ಮಹಿಳೆ ಎಂದಾಗ ನನ್ನ ಮನಸಲ್ಲಿ..

***************

ಮಹಿಳೆಯರಿಗೆ ಪ್ರತಿಯೊಂದು ಧರ್ಮಕೂಡಾ ವಿಷೇಶ ಸ್ಥಾನ , ಮಾನ ಕಲ್ಪಿಸಿದೆ . ಮಹಿಳೆಯರು ಈ ಸಮಾಜದ ಅತ್ಯಮೂಲ್ಯ ವಸ್ತು , ಮಾನವನ ಏಳಿಗೆಯಲ್ಲಿ ಶ್ರಮಿಸುವ ಶ್ರಮಜೀವಿ . ಕೆಲವರಿಗೆ ತಾಯಿ , ಅಕ್ಕ , ತಂಗಿ , ಅತ್ತಿಗೆ ಈಗೆ ಹಲವಾರು ಮಹಿಳೆಯರು ಒಟ್ಟಿಗೆ ಒಂದೇ ಮನೆಯಲ್ಲಿ ಸೇರಿ ಚಂದದ ಜೀವನ ನಡೆಸುದು ಸಹಜ .
        ಮಹಿಳೆ ಎಂದಾಗ ಇತ್ತೀಚಿನ ದಿನಗಳಲ್ಲಿ ಒಂದು ಮಾರಟ ವಸ್ತುವಾಗಿ , ಆಕರ್ಷಕ ವಸ್ತುವಾಗಿ , ಮನೊರಂಜನೆ ವಸ್ತುವಾಗಿ ಉಪಯೊಗಿಸುತ್ತಿರುದು ನಮ್ಮ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. 
        ಒಂದು ಹೆಣ್ಣು ದೂರದಿಂದ ಬರುವಾಗ ಪಡ್ಡೇ ಹುಡುಗರ ಮನದಲ್ಲಿ ರೊಮಾಂಚಣ ಗೊಂಡು ಆ ಹುಡಿಗೆ ತಮಾಷೆಮಾಡಿ ಹಿಂಬಾಲಿಸುದು ಸಾಮಾನ್ಯ , ಶಾಪಿಂಗ್ ಮಾಲ್ ಗಳಲ್ಲಿ ಹೆಣ್ಣನ್ನು ಪಾಲೋಮಾಡುದು , ನಂಬರ್ ಕೊಡಲು ಪ್ರಯತ್ನಿಸುದು ಕೂಡ ಸಾಮಾನ್ಯಆಗಿದೆ. ಇದಕ್ಕೆಲ್ಲ ಕಾರಣ ಹೆಣ್ಣಿನ ವಸ್ತ್ರದಾರಣೆ ಮತ್ತು ಅತಿಯಾದ ಮೇಕಪ್,       ಹೌದು ಒಂದು ಹೆಣ್ಣಿನ ವಸ್ತ್ರಗಳು ಒಂದು ಹುಡುಗನ ಕಾಮ ದ್ರಿಷ್ಟಿಯಲ್ಲಿ ನೊಡಲು ಕೈಬೀಸಿ ಕರೆಯುವಂತಿರುತ್ತದೆ .
    ಇನ್ನು ಹೆಣ್ಣನ ಮಾತುಗಳಿಂದ ಗ್ರಾಹಕರನ್ನು ಆಕರ್ಷಿಸಲು ಉಪಯೊಗಿಸುತ್ತಿರುದವ ವ್ಯಪಾರಗಳು ದಿನೇ ದಿನೇ ಏರುತ್ತಿದೆ , ಮೊಬೈಲ್ ಕಸ್ಟಮರ್ ಕೇರ್ , ಮಾಲ್ನಲ್ಲಿ ಬಿಲ್ ಕಲೆಕ್ಟರ್ , ಮಸಾಜ್ ಸೆಂಟರ್ , ಮೆಡಿಕಲ್ ಶಾಪ್ , ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರನ್ನು ಕೇವಲ ವ್ಯಾಪಾರ ವೃದ್ಧಿಗೆ ಬಳಸುತ್ತಿರುದು ಕಂಡುಬರುತ್ತಿದೆ. 
     ಇತ್ತೀಚೆಗೆ ಜಾತಿ , ದರ್ಮ , ಪಂಗಡಗಳಲ್ಲಿ ಕಚ್ಚಾಡಿಸಲು ಹೆಣ್ಣಿನ ಪಾತ್ರವನ್ನು ಬಳಸುದು ತುಂಬಾ ಖೇದವೆಣಿಸುತ್ತಿದೆ . ದರ್ಮಗಳ ವಿರುದ್ದ ಕಚ್ಚಾಡಿಸಲು ರಾತ್ರಿ , ಹಗಲು ಡುಡಿಯುತ್ತಿರುವ ಕೊಮುವಾದಿಗಲು ಹೆಣ್ಣನ್ನು ಮಾನಭಂಗಕ್ಕೆ ಯತ್ನ ಎಂಬ ಶೀರ್ಷಿಕೆಯಡಿ ಬಳಸಿ  ಎರಡು ಪವಿತ್ರ ಧರ್ಮಗಳ ನಡುವೆ ಕಚ್ಚಾಡಿಸಿ ಕುಷಿಪಡುದು ಸಮಾಜಕ್ಕೆ ಕಂಟಕವಾಗಿ ಮಾರ್ಪಟ್ಟಿದೆ.
  ನನ್ನ ಪ್ರಕಾರ ಮುಂದಿನ ದಿನಗಳಲ್ಲಿ ಮಹಿಳೆಯರು ಕೊಮುವಾದಿಗಳ ಟೊಳ್ಳು ಭರವಸೆಗೆ ಕಿವಿ ಕೊಡದೆ ನಿಮ್ಮ ದಾರಿಯಲ್ಲಿ ನೀವು ನಡೆದರೆ ಸಮಾಜಕ್ಕೂ ಉತ್ತಮ , ನಿಮಗೂ ಉತ್ತಮ ಎನ್ನುದು ನನ್ನ ಅಭಿಪ್ರಾಯ....

**********

ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ