ಜೋರ್ಡಾನಿನ ಆ ಪುಟ್ಟ ಬಾಲಕ.....!

      ಹೌದು ಗೆಳೆಯರೇ , ಮೊನ್ನೆ ನಾನು ಜೋರ್ಡಾನಿಗೆ ಭೇಟಿ ಕೊಟ್ಟಾಗ ನನ್ನ ಕನ್ನೆದುರು ಒಂದು ವಿಶೇಷ ಘಟನೆ ನಡೆಯಿತು. ತಾನು ಕೆಲ ಹೊತ್ತು ಆ ಘಟನೆಯ ನಂತರ ಚಿಂತಿಸಿ ಆ ಬಾಲಕನಿಗೆ ಬೇಷ್ಎಂದೆ..
  ಯಾಕೆಂದರೆ,
          ನಾನು ಜೋರ್ಡಾನಿನ ಅಮ್ಮಾನ್ ಎಂಬ ನಗರದಲ್ಲಿ ಮಸೀದಿಯ ಬಳಿಇರುವ ಸಾರ್ವಜನಿಕ ಶೌಚಾಲಯದ ಬಳಿ ಹೊಗುತಿದ್ದೆ.  ಅಲ್ಲಿ ಒಂದು ವ್ರದ್ದರು ಶೌಚಾಲಯಕ್ಕೆ ನೀರು ಹಾಕಿ ವೈಪರ್ನಿಂದ ಎಳೆಯುತಿದ್ದರು , ಅವರು ನೀರು ಕಾಲಿಮಾಡಿ ಸ್ವಚ್ಚಗೊಳಿಸುವಾಗ ಮತ್ತೆ ಮತ್ತೆ ಬರುತಿದ್ದ ಜನರ ಚಪ್ಪಲಿನಡಿಯಲ್ಲಿ ಅಂಟಿಕೊಂಡಿದ್ದ ಮನ್ನೆಲ್ಲ ಸ್ವಚ್ಛ ಮಾಡಿದ ಸ್ಥಳವನ್ನು ನಿಸ್ವಚ್ಚಗೊಳಿಸುತಿತ್ತು. ಆ ವ್ರದ್ದರು ಮತ್ತೆ ಮತ್ತೆ ನೀರಾಕಿ ತೊಳೆಯುತಿದ್ದರು.  ಆಗ ಅದನ್ನು ವೀಕ್ಷಿಸಿದ ನನ್ನ ಬಳಿ ಇದ್ದ ಆ ಪುಟ್ಟ ಬಾಲಕ ಬರುವ ಜನರೆಲ್ಲಾ ತಡೆದು ಒಂದು ನಿಮಿಷ , ಒಂದು ನಿಮಿಷ ಅನ್ನುತ್ತಾ ಆ ವ್ರದ್ದರ ಕೆಲಸ ಸರಾಗವಾಗಿ ಮಾಡುವಂತೆ ಮಾಡಿದ.  ಹಿಂದಿನಿಂದ ಜನರೆಲ್ಲ ಸಾಲುಗಟ್ಟಿ ನಿಂತರು .
      ಸುಮಾರು 7 ನಿಮಿಷಗಳ ನಂತರ ಅವರ ಕೆಲಸ ಮುಗಿದ ನಂತರ ಎಲ್ಲರಲ್ಲೂ ಶೌಚಾಲಯ ಪ್ರವೆಶಿಸುವಂತೆ ಹೇಳಿದ. ಇದನ್ನು ಕಂಡ ಆ ವ್ರದ್ದರು ಹೌದು ಪುಟ್ಟ ನೀನವರನ್ನು ತಡೆಯದಿದ್ದರೆ ನನ್ನ ಕೆಲಸ ಇನ್ನೂ ಅರ್ಧ ಗಂಟೆ ಮೀರುತಿತ್ತು , ನಿನಗೆ ಒಳ್ಳೆಯದಾಗಲಿ ಎಂದು ಮನೆಕಡೆ ಹೆಜ್ಜೆಹಾಕಿದರು. 
   "  ಆ ಒಂದು ಸಣ್ಣ ಘಟನೆ , ಮಾನವೀಯತೆಯ ಘಟನೆ "
       ಹೌದು ಗೆಳೆಯರೇ ನಾವು ನಮ್ಮಕ್ಕಿಂತ ಸಣ್ಣಪುಟ್ಟ ಕೆಲಸಮಾಡುವ ಜನರ ಕೆಲಸಗಳನ್ನು ಕೀಳಾಗಿ ನೊಡದೆ ಅವರ ಕಲಸದ ವ್ಯತೆಯನ್ನು ಅರ್ಥಮಾಡಿಕೊಳ್ಳಬೇಕಿದೆ...
     
 ....             ರೈಟರ್
                   ನಿಝಾಮುದ್ದೀನ್
                    ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ