ವಾಸ್ತವವೇ ಸತ್ಯ , ನಿತ್ಯ....
ವಾಸ್ತವವೇ ಸತ್ಯ , ನಿತ್ಯ....
***
ಕೊಲ್ಲುವವನಿಗೆ ತಿಳಿಯದಾಗಿದೆ..
ನಾನು ಯಾರನ್ನು ಕೊಲ್ಲುತ್ತಿರುವೆನೆಂದು,
ಸತ್ತು ಹೆಣವಾಗಿ ಬೀಳುವವನಿಗೆ ತಿಳಿದಿಲ್ಲ..
ನನ್ನ ಯಾರು ಯಾಕೆ ಕೊಂದರೆಂದು..
ತಾನು ಕಷ್ಟಪಟ್ಟು ದುಡಿದಿಟ್ಟ ಆಸ್ತಿ ಅಂತಸ್ತು..
ತನಗೆ ಶಾಪವೆಂಬಂತೆ ತೊರಿದೆ,
ಆ ದೇವರು ಕೊಟ್ಟ ಅಂದದ ದೇಹ ಮುಖ,
ತನ್ನ ಸಾವಿನ ರಹಸ್ಯವೆಂದರಿತ ಸಹೊದರಿ.,
ತಾನು ದೇಶ ಉದ್ದಾರಕ್ಕೆಂದು ಪಣ ತೊಟ್ಟು..
ಖಾಕಿ ಹಾಕಿ ಮೊಸ ಮಾಡಿದಾಗ..
ನ್ಯಾಯದೇವತೆಗೆ ಕಣ್ಣಿಲ್ಲ ಎಂಬ ಸತ್ಯ ಮರೆಮಾಚಿ,
ಅಸತ್ಯದಕಡೆ ಮುಖಮಾಡಿ ನಿಂತಾಗ..,
ಸುಳ್ಳು , ಮೊಸ ಜನರಿಗೆ ಹಿಡಿಸಿದ ಗುಣವಲ್ಲವೆಂದು .,
ಅರಿತೂ ಅದನ್ನೇ ಕಸುಬಾಗಿರಿಸಿದಾಗ...
ಹುಟ್ಟು ಸಾವು ಪ್ರತಿಯೊಬ್ಬರಿಗಿದೆ ಎನ್ನುದು,
ಸುಳ್ಳಂದು ನಂಬಿಸಲು ಹೊರಟವ...
ಈ ಸುಂದರ ದೇಹ ಆರೋಗ್ಯ ಕೊಟ್ಟ ದೇವರಮರೆತು,
ಆ ಕಲ್ಲುದೇವರ ಸೃಷ್ಟಿಸಿದ ದೇವರ ದೂರಿದವ..
ಜೀವನ ಶಾಶ್ವತವಲ್ಲ, ಜೀವನದಲಿ ಮಾಡಿದ್ದು ಶಾಶ್ವತ
ಆ ಜೀವನ ಜೀವಿಸಲು ಕಲಿ ಬಾ ನೀ.....
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್ .
Comments
Post a Comment