** ಉಸ್ತಾದ್ . ಉಸ್ತಾದ್ . ಉಸ್ತಾದ್ **


ಊರಿನ ಉಸ್ತಾದ್ ಎಂದಾಗ ಏನೊ ಮೈ ಒಮ್ಮೆ ರೊಮಾಂಚಣ , ಅವರಲ್ಲಿ ಮಾತಾಡುವಾಗ ಮನಸ್ಸಿಗೆ ನೆಮ್ಮದಿ , ನಮ್ಮ ಕಷ್ಟವನ್ನು ಅವರಲ್ಲಿ ಹೇಳಿ ದುಆ ಮಾಡಲು ವಸೀಅತ್ ಮಾಡುದು . ಮಸಿದಿ ಕಾರ್ಯಮಕ್ಕೆ ಬೇರೆ ಕಡೆಯ ಗುರುಗಳು ಬರುತ್ತಾರೆ. ಎಂದಾಗ ನನಗಂತು ಬಹಳಾ ಸಂತೊಷ.
 ಒಂದು ಕಾಲದಲ್ಲಿ ಊರಲ್ಲಿ ಏನೇ ಸಮಾರಂಬ ನಡೆಯುದಿದ್ದರೂ ಗುರುಗಳ ಆಶ್ರಯವಾಗುವ ಜನತೆ , ಅವರನ್ನು ಗೌರವಿಸುವ ಮುಸ್ಲಿಂ ಸಮುದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಗುರುಗಳ ನಡತೆಯೋ , ಜನರ ತಿಳುವಳಿಕೆಯೋ ಸ್ವಲ್ಪ ಕಡಿಮೆಯಾಗಿದೆ . 
    ಇದಕ್ಕೆಲ್ಲ ಕಾರಣ ಇತ್ತೀಚೆಗೆ ಉಸ್ತಾದರಿಗೆ ಉಂಟಾಗುವ ಹಣದ ವ್ಯಾಮೊಹ , ಮತ್ತೊಂದು  ಸಂಘಟನೆಯ ಬಗ್ಗೆ ದ್ವೇಷ , ಸ್ಥಾನಕ್ಕೆ ಕಿತ್ತಾಟ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆ.
ಒಂದು ಮಹಲ್ಲಲ್ಲಿ ದೀನೀ ಸೇವೆಗಾಗಿ ನಿಂತು ಸಂಭಳ ಗಳಿಸಬೇಕಾದ ಉಸ್ತದಾರು ಹಣದ ಆಮಿಷ ಒಡ್ಡುವ ಪದ್ದತಿ ದಿನೇ ದಿನೇ ಏರುತ್ತಿದೆ. ಅವರ ಖರ್ಚಿಗಾಗುವಷ್ಟು ಹಣದ ಆಮಿಷವಲ್ಲ ಅದು ಬೇರೆ ಉಸ್ತಾದರಿಗಿಂತ ಹೆಚ್ಚು ಗಳಿಸಬೇಕೆಂಬ ಹಂಬಳ. 
   ಪಾರ್ಟಿ ಅನ್ನೊ ಪದ ಹೇಳಲೇ ಬೇಕೆಂದಿಲ್ಲ ಒಂದು ಉಸ್ತಾದ್ ಇನ್ನೊಂದು  ಉಸ್ತಾದರ ಮುಂಡಾಸ್ , ನಡತೆ , ವಸ್ತ್ರದಾರಣೆ ಕಂಡು ಮುಖ ತಿರುಗಿಸಿ ನಡೆಯುತ್ತಿರುದು ಕಂಡು ನಮಗೆ ಶಂಶಯ ಇವರಿಬ್ಬರೂ ಕಲಿತದ್ದು ಖುರಾನಲ್ಲವೇಯೆಂದು. ಒಂದು ಸಾಮಾನ್ಯ ವ್ಯಕ್ತಿ ತನಗೆ ಸ್ವಲ್ಪ 'ಇಲ್ಮ' ಸಿಗಲೆಂದು ಸಮ್ಮೇಳನಗಳಿಗೆ ಹೊದರೆ ಸಾಕು ನಾವು ಸತ್ಯ ವಂತರು , ನಾವು ಸತ್ಯವಂತರೆಂಬಂತೆ ಕಚ್ಚಾಟ , ಜೊತೆಗೆ ಅದಕ್ಕೆ ಉಪ್ಪು ಖಾರ ಹಾಕಲು ನಾಲ್ಕಯ್ದು ಮುಜಾಹಿದೇತರ ಪಾರ್ಟಿಗಲ ಕಚ್ಚಾಟ ,  ಒಟ್ಟಿನಲ್ಲಿ ಭಾಷಣ ಆಲಿಸಲು ಬಂದ ಟುವಾಲುದಾರಿ ನಾಲ್ಕು ಘೊಷಣೆ ಕೂಗಿ ಬರೀ ಕೈಯಲ್ಲಿ ಮುಂದೆ ನಡೆಯುತ್ತಾನೆ.
    ಕಷ್ಟಪಟ್ಟು ರಾತ್ರಿ , ಹಗಲು ಕಲಿಸಿದ ವಿದ್ಯಾರ್ಥಿಗಲು ದಾರಿತಪ್ಪುತಿರುದು ಇನ್ನೂ ಖೇದವೆಣಿಸುತ್ತಿದೆ , ಒಂದು ಹುಡುಗಿಗೆ ಕಡಿಮೆ ಎಂದರು 8ನೇ ತರಗತಿಯ ವರೆಗೆ ಇಸ್ಲಾಂ ಧರ್ಮದ ಬಗ್ಗೆ ಕಲಿಸಿ ಮದ್ರಸ ಬಿಟ್ಟು ಒಂದೇ ವರ್ಷದಲ್ಲಿ ಅನ್ಯ ಸಮುದಾಯದ ಹುಡುಗನ ಜೊತೆ ಹೊಡಿಹೊಗುವ ಸನ್ನಿವೇಶಗಳು ನಡೆಯುತ್ತಿದೆ . ಇದಕ್ಕೆ ಹೆತ್ತು ಸಾಕಿದ ಮನೆಯವರಾ ಅಥವಾ ಇಸ್ಲಾಂ ಧರ್ಮದ ಬಗ್ಗೆ ತಿಳಿಸಲು ವಿಪಳವಾದ ಗುರುಗಳು ಕಾರಣವೇ ಎಂಬ ಸಂಶಯ ಸಾಮಾನ್ಯ ಜನರಲ್ಲಿ ಮೂಡಿದೆ.
ವರದಕ್ಷಿಣೆ ಅಪರಾದ , ಹರಾಂ ಎಂದು ಮೈಕದಲ್ಲಿ ಕೂಗಾಡುವಕೆಲ ಉಸ್ತಾದರಂತೂ ಜೇಬು ತುಂಬಿಸಲು ವರದಕ್ಷಿಣೆ ಪಡೆದ ಮದುವೆಯ ನೇತ್ರುತ್ವ ಕೊಡುತ್ತಿರುದು ಮುಸ್ಲಿಂ ಸಮುದಾಯ ತಲೆ ತಗ್ಗಿಸುವಂತೆ ಮಾಡಿದೆ .
      ಸ್ವಲ್ಪ ತಿಳಿದ ನಾಲ್ಕು ಜನ ಉಳಿದ ನಾಲ್ಕು ಜನರಿಗೆ ತಿಳಿಸುವ ಉದ್ದೇಶದಿಂದ ಸ್ಟೇಜ್ ಹತ್ತಿದರೆ ಇಸ್ಲಾಂ ಧರ್ಮ ಒಂದು ಗುಂಪಿಗೆ ಸಿಮಿತವೆಬಂತೆ ಮಾತು , ಐಕ್ಯತೆಗೆ ಶ್ರಮಿಸಿದರೆ ಘೊರ ಅಪರಾಧ ವೆಂಬಂತೆ ತೊರ್ಪಡಿಸುವಿಕೆ . ಏನೇ ಇರಲಿ  ಮುಂದೊಂದು ದಿನ ಇಸ್ಲಾಂ ಧರ್ಮಕಲಿತ  ಉಸ್ತಾದರು ಐಕ್ಯತೆಯಿಂದ ನೇತೃತ್ವ ಕೊಟ್ಟು ಮುನ್ನಡೆಸಿದರೆ ಮುಸ್ಲಿಂ ಸಮುದಾಯಕ್ಕೆ ವಿಜಯ ಕಂಡಿತಾ.. 

ಇನ್ಶಾ ಅಲ್ಲಾ...

( ಇಲ್ಮ್ ಕಲಿತ ಪ್ರತಿಯೊಂದು ಉಸ್ತಾದರಿಗೆ ಗೌರವಿಸಿ. ಈ ಮೇಲೆ ಬರೆದ ಲೇಖನ ಯಾವುದೇ ಉಸ್ತಾದರಿಗೆ ನೋವುನಿಸುದಕ್ಕಲ್ಲ. ಕೆಲ ಸನ್ನಿವೇಶಗಳು ಅಷ್ಟೇ. )

ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ