$ ನಾನೊಬ್ಬ ಪ್ರವಾಸಿ $
***
ನಾನೊಬ್ಬ ಪ್ರವಾಸಿ
ಆಗುವೆನು ಗರ್ ವಾಪಾಸಿ
ಮಾಡಬೇಡ ಬಿಕ್ನಾಸಿ 
ಅಲ್ಲಾಹನು ಮಾಡುವನು ಎಲ್ಲಾ ವಾಸಿ..
***
ಮರಳುಗಾಡಿನಲಿ ಇರುವೆನು 
ಬಿಸಿಲ ಬೇಗೆಯಲಿ ಕರೆಯುವೆನು
ವಿಸ್ವಾಸದಿಂದ ಇಲ್ಲಿ ಜೀವಿಸುವೆನು
ಎಂದೂ  ಸತ್ಯದ ದಾರಿಯಲಿ ನಡೆಯುವೆನು...
***
ಮನೆಯವರಿಗಾಗಿ ಇಲ್ಲಿ ದುಡಿಯುವಾಗ
ತಂದೆ , ತಾಯಿ ಊರಿಗೆ ಕರೆಯುವಾಗ
ಕಫಿಲ್ ಸ್ವಲ್ಪ ಕಿರಿಖಕಿರಿ ಮಾಡುವಾಗ ಅಲ್ಲಾಹನಲಿ ಹಗಳಿರುಳು ದುಆಮಾಡುವೆನು..
***
ಭಾರತೀಯನೊಬ್ಬ ಸಿಕ್ಕಾಗ
ಇಖಾಮ ಬದಲಿ ಬಂದಾಗ
ಊರಿಗೆ ಹೊಗಲು ಅನುವು ಮಾಡಿದಾಗ
ಸುಖವ ಗೆಳೆಯರಲಿ ಹಂಚಿದೆನು.....
***
ಮಕ್ಕಳಿಗೆ ಬಟ್ಟೆ ಕರೀದಿಸಿ
ಊರಿಗೆ ಟಿಕೇಟ್ ಖಾದಿರಿಸಿ
ಗೆಳೆಯರು ನನ್ನ ಕುಳ್ಳಿರಿಸಿ
ಕೇಳಿದರು ಮರಳುದು ಯಾವಾಗ...
************************
ತಿಳಿಯಿತು ಆಗಲ್ಲ ನಾನೆಂದು ಗರ್ ವಾಪಾಸಿ.


ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ