****) ಅಮ್ಮನ ನೆನಪನ್ನು ಸ್ಮರಿಸುತ್ತಾ (***

ಅಮ್ಮಾ ಆ ನಿನ್ನ ಹಳೇ ನೆನಪುಗಳು
ಮಾಸಲ್ಲ ನಿನ್ನ ಆ ಕನಸುಗಳು
ನಿನ್ನ ಆ ಅಪ್ಪುಗೆಯ ಬೆಚ್ಚನೆಯ
ನೆನಪು ಎಂದೂ ಮಾಸಲ್ಲ 
ನಾನು ನಿನ್ನ ಹೊಟ್ಟೆಯಲ್ಲಿ ಇರುವಾಗ
ಕಂಡ ಕನಸು ಎಷ್ಟಮ್ಮಾ,
ನನ್ನ ಹೆತ್ತಾಗ ಪಟ್ಟ ನೊವು ಮರಳಿ 
ನಿನಗೆ ಕೊಡಲ್ಲ , ಓ ನನ್ನ ಅಮ್ಮ..
****
ನಾನಂದು ಚಿಕ್ಕವನಿರುವಾಗ
ಬಿದ್ದ ಏಟಿನಲಿ ಮನೆಗೆ ಬಂದಾಗ ,
ಕಮ್ಯುನಿಷ್ಟ್ ಎಳೆಯ ಕಟ್ಟಿ ,
ಪಾಪು ನಿನು ಊಟ ಮಾಡಿ ಮಳಗು ಎಂದೆ.
ಅಮ್ಮ ನೀ ಊಟ ಮಾಡಿದೆಯಾ 
ಎಂದು ನಾ ಕೇಳಿಲ್ಲ , ಓ ನನ್ನ ಅಮ್ಮ..
****
ಲಗೋರಿ ಆಡಲು ಹೊದಾಗ ,
ಪಕ್ಕದ ಮನೆಯ ಹುಡುಗನಲಿ 
ಜಗಳವಾಡಿ ಮನೆಗೆ ಬಂದಾಗ ,
ತಪ್ಪು ನನ್ನದೆಂದು ತಿಳಿದೂ
 ಪಕ್ಕದ  ಮನೆಯವರೊಂದಿಗೆ
 ಜಗಳವಾಡಿದೆ , ಓ ನನ್ನ ಅಮ್ಮ.
****
ಬೀಡಿ ಕಟ್ಟಿ ಸಿಕ್ಕಿದ ಹಣದಿ
ನನ್ನ ನೀ ಶಾಲೆಗೆ ಕಳುಹಿಸಿ
ನಾನಅಂದು ಪೇಲಾಗಿ ಮನೆಗೆ
ಬಂದು ಕುಳಿತಾಗ ನೊಂದಿಲ್ಲ ನೀನು ,
ಹೇಳಿದೆನೀ ಇನ್ನೊಮ್ಮೆ ಬರಿ ಪರೀಕ್ಷೆಯ
ದನ್ಯನಾದೆ , ಓ ನನ್ನ ಅಮ್ಮ.... 
****
ಕೆಲಸಕ್ಕೆ ದುಬಾಯಿಗೆ ಹೊದಾಗ
ಮಗನೇ ನೀನೇಗಿದ್ದಿ ಎಂದೆ ,
ಎಲ್ಲಿದೆ ದುಡಿದ ಸಂಬಳ ಎನ್ನಲಿಲ್ಲ
ಯಾವಾಗ ಬರುವೆ ಮಗನೇ
ತಂದೆಗೆ ಒಂದು ಜೊತೆ ಬಟ್ಟೆ ತಾ 
ಎಂದೆ ನನಗೆ ಬೇಡ ಎಂದೇ ,
ತ್ರಿಪ್ತಿಯ ಬದುಕು , ಓ ನನ್ನ ಅಮ್ಮ..
****
ಚಂದದ ಹುಡುಗಿಯ ನೊಡಿ
ಮದುವೆ ಆದಾಗ , ಹೆಂಡತಿಯ 
ಪ್ರೀತಿ ಮುಂದೆ ನಿನ್ನ ಪ್ರೀತಿ ಸನ್ನದಾಗಿ
ಕಂಡು ಮನೆ ಬಿಟ್ಟು ಹೊಗುವಾಗ
ನಿನ್ನ ಬುದ್ದಿ ಮಾತಿಗೆ ಕವಿಕೊಡದೆ
ಬೆರೆಮನೆಯಲಿ ವಾಸಿಸುತ್ತಾ ಇದ್ದೆ ,
ತಿಳಿಯಿತು ನಾನೆಷ್ಟು ಕ್ರೂರ , ಓ ನನ್ನ ಅಮ್ಮ..
****
ನಾ ಬೇರೆ ಮನೆಯಲ್ಲಿ ಇದ್ದಾಗ
ನನ್ನ ಮಕ್ಕಳಿಗೆ ಬಟ್ಟೆ ತಂದು ಕೊಟ್ಟಾಗ
ತಿಳಿದಿಲ್ಲ ನನಗೆ ಅದು ನೀ ಮಾಡಿದ 
ಸಾಲದ ಹಣವೆಂದು , ಮಕ್ಕಳು
ಕುಷಿಯಿಂದ ನಕ್ಕರು ನಾ ಅದನು
ಕಂಡು ಕುಷಿಪಟ್ಟೆ , ಓ ನನ್ನ ಅಮ್ಮ..
****
ನೀ ಇಹಲೊಖ ತ್ಯಜಿಸಿ , ಪರಲೊಖ
ವಾಸಿಯಾದಾಗ , ಮನೆಗೆ ಬಂದು
ನಿನ್ನ ಮಖವ ಕಂಡು ಬಿಕ್ಕಿ , ಬಿಕ್ಕಿ
ಅತ್ತೆ ಪ್ರಯೋಜನವೇನಿಲ್ಲ ಎಂದು ತಿಳಿದು . 
ಆಗ ತಿಳಿಯಿತು ಅಮ್ಮ ನನಗೆ ಮಾಡಿದ
ತ್ಯಾಗದ ಲೆಕ್ಕ , ಈಗ ದುಆ ಮಾಡುತಿರುವೆನು
ನಿನ್ನ ಪರಲೊಖ ವಿಜಯಕ್ಕೆ ಓ ನನ್ನ ಅಮ್ಮ...

********************
ಹತ್ತು ಮಕ್ಕಳನ್ನು ಹೆತ್ತ ತಾಯನ್ನು , ಅದೇ ಹತ್ತು ಮಕ್ಕಳು ಸಾಕಲು ಕಷ್ಟಪಡುವ ಈ ಕಾಲದಿ ,
ಅಮ್ಮನ ನೆನಪು ಮರೆತ ಪ್ರತಿಯೊಬ್ಬರನು ಎಚ್ಚರಿಸುತ್ತಾ... ಎಲ್ಲಾ ತಾಯಂದಿರ ಒಮ್ಮೆಲೇ ಸ್ಮರಿಸುತ್ತಾ....

" ಅಮ್ಮ ನೀನು ಎಷ್ಟು ದನ್ಯ "

ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ