ಕ್ಲೀನ್ ಸಿಟಿ ಮತ್ತು  ಧೂಳು  ಸಿಟಿ..
...........
     ಹೌದು ಗೆಳೆಯರೇ , ನಿನ್ನೆಯ ತನಕ ದುಬಾಯಿ ಮತ್ತು ರಿಯಾದ್ ಎಂಬೀ ನಗರಗಳಲ್ಲಿ ದುಡಿಯುವ ಪ್ರವಾಸಿಗರಿಗೇನೊ ಒಂದು ಕುಷಿ . ನಾವೆಲ್ಲ ಇರುದು ಕ್ಲೀನ್ ಸಿಟಿ ಯಲ್ಲಿ ಎಂದು..
     ಪಾಪ ನಿನ್ನೆ ಅಂದುಕೊಂಡದೆಲ್ಲ ಸುಲ್ಲಾಯಿತು , ಒಮ್ಮೆಲೇ ಆಕ್ರಮಿಸಿದ ಆ ದೈತ್ಯ ಹುಡಿಗಾಳಿಗೆ ತತ್ತರಿಸಿ ಹೊದ ಜನ ದೂಳಿಲ್ಲದ ಸ್ಥಳಹುಡುಕುವಲ್ಲೇ ಬ್ಯುಸಿಆದರೇನೊ. 
       ಮೊನ್ನೆ ನನ್ನೊಬ್ಬ ದುಬಾಯಿಯ ಗೆಳೆಯ ಪೊನುಮಾಡಿ ಸಮಾಲೋಚನೆ ವಿಚಾರಿಸಿದಾಗ , ನೀನಿರುವುದು ತಬೂಕಿನಲ್ಲಿಯಾ ಎಂದಾಗ ಹೌದು ಎಂದೆ. ಆಗ ಅವನು , ಓ ಮಾರಯ ಅದೊಂದು ಸಣ್ಣ ಊರು , ಒಂತರಾ ಹಳ್ಳಿತರ ಎಂದ.  ನಾನಿರುವುದು ದುಬಾಯಿಯಲ್ಲಿ ಇಲ್ಲಿ ಸುಂದರವಾದ ಕಟ್ಟಡಗಳು , ಶಾಪಿಂಗ್ ಮಾಲುಗಲು , ವಿಶ್ದ ನಾನಾಕಡೆಯ ಪ್ರವಾಸಿಗರು , ಮನೊರಂಜನೆಯ ನಗರಗಳು ಆಹಾ ಒಂತರಾ ಕುಶಿಕೊಡುವ ಪ್ರದೇಶ ಎಂದ. ಆಗ  ನಾನು ಮುಂದಿನವರ್ಷ ದುಬಾಯಿಗೆ ಕಲಸಹುಡುಕಲು ಹೊಗಬಹುದೇನೇ ಅಂದುಕೊಂಡೆ .
      ಇಂದು ನನಗಾಯಿತು ಅಲ್ಲಾಹನ ವಿದಿಯಾಟದ ಮುಂದೆ ಯಾವ ಸುಂದರ ನಗರಗಳು ತಲೆ ಎತ್ತಲು ಸಾದ್ಯವಿಲ್ಲ. ಅಲ್ಲಾಹನ ಒಂದು ಸಣ್ಣ ಪರಿಕ್ಷಣಕ್ಕೆ ಎಷ್ಟೋ ಸಾವಿರ ಕೊಟಿ ರೂಪಾಯಿ ನಷ್ಟವಾಗಿ, ಅಂಗಡಿ ಮುಂಗಟ್ಟು ಮುಚ್ಚಿ , ಶಾಲಾ ಕಾಲೇಜು ರಜೆ ಸಾರಿ , ಆಪೀಸು ಬಂದು ಮಾಡಿ ಮನೆ ಕಡೆ ಹೊರಟು ಹೊದರು.
        ವಾಹನ ಚಾಲಕರು ರಸ್ತೆ ಸರಿಯಾಗಿ ಕಾಣದೆ ಹೆಡ್ ಲೈಟ್ ಹಾಕಿ ಪ್ರಯಾಣಿಸುವ ಸ್ತಿತಿ ಉಂಟಾಯಿತು , ರಸ್ತೆಯಲ್ಲಿ ನಡೆದಾಡುವವರು ಮಾಸ್ಕ್ ದರಿಸಬೇಕಾಯಿತು , ವಿಮಾನ , ಮೆಟ್ರೊ ನಿಲ್ದಾಣದಲ್ಲೂ ಕೂಡ ದೂಳು ಆವರಿಸಿದ್ದರಿಂದ ಕೆಲವೊಂದು ವಿಮಾನ ಹಾಗು ಮೆಟ್ರೊ ರದ್ದು ಗೊಲಿಸಲಾಯಿತು ,  
       ಅದೇ ಗೆಳೆಯರೆ ಅಲ್ಲಾಹನ ವಿದಿಯಾಟದ ಮುಂದೆ ಏನೂ ಇಲ್ಲ. ನಾವಿರುವ ಊರೇ ನಮಗೆ ಸುಂದರ. 

   ಅಲ್ಲಾಹನೇ ಪ್ರವಾಸಿಯಾಗಿ ದುಡಿಯುವ  ನಮೆಲ್ಲಾ ಸಹೊದರ , ಸಹೊದರಿಯರನ್ನು ನೀನೇ ಕಾಪಾಡು... ಯಾ ಅಲ್ಲಾ.....

 ಮುಂದಿನ ದಿನಗಳಲ್ಲಿಯೂ ಇದೇರಿತಿ ದೂಳಿನಗಾಳಿ ಇರುವ ಮುಣ್ಣೆಚ್ಚರಿಕೆ ನೀಡಿದ ಹವಾಮಾನ ಇಲಾಖೆ . ಆದುದರಿಂದ ದುಬಾಯಿ ಹಾಗು ರಿಯಾದಿನ ಸಹೊದರರು ಸ್ವಲ್ಪ ಎಚ್ಚರವಹಿಸಬೇಕು...

                     ನಿಝಾಮುದ್ದೀನ್
                    ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ