ವರದಕ್ಷಿಣೆಗಿಂತಲೂ ಕ್ರೂರವಾಗುತ್ತಿರುವ       ವರದಕ್ಷಿಣೆ ರಹಿತ ವಿವಾಹವೆಂಬ ನಾಮಕರನ ...

ವರದಕ್ಷಿಣೆಗಿಂತಲೂ ಕ್ರೂರವಾಗುತ್ತಿರುವ 

     ವರದಕ್ಷಿಣೆ ರಹಿತ ವಿವಾಹವೆಂಬ ನಾಮಕರನ ...

       ಕೆಲ ಊರಲ್ಲಿ ಇತ್ತೀಚೆಗೆ ಕೆಲವರು ಹೇಳುತ್ತಾರೆ ಹುಡುಗಿಯ ಬಾಗ್ಯ ನೊಡಿ, ಹುಡುಗನಿಗೆ ಕಾಸಿ ಬೇಡವಂತೆ 35 ಪವನ್ ಚಿನ್ನ ಸಾಕಂತೆ ಎಂದು . ಆ ಊರವರಿಗೆ ತಿಳಿಯದ ಒಂದು ವಿಷಯವೆಂದರೆ ಹಣ ಕೊಟ್ಟರೆ 2 ಲಕ್ಷ, ಆದರೆ 35 ಪವನ್ ಚಿನ್ನಕ್ಕೆ ಸುಮಾರು 10 ಲಕ್ಷದ ಮೇಲೆ ಆಗುತ್ತೆ ಎಂದು.

     ಈ ರೀತಿಯಾಗಿ ವಿದ್ಯಬ್ಯಾಸ ರಹಿತ ಜನರನ್ನು ತಾವೆಲ್ಲ ಒಳ್ಳೆಯವರೆಂದು ನಂಬಿಸಿ , ಆಡಂಬರದ ಮದುವೆ ಮಾಡುತ್ತಿರುವವರ ಹೊಸ ಹೊಸ ಜಾಲಗಳು ಹುಟ್ಟುತ್ತಿವೆ.

    ಹುಡುಗಿಯ ತಂದೆ ವಾರಕ್ಕೂಂದುಸಲ ಶುಕ್ರವಾರ , ಶುಕ್ರವಾರ ಸಿಗುವ ಹತ್ತತ್ತು ರೂ ಒಟ್ಟುಗೂಡಿಸಿ ಒಂದು ಪವನ್ ಚಿನ್ನಕರೀದಿಸಲು ಸಾದ್ಯವಿರದ ಕಾಲದಲ್ಲಿ,

ಮತ್ತೆ ಮತ್ತೆ ಚಿನ್ನಕ್ಕಾಗಿ ಬೇಡಿಕೆ ಇಡೊರ ಮುಂದೆ ನಾವು ಮನವರಿಕೆ ಮಾಡಿಕೊಡಬೆಕಾಗಿದೆ.

      ಒಂದು ವಿಷಯವೇನೆಂದರೆ ಚಿನ್ನಕ್ಕೆ ಮತ್ತು ಆಸ್ತಿಗೆ ಅತೀ ಹೆಚ್ಚು ಬೇಡಿಕೆಇಡುವವರು ಹುಡುಗನ ಮನೆಯವರು ಅದರಲ್ಲಿ ಕಲವೊಂದು ಕಡೆ ಹುಡುಗನ ಪಾತ್ರ ಇಲ್ಲದಿರಬಹುದು , ಆದರೆ ಚಿನ್ನಕ್ಕಾಗಿ ವ್ಯಾಮೊಹ ಪಟ್ಟು ಹುಡುಗಿಯ ತಂದೆ ತಾಯಿಯ ಕಣ್ಣೀರಿಗೆ ಕಾರಣಕರ್ತರಾಗದಿರಿ.

      ತನ್ನ ಮೊಮ್ಮಗಳು ಮನೆಗೆ ಬರುವಾಗ ಕುತ್ತಿಗೆ ತುಂಬಾ ನೆಕ್ಲೇಸ್ , ಸೊಂಟ ಪಟ್ಟಿ , ಕಾಲು ಚೈನು ಇರಬೇಕು ನನ್ನ ಮಗನ ಮದುವೆಯಾಗುವ ಹುಡುಗಿ ಹಣ ಬೇಡ ಅದು ಹರಾಂ .... ಕೇವಲ ಚಿನ್ನ ಸಾಕು , ಇದ್ದರೆ ಒಂದು ಕಾರು ಕೂಡಾ ಕೊಡಲಿ ಅನ್ನುವ ಅನಕ್ಷರಸ್ತರಲ್ಲಿ ನಾವು ತಿಳಿಸಿಕೊಡಬೇಕಾದ ವಿಷಯವೇನೆಂದರೆ, ಅಮ್ಮಾ ಸಾದಿಸಿದರೆ ಚಿನ್ನ ನಾವು ಹಾಕುವ, ಅವರಲ್ಲಿ ಅಷ್ಟು ಬೇಕು ಇಷ್ಟು ಬೇಕು ಎಂದು ಬೇಡಿಕೆ ಇಡುದು ಬೇಡ ಎಂದು. 

    ಈ ಪ್ರಯತ್ನ ಪ್ರತಿಯೊಬ್ಬ ಯುವಕರಿಂದ ಆಗಬೇಕಿದೆ

      .  

                   ನಿಝಾಮುದ್ದೀನ್

                    ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ