# ರೈತನ ನೊವು #

****

ರೈತನೊಬ್ಬ ದುರುಗುಟ್ಟುತ
ನೊಡುತಿಹನು ,
ಮಳೆರಾಯನ ಕೈ ಬೀಸಿ
ಕರೆಯುತಿಹನು ,
ತಿಳಿದಿಲ್ಲ ನಮಗೆ ಮಳೆಯಿಂದ ಬೆಳೆ ಎಂದು.....

ಮಳೆಗಾಲ ಬಂದಾಗ
ಹೊಲದಕಡೆ ಹೊರಟಿಹನು ,
ಮಳೆ ಸಲ್ಪ ಬಂದಾಗ 
ದೇವರಿಗ ಕೈಮುಗಿಯುತಿರುವನು ,
ತಿಳಿದಿಲ್ಲ ನಮಗೆ ರೈತನಿಗೆ ಮಳೆಯೇ ಬದುಕೆಂದು...

ಹೊಲದಲ್ಲಿ ಬೀಜವ ಬಿತ್ತಿ
ಮೊಳಕೆಗೆ ಕಾಯುತಿಹನು ,
ಫಸಲು ಕೈಗೆ ಸಿಕ್ಕಾಗ
ಮನದಲ್ಲಿ ನಗುವ ಬೀರುವನು ,
ತಿಳಿದಿಲ್ಲ ನಮಗೆ ರೈತನ ನಿರೀಕ್ಷೆ ಪಸಲೆಂದು...

ಗೊಡಾನಿಗೆ ಬಣ್ಣ ಹಚ್ಚಿ
ಕ್ರಿಮಿ ಕೀಟದಿ ರಕ್ಷಣೆ ಮಾಡಿ ,
ಒಣಗಿದ ಪಸಲನ್ನು
ಬದ್ರವಾಗಿ ಶೇಖರಿಸಿಟ್ಟಾಗ ,
ತಿಳಿದಿಲ್ಲ ನಮಗೆ ಅದು ರೈತನ ಬಂಗಾರವೆಂದು....

ಸಿಕ್ಕ ಫಸಲೊಂದಿಗೆ 
ಮಾರುಕಟ್ಟೆಗೆ ಹೊದಾಗ ,
ದಲ್ಲಾಳಿಗಳ ಕೈಗೆ ಸಿಕ್ಕು 
ಬೆಳೆದ ಬೆಳೆ ಮೂರು ಕಾಸಿಗೆ
ಹಾರಾಜಾಗಿ , ಬೇಸತ್ತ
ಮನೆಕಡೆ  ಹೊರಟಾಗ 
ತಿಳಿದಿಲ್ಲ ನಮಗೆ ಆಬೆಳೆ ರೈತನ ನೂರುದಿನದ ಫಲವೆಂದು,

******

ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ