಕಾಲಿಮಾಡಿ ಸ್ವಚ್ಚಗೊಳಿಸುವಾಗ ಮತ್ತೆ ಮತ್ತೆ ಬರುತಿದ್ದ ಜನರ ಚಪ್ಪಲಿನಡಿಯಲ್ಲಿ ಅಂಟಿಕೊಂಡಿದ್ದ ಮನ್ನೆಲ್ಲ ಸ್ವಚ್ಛ ಮಾಡಿದ ಸ್ಥಳವನ್ನು ನಿಸ್ವಚ್ಚಗೊಳಿಸುತಿತ್ತು. ಆ ವ್ರದ್ದರು ಮತ್ತೆ ಮತ್ತೆ ನೀರಾಕಿ ತೊಳೆಯುತಿದ್ದರು.  ಆಗ ಅದನ್ನು ವೀಕ್ಷಿಸಿದ ನನ್ನ ಬಳಿ ಇದ್ದ ಆ ಪುಟ್ಟ ಬಾಲಕ ಬರುವ ಜನರೆಲ್ಲಾ ತಡೆದು ಒಂದು ನಿಮಿಷ , ಒಂದು ನಿಮಿಷ ಅನ್ನುತ್ತಾ ಆ ವ್ರದ್ದರ ಕೆಲಸ ಸರಾಗವಾಗಿ ಮಾಡುವಂತೆ ಮಾಡಿದ.  ಹಿಂದಿನಿಂದ ಜನರೆಲ್ಲ ಸಾಲುಗಟ್ಟಿ ನಿಂತರು .       ಸುಮಾರು 7 ನಿಮಿಷಗಳ ನಂತರ ಅವರ ಕೆಲಸ ಮುಗಿದ ನಂತರ ಎಲ್ಲರಲ್ಲೂ ಶೌಚಾಲಯ ಪ್ರವೆಶಿಸುವಂತೆ ಹೇಳಿದ. ಇದನ್ನು ಕಂಡ ಆ ವ್ರದ್ದರು ಹೌದು ಪುಟ್ಟ ನೀನವರನ್ನು ತಡೆಯದಿದ್ದರೆ ನನ್ನ ಕೆಲಸ ಇನ್ನೂ ಅರ್ಧ ಗಂಟೆ ಮೀರುತಿತ್ತು , ನಿನಗೆ ಒಳ್ಳೆಯದಾ...
***** #ಸಮುದಾಯ ಸಮಸ್ಯೆಗಳು# ******       ಕೆಲದಿನಗಳಿಂದ ಏನೊ ಗೊತ್ತಿಲ್ಲ ನಮ್ಮೂರು ಮಂಗಳೂರು ಎನ್ನಲು ಪ್ರವಾಸಿಗರಾದ ನಮಗೆ ಮುಜುಗರವಾಗುತ್ತಿದೆ. ದಿನಾಲು ಒಂದಲ್ಲ ಒಂದು ವಿಷಯದಲ್ಲಿ ಪ್ರಚಾರ ಪಡೆಯುತ್ತಿರುವ ಊರ ನೆನೆಯುವಾಗ ಸಂಬಳ ಇಲ್ಲದೆ ದುಡಿಯುವ ಮರಳುಗಾಡೇ ವಾಸಿ ಅನ್ನೊತರ ಇದೆ ಈಗಿನ ಪರಿಸ್ಥಿತಿ.        ಅತ್ಯಾ(ಆ)ಚಾರ ಎಂಬುದು ತಿಳಿಯದ ವಿದ್ಯಾರ್ಥಿಗಲು ಅದರ ಕಡೆ ಗಮನ  ಹರಿಸಿ. ತನ್ನ ಕಾಮ ಉನ್ನತಿಗಾಗಿ ಏನೆಲ್ಲಾ ಕಸರತ್ತು ನಡೆಸುದು , ಅದನ್ನು ಬೆಂಬಲಿಸುವಂತೆ ಊರಿನ ತಿಳಿದವರ ನಡವಳಿಕೆ ಏನೊ ಕಾಲೇಜಿನ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.        ಒಂದತ್ತು ನಿಮಿಷಗಳ ಕಾಮದಾಟದ ಮೊಹಕ್ಕಾಗಿ ತನ್ನ ಹೆತ್ತು ಸಾಕಿ ಸಲಕಿದ ಮನೆಯವರ ದಿಕ್ಕರಿಸಿ ಗಂಡ ವಿದೇಶದಲ್ಲಿ ನಿಂತು ಕಷ್ಟಪಟ್ಟು ದುಡಿದು ತನಗೆ ಕಳುಹಿಸಿದ ಸೆಲ್ಪೊನ್ನಿಂದ ಯಾರೊ ತಿಳಿಯದ ಅಪರಿಚಿತನ ಮಾತಿಗೆ ಮರುಳಾಗಿ ಮನೆ ಬಿಟ್ಟು ಓಡಿ ಹೊಗೊ ರೀತಿ.         ಸಮುದಾಯದಲ್ಲಿ ಆಗುತ್ತಿರುವ ತೊಡಕಿನಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಗುರುವರ್ಯರು ಪಾರ್ಟಿಗಳೆ ಕಚ್ಚಾಟದಲ್ಲಿ ತೊಡೆತಟ್ಟಿ ಇನ್ನೊಂದು ಗುಂಪನ್ನು ಮಟ್ಟಹಾಕಲು ಕಾತುರದಿಂದ ಕಾಯುತ್ತಿರುದು.      ವರದಕ್ಷಿಣೆಯ ಬಗ್ಗೆ ಬೊಗಲೇ ಬಿಡೊ ಊರ ಯುವಕರದಂಡು ವರದಕ್ಷಿಣೆಯ ಹಣ ಬೇಡ ಚಿನ್ನ , ಕಾರು ಸಾಕು ಎಂಬ ...
*****     ಪ್ರಹಸನ    **** ಬ್ಯಾರಿಗಳು ಒಟ್ಟಾದರು ತಮ್ಮ ನಾಳೆಯ ಜೀವನಕ್ಕೆ.. ಮಾದ್ಯಮದವರು ಒಟ್ಟಾದರು  ತಮ್ಮ ಬವಿಷ್ಯದ ಜೀವನಕ್ಕೆ..... **** ಹೌದು. ಮೊನ್ನೆ ಮೊನ್ನೆ ತನಕ ಛಿದ್ರಗೊಂಡ ಬ್ಯಾರಿ ,  ಮಾದ್ಯಮದ ವರದಿ.... *** ಪಾಪ ಗೊತ್ತಿಲ್ಲ ಅವರಿಗೆ  ಛಿದ್ರಗೊಂಡದ್ದು ಬ್ಯಾರಿಗಳಲ್ಲ , ಅವರ ಆಶಯವೆಂದು.. **** ಕಾಲದ ಕನಸು ಕಳೆದ ಕೆಲವು ದಿನಗಳಿಂದ ಕೊಮುವಾದಿಗಳ ಅಟ್ಟಹಾಸ ಶೀರ್ಷಿಕೆ , ಇವತ್ತಿನ ಶಿಷಿಕೆ.. ಇವತ್ತು ಸಿಡಿದೆದ್ದ ಮುಸ್ಲಿಮರು ****** ಆ ದಿನವ ಕಾಯದಿರಿ.. ಮುಸ್ಲಿಮರು ಯಾವತ್ತೂ ಒಂದೇ. ಆಶಯ ಹಲವು , ದ್ಯೇಯ ಒಂದೇ. ಇದು ಒಗ್ಗಟ್ಟಿನ ಪ್ರದರ್ಶನ. "ಸಿಡಿದೆದ್ದ ಮುಸ್ಲಿಮರು"  ಎಂದ ಶೀರ್ಷಿಕೆಯಡಿ  ಕೊಮುವಾದಿಗಳ ಒಗ್ಗಟ್ಟಿಗೆ ಶ್ರಮಿಶುವ ಮತ್ತು , ತನ್ನ ವ್ಯಾಪಾರ ವ್ರದ್ದಿಸುವ ಆ ಹಳೇ ಕೊಮುವಾದಿ.. ********                                                                     ನಿಝಾಮುದ್ದೀನ್                 ಉಪ್ಪಿನಂಗಡಿ,ತಬೂಕ್
**********#ಅತ್ಯಾ(ಆ)ಚಾರ#************* ತಿಳಿದಿಲ್ಲ ಆ ಪುಟ್ಟ ಮಗುವಿಗೆ ನನ್ನ ಯಾರು ಅತ್ಯಾಚಾರ ಮಡುತಿಹರೆಂದು, ತಿಳಿದೂ ತನ್ನ ಕಾಮವ ತೀರಿಸುತಿಹನು ಆ ಪುಟ್ಟ ಬಾಲೆಯಮೇಲೆ.. ಹೆತ್ತಬ್ಬೆಗೆ ತೊಚದಾಗಿದೆ ನನ್ನ ಮಗು ಏನು ತಪ್ಪು ಮಾಡಿದೆಯೆಂದು, ಗೊಣಗುತಿಹರು ಆ ತಾಯಿ ಯಾಕಾಗಿ ಹುಟ್ಟಿದೆ ಈ ಮನೆಹಾಳನೆಂದು.. ಮಾದ್ಯಮವೆಲ್ಲ ಅಡಗಿ ಕುಳಿತಿದೆ ನಮಗೆ ಯಾವ ಸುದ್ದಿಯೂ ತಿಳಿದಿಲ್ಲವೆಂಬಂತೆ, ಮಾದ್ಯಮಕ್ಕೆ ತಿಳಿದಿದೆ ದೂರದ ನಾಗಾಲ್ಯಾಂಡ್ನಲ್ಲಿ ಯಾರೊ  ಅತ್ಯಾಚಾರ ಮಾಡಿದರೆಂದು. ಪೊಲೀಸು , ಕಾನೂನು ಕೆಲಸ ಮಾಡುತಿದೆ ಯಾರೊ ನಮ್ಮ ದತ್ತು ಪಡೆದಿದೆವೆಂಬಂತೆ, ಇಲ್ಲ ಬಡವರಿಗೆ ರಕ್ಷಣೆ , ಪೋಷಣೆ ನಾವೇ ಎಚ್ಚರ ಗೊಲ್ಲುವತನಕ.... ಒಟ್ಟಿನಲ್ಲಿ ಜನರಿಗೆ ತಿಳಿಯದಾಗಿದೆ ಇಲ್ಲಿ ಏನು ನಡೆಯುತಿದೆಯೆಂದು , ಈ ಸಮಾಜದಲ್ಲಿ ಇಷ್ಟು ಕೆಲಮಟ್ಟದ ಜನರಿಹರೆಂದು ತಲೆತಗ್ಗಿಸಿ ನಡೆಯುತಿಹನು.. ಯಾರೊ ಮಾಡಿದ ಪಾಪಕ್ಕೆ  ಒಂದು ಸಮುದಾಯವ ದೂರುದಿಲ್ಲ , ಪಾಪ ಮಾಡಿದವನ ರಕ್ಷಿಸುವ ಸಮುದಾಯದ ವಿರುದ್ದ ಸುಮ್ಮನೆ ಕೂರೂದಿಲ್ಲ.... ******************************************** ನಿಝಾಮುದ್ದೀನ್ ಉಪ್ಪಿನಂಗಡಿ , ತಬೂಕ್
# ರೈತನ ನೊವು # **** ರೈತನೊಬ್ಬ ದುರುಗುಟ್ಟುತ ನೊಡುತಿಹನು , ಮಳೆರಾಯನ ಕೈ ಬೀಸಿ ಕರೆಯುತಿಹನು , ತಿಳಿದಿಲ್ಲ ನಮಗೆ ಮಳೆಯಿಂದ ಬೆಳೆ ಎಂದು..... ಮಳೆಗಾಲ ಬಂದಾಗ ಹೊಲದಕಡೆ ಹೊರಟಿಹನು , ಮಳೆ ಸಲ್ಪ ಬಂದಾಗ  ದೇವರಿಗ ಕೈಮುಗಿಯುತಿರುವನು , ತಿಳಿದಿಲ್ಲ ನಮಗೆ ರೈತನಿಗೆ ಮಳೆಯೇ ಬದುಕೆಂದು... ಹೊಲದಲ್ಲಿ ಬೀಜವ ಬಿತ್ತಿ ಮೊಳಕೆಗೆ ಕಾಯುತಿಹನು , ಫಸಲು ಕೈಗೆ ಸಿಕ್ಕಾಗ ಮನದಲ್ಲಿ ನಗುವ ಬೀರುವನು , ತಿಳಿದಿಲ್ಲ ನಮಗೆ ರೈತನ ನಿರೀಕ್ಷೆ ಪಸಲೆಂದು... ಗೊಡಾನಿಗೆ ಬಣ್ಣ ಹಚ್ಚಿ ಕ್ರಿಮಿ ಕೀಟದಿ ರಕ್ಷಣೆ ಮಾಡಿ , ಒಣಗಿದ ಪಸಲನ್ನು ಬದ್ರವಾಗಿ ಶೇಖರಿಸಿಟ್ಟಾಗ , ತಿಳಿದಿಲ್ಲ ನಮಗೆ ಅದು ರೈತನ ಬಂಗಾರವೆಂದು.... ಸಿಕ್ಕ ಫಸಲೊಂದಿಗೆ  ಮಾರುಕಟ್ಟೆಗೆ ಹೊದಾಗ , ದಲ್ಲಾಳಿಗಳ ಕೈಗೆ ಸಿಕ್ಕು  ಬೆಳೆದ ಬೆಳೆ ಮೂರು ಕಾಸಿಗೆ ಹಾರಾಜಾಗಿ , ಬೇಸತ್ತ ಮನೆಕಡೆ  ಹೊರಟಾಗ  ತಿಳಿದಿಲ್ಲ ನಮಗೆ ಆಬೆಳೆ ರೈತನ ನೂರುದಿನದ ಫಲವೆಂದು, ****** ನಿಝಾಮುದ್ದೀನ್ ಉಪ್ಪಿನಂಗಡಿ,ತಬೂಕ್
ಮಹಿಳೆ ಎಂದಾಗ ನನ್ನ ಮನಸಲ್ಲಿ.. *************** ಮಹಿಳೆಯರಿಗೆ ಪ್ರತಿಯೊಂದು ಧರ್ಮಕೂಡಾ ವಿಷೇಶ ಸ್ಥಾನ , ಮಾನ ಕಲ್ಪಿಸಿದೆ . ಮಹಿಳೆಯರು ಈ ಸಮಾಜದ ಅತ್ಯಮೂಲ್ಯ ವಸ್ತು , ಮಾನವನ ಏಳಿಗೆಯಲ್ಲಿ ಶ್ರಮಿಸುವ ಶ್ರಮಜೀವಿ . ಕೆಲವರಿಗೆ ತಾಯಿ , ಅಕ್ಕ , ತಂಗಿ , ಅತ್ತಿಗೆ ಈಗೆ ಹಲವಾರು ಮಹಿಳೆಯರು ಒಟ್ಟಿಗೆ ಒಂದೇ ಮನೆಯಲ್ಲಿ ಸೇರಿ ಚಂದದ ಜೀವನ ನಡೆಸುದು ಸಹಜ .         ಮಹಿಳೆ ಎಂದಾಗ ಇತ್ತೀಚಿನ ದಿನಗಳಲ್ಲಿ ಒಂದು ಮಾರಟ ವಸ್ತುವಾಗಿ , ಆಕರ್ಷಕ ವಸ್ತುವಾಗಿ , ಮನೊರಂಜನೆ ವಸ್ತುವಾಗಿ ಉಪಯೊಗಿಸುತ್ತಿರುದು ನಮ್ಮ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.          ಒಂದು ಹೆಣ್ಣು ದೂರದಿಂದ ಬರುವಾಗ ಪಡ್ಡೇ ಹುಡುಗರ ಮನದಲ್ಲಿ ರೊಮಾಂಚಣ ಗೊಂಡು ಆ ಹುಡಿಗೆ ತಮಾಷೆಮಾಡಿ ಹಿಂಬಾಲಿಸುದು ಸಾಮಾನ್ಯ , ಶಾಪಿಂಗ್ ಮಾಲ್ ಗಳಲ್ಲಿ ಹೆಣ್ಣನ್ನು ಪಾಲೋಮಾಡುದು , ನಂಬರ್ ಕೊಡಲು ಪ್ರಯತ್ನಿಸುದು ಕೂಡ ಸಾಮಾನ್ಯಆಗಿದೆ. ಇದಕ್ಕೆಲ್ಲ ಕಾರಣ ಹೆಣ್ಣಿನ ವಸ್ತ್ರದಾರಣೆ ಮತ್ತು ಅತಿಯಾದ ಮೇಕಪ್,       ಹೌದು ಒಂದು ಹೆಣ್ಣಿನ ವಸ್ತ್ರಗಳು ಒಂದು ಹುಡುಗನ ಕಾಮ ದ್ರಿಷ್ಟಿಯಲ್ಲಿ ನೊಡಲು ಕೈಬೀಸಿ ಕರೆಯುವಂತಿರುತ್ತದೆ .     ಇನ್ನು ಹೆಣ್ಣನ ಮಾತುಗಳಿಂದ ಗ್ರಾಹಕರನ್ನು ಆಕರ್ಷಿಸಲು ಉಪಯೊಗಿಸುತ್ತಿರುದವ ವ್ಯಪಾರಗಳು ದಿನೇ ದಿನೇ ಏರುತ್ತಿದೆ , ಮೊಬೈಲ್ ಕಸ್ಟಮರ್ ಕೇರ್ , ಮಾಲ್ನಲ್ಲಿ ...
ಮರಣ ಬರುತ್ತಿದೆ ನೀ ಹೊರಟೆಯಾ..... ******************************* ಮನೆಯವರ ಕಣ್ಣೀರಲ್ಲಿ ಮುಳುಗಿಸಿ ಬಂದು , ಮಿತ್ರರನೆಲ್ಲ ಬಿಟ್ಟು , ತೊಡಿಸಿದ ಆ ಹೊಸಬಟ್ಟೆಯಲಿ  ಯಾತ್ರೆ ಹೊಗುವ ದಿನ  ಅದುವೇ ,,,,, ಭೀಕರ ದಿನ , ಮರಣದ ದಿನ ***** ಕರೆಯದೇ ಸೇರಿದ ಜನರ ಕಂಡು ನಂಬಗ್ಗೆ ಮಾತಾಡೊ ಮಾತು ಕೇಳಿ , ಇನ್ನೆರಡು ದಿನ ಬದುಕಲು ಆಸೆಪಟ್ಟು ಯಾತ್ರೆ ಹೊಗುವ ದಿನ  ಅದುವೇ,,,,, ಭೀಕರ ದಿನ , ಮರಣದ ದಿನ ***** ಕರ್ಪೂರ , ಸುಗಂಧದ್ರವ್ಯ ಸಿಂಪಡಿಸಿ ಬಿಸಿನೀರಿನಲಿ ಸ್ಥಾನವ ಮಾಡಿಸಿ, ಬಿಳಿ ಬಟ್ಟೆಯಲ್ಲಿ ಪ್ಯಾಕು ಮಾಡಿ  ಯಾತ್ರೆ ಹೊಗುವ ದಿನ ಅದುವೇ,,,,, ಭೀಕರದಿನ , ಮರಣದ ದಿನ ***** ನೂರಾರು ಜನ ಹಿಂಬಾಲಿಸಿ ನಮ್ಮನ್ನು ಮೆದುವಾಗಿ ಎತ್ತಿಕೊಂಡು , ದಫನ ಬೂಮಿಯತ್ತ ಹೆಜ್ಜೆ ಹಾಕಿ ಯಾತ್ರೆ ಹೊಗುವ ದಿನ ಅದುವೇ,,,,, ಭೀಕರದಿನ , ಮರಣದದಿನ ***** ಮಕ್ಕಳೆಲ್ಲ ನನ್ನ ನೊಡಲು ಭಯಪಟ್ಟು ಮಣ್ಣಿನಲಿ ಆರಡಿ ಗುಂಡಿತೊಡಿ , ದಫನುಮಾಡಿ ನೀವೆಲ್ಲ ಯಾತ್ರೆ ಹೊಗುವ ದಿನ ಅದುವೇ,,,,, ಭೀಕರ ದಿನ , ಮರಣದದಿನ ***** ವರ್ಣ ವಿಲ್ಲ , ಭೇದ ವಿಲ್ಲ ಜಾತಿ ಇಲ್ಲ , ಪಂಗಡ ವಿಲ್ಲ , ಎಲ್ಲರ ಸರಿಸಮಾನವಾಗಿ  ಕರೇದು ಯಾತ್ರೆ ಹೊಗುವ ದಿನ ಅದುವೇ,,,,, ಭೀಕರ ದಿನ , ಮರಣದ ದಿನ *********************************************** ನಿಝಾಮುದ್ದೀನ್ ಉಪ್ಪಿನಂಗಡಿ , ...
** ಉಸ್ತಾದ್ . ಉಸ್ತಾದ್ . ಉಸ್ತಾದ್ ** ಊರಿನ ಉಸ್ತಾದ್ ಎಂದಾಗ ಏನೊ ಮೈ ಒಮ್ಮೆ ರೊಮಾಂಚಣ , ಅವರಲ್ಲಿ ಮಾತಾಡುವಾಗ ಮನಸ್ಸಿಗೆ ನೆಮ್ಮದಿ , ನಮ್ಮ ಕಷ್ಟವನ್ನು ಅವರಲ್ಲಿ ಹೇಳಿ ದುಆ ಮಾಡಲು ವಸೀಅತ್ ಮಾಡುದು . ಮಸಿದಿ ಕಾರ್ಯಮಕ್ಕೆ ಬೇರೆ ಕಡೆಯ ಗುರುಗಳು ಬರುತ್ತಾರೆ. ಎಂದಾಗ ನನಗಂತು ಬಹಳಾ ಸಂತೊಷ.  ಒಂದು ಕಾಲದಲ್ಲಿ ಊರಲ್ಲಿ ಏನೇ ಸಮಾರಂಬ ನಡೆಯುದಿದ್ದರೂ ಗುರುಗಳ ಆಶ್ರಯವಾಗುವ ಜನತೆ , ಅವರನ್ನು ಗೌರವಿಸುವ ಮುಸ್ಲಿಂ ಸಮುದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಗುರುಗಳ ನಡತೆಯೋ , ಜನರ ತಿಳುವಳಿಕೆಯೋ ಸ್ವಲ್ಪ ಕಡಿಮೆಯಾಗಿದೆ .      ಇದಕ್ಕೆಲ್ಲ ಕಾರಣ ಇತ್ತೀಚೆಗೆ ಉಸ್ತಾದರಿಗೆ ಉಂಟಾಗುವ ಹಣದ ವ್ಯಾಮೊಹ , ಮತ್ತೊಂದು  ಸಂಘಟನೆಯ ಬಗ್ಗೆ ದ್ವೇಷ , ಸ್ಥಾನಕ್ಕೆ ಕಿತ್ತಾಟ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಒಂದು ಮಹಲ್ಲಲ್ಲಿ ದೀನೀ ಸೇವೆಗಾಗಿ ನಿಂತು ಸಂಭಳ ಗಳಿಸಬೇಕಾದ ಉಸ್ತದಾರು ಹಣದ ಆಮಿಷ ಒಡ್ಡುವ ಪದ್ದತಿ ದಿನೇ ದಿನೇ ಏರುತ್ತಿದೆ. ಅವರ ಖರ್ಚಿಗಾಗುವಷ್ಟು ಹಣದ ಆಮಿಷವಲ್ಲ ಅದು ಬೇರೆ ಉಸ್ತಾದರಿಗಿಂತ ಹೆಚ್ಚು ಗಳಿಸಬೇಕೆಂಬ ಹಂಬಳ.     ಪಾರ್ಟಿ ಅನ್ನೊ ಪದ ಹೇಳಲೇ ಬೇಕೆಂದಿಲ್ಲ ಒಂದು ಉಸ್ತಾದ್ ಇನ್ನೊಂದು  ಉಸ್ತಾದರ ಮುಂಡಾಸ್ , ನಡತೆ , ವಸ್ತ್ರದಾರಣೆ ಕಂಡು ಮುಖ ತಿರುಗಿಸಿ ನಡೆಯುತ್ತಿರುದು ಕಂಡು ನಮಗೆ ಶಂಶಯ ಇವರಿಬ್ಬರೂ ಕಲಿತದ್ದು ಖುರಾನಲ್ಲವೇಯೆಂದು. ಒಂದು ಸಾಮಾನ್ಯ ವ್ಯಕ್ತಿ ತನ...
ಜಿವನವೇ ನಾ ಮರೆತೆ .. ಉರುಳಿತು ದಿನಗಳು ತರೆಗೆಲೆಯಂತು, ಕಂಡೆ ನಾ ಬೆಪ್ಪನಂತೆ ನಿಂತು , ಅದನೇಕೆ ಚಿಂತಿಸಲಿ ಬರಳಿದೆ ದಿನಗಳು ಸಾಲು ,ಸಾಲು ನೊಡೊನ ಅಂದೆ. ಬಿಸಿರಕ್ತವು ಚಳಿಸುತಿದೆ ಮೈತುಂಬ ಹರಡಿದೆ ಬೆಚ್ಚನೆಯ ಗಾಳಿಯ ಮದ್ಯದಿ ಹಣದ ಆಸೆಯ ವ್ಯಾಮೊಹದಿ , ಮಾಡಬಾರದ ಮಾಡಿ  ನಾನೇನೊ ಸಾದಿಸಿಹೆನೆಂದು ,   ಜಂಬಕೊಚ್ಚಿರುವೆ.  ತಲೆಗೂದಲ ಬಣ್ಣ ಬದಲಿಸಿದರು ,  ನಿನ ಬಟ್ಟೆ ಬರೆಗಳ ಚಂದವ  ಕಂಡು ಮುಖದ ಮೇಲೆ ಹಚ್ಚಿದ  ಕ್ರೀಂ ಕಂಡೊಡೆ ನಾ ನಿನ್ನ ಆಯಸ್ಸು ತಿಳಿದಿಲ್ಲ , ನಿನಗೂ ಮರಣವಿದೆ ಎಂಬ ಮಾತ ಮರೆತಿಲ್ಲ..                ....................                . ***** ನಿಝಾಮುದ್ದೀನ್ ಉಪ್ಪಿನಂಗಡಿ,ತಬೂಕ್
**# ಒಬ್ಬ ನಾಗರಿಕನಾಗಿ#** ಭಯವಿಲ್ಲ ನಮಗೆ ಭಯಪಡಿಸುವವರ ಮೇಲೆ,  ಭಯಪಡುವೆವು ನಾವು  ಅಲ್ಲಾಹನ ಮೇಲೆ. ದ್ವೇಷವಿಲ್ಲ ನಮಗೆ ಇತರ ಧರ್ಮದ ಮೇಲೆ, ವಿರೋಧ ಇದೆ ನಮಗೆ ದ್ವೇಷಿಸುಸುವವರ ಮೇಲೆ. ***** ಭಾರತೀಯನೆಂದು  ಅಭಿಮಾನ ಪಡುವೆವು, ಭಾರತದ ಉಳಿವಿಗಾಗಿ ಪ್ರಾಣ ಬೇಕಾದರು ಕೊಡುವೆವು. ದೇಶದ ವಿರೊದಿಗಲ ಮೇಲೆ ಕಾನೂನು ಕ್ರಮಕ್ಕೆ ಹೊರಾಡುವೆವು, ದೇಶದಲ್ಲಿನ ಕೊಮುವಾದಿಗಳ ದೇಶ ಬಿಟ್ಟು ಓಡಿಸುವೆವು. ***** ಸಮಾಜದ ಒಳಿತಿಗಾಗಿ ಉತ್ಸವವ ಮಾಡಿರಿ, ಸಮಾಜವ ಒಡೆಯಲು ಉತ್ಸಾಹ ಪಟ್ಟು, ನಿರುತ್ಸಾಹಗಲಾಗದಿರಿ.  ಶಾಂತಿಯನ್ನು ಕಾಪಾಡಲು ಶಾಂತಿ ಮಂತ್ರ ಜಪಿಸಿರಿ, ಅಶಾಂತಿಯ ಕಡೆ ವಾಲಿದರೆ ಬುದ್ಧಿವಂತ ಜನರಿಗೆ ಉತ್ತರಿಸಿರಿ. ******** ನಿಝಾಮುದ್ದೀನ್ ಉಪ್ಪಿನಂಗಡಿ,ತಬೂಕ್
****) ಅಮ್ಮನ ನೆನಪನ್ನು ಸ್ಮರಿಸುತ್ತಾ (*** ಅಮ್ಮಾ ಆ ನಿನ್ನ ಹಳೇ ನೆನಪುಗಳು ಮಾಸಲ್ಲ ನಿನ್ನ ಆ ಕನಸುಗಳು ನಿನ್ನ ಆ ಅಪ್ಪುಗೆಯ ಬೆಚ್ಚನೆಯ ನೆನಪು ಎಂದೂ ಮಾಸಲ್ಲ  ನಾನು ನಿನ್ನ ಹೊಟ್ಟೆಯಲ್ಲಿ ಇರುವಾಗ ಕಂಡ ಕನಸು ಎಷ್ಟಮ್ಮಾ, ನನ್ನ ಹೆತ್ತಾಗ ಪಟ್ಟ ನೊವು ಮರಳಿ  ನಿನಗೆ ಕೊಡಲ್ಲ , ಓ ನನ್ನ ಅಮ್ಮ.. **** ನಾನಂದು ಚಿಕ್ಕವನಿರುವಾಗ ಬಿದ್ದ ಏಟಿನಲಿ ಮನೆಗೆ ಬಂದಾಗ , ಕಮ್ಯುನಿಷ್ಟ್ ಎಳೆಯ ಕಟ್ಟಿ , ಪಾಪು ನಿನು ಊಟ ಮಾಡಿ ಮಳಗು ಎಂದೆ. ಅಮ್ಮ ನೀ ಊಟ ಮಾಡಿದೆಯಾ  ಎಂದು ನಾ ಕೇಳಿಲ್ಲ , ಓ ನನ್ನ ಅಮ್ಮ.. **** ಲಗೋರಿ ಆಡಲು ಹೊದಾಗ , ಪಕ್ಕದ ಮನೆಯ ಹುಡುಗನಲಿ  ಜಗಳವಾಡಿ ಮನೆಗೆ ಬಂದಾಗ , ತಪ್ಪು ನನ್ನದೆಂದು ತಿಳಿದೂ  ಪಕ್ಕದ  ಮನೆಯವರೊಂದಿಗೆ  ಜಗಳವಾಡಿದೆ , ಓ ನನ್ನ ಅಮ್ಮ. **** ಬೀಡಿ ಕಟ್ಟಿ ಸಿಕ್ಕಿದ ಹಣದಿ ನನ್ನ ನೀ ಶಾಲೆಗೆ ಕಳುಹಿಸಿ ನಾನಅಂದು ಪೇಲಾಗಿ ಮನೆಗೆ ಬಂದು ಕುಳಿತಾಗ ನೊಂದಿಲ್ಲ ನೀನು , ಹೇಳಿದೆನೀ ಇನ್ನೊಮ್ಮೆ ಬರಿ ಪರೀಕ್ಷೆಯ ದನ್ಯನಾದೆ , ಓ ನನ್ನ ಅಮ್ಮ....  **** ಕೆಲಸಕ್ಕೆ ದುಬಾಯಿಗೆ ಹೊದಾಗ ಮಗನೇ ನೀನೇಗಿದ್ದಿ ಎಂದೆ , ಎಲ್ಲಿದೆ ದುಡಿದ ಸಂಬಳ ಎನ್ನಲಿಲ್ಲ ಯಾವಾಗ ಬರುವೆ ಮಗನೇ ತಂದೆಗೆ ಒಂದು ಜೊತೆ ಬಟ್ಟೆ ತಾ  ಎಂದೆ ನನಗೆ ಬೇಡ ಎಂದೇ , ತ್ರಿಪ್ತಿಯ ಬದುಕು , ಓ ನನ್ನ ಅಮ್ಮ.. **** ಚಂದದ ಹುಡುಗಿಯ ನೊಡಿ ಮದುವೆ ಆದಾಗ , ಹ...