ಚರ್ಚಿಸುವ ಗೆಳೆಯಾ,
      ಚರ್ಚಿಸುವ ವಿಷಯ ತುಂಬಾ ಇದೆ ಗೆಳೆಯಾ...

****

ದೊಡ್ಡ ದೊಡ್ಡ ಚರ್ಚೆ ನಡೆಸುತಿಹರು
ಗೊಂದಲಗೊಲಿಸುವ ಉರೂಸಿನ ಬಗ್ಗೆ......
ಚರ್ಚೆ ಮಾಡಲ್ಲ ಸಮುದಾಯದಲ್ಲಿ
ಒಂದೊತ್ತು ಊಟಸಿಗದವರ ಬಗ್ಗೆ.....

ಅದೆಷ್ಟೋ ನಿರಪರಾದಿಗಲು ಜೈಲಲ್ಲಿ
ಕಾಲ ಕಲೆಯುತಿಹರು ಅವರ ಬಗ್ಗೆ ಇಲ್ಲ ಚರ್ಚೆ....
ತನ್ನ ಮನೆಯಲ್ಲಿರುವ ನಾಲ್ಕೈದು ಹೆಣ್ಣಿನ
ಕುರಿತು ದುಃಖಿಸುವವರ ಬಗೆಗಿಲ್ಲ ಚರ್ಚೆ.....

ಒಂದು ಸಣ್ಣ ಗುಡಿಸಲಿನ ಆಸೆಗಾಗಿ ಶುಕ್ರವಾರ
ಮಸಿದಿಕಡೆ ಹೊರಟವರ ಬಗ್ಗೆ ಇಲ್ಲ ಚರ್ಚೆ....
ವರದಕ್ಷಿಣೆಯೆಂಬ ಪೆಡುಂಬೂತದ ಆಕ್ರಮನದ
ಬಗ್ಗೆ ತಲೆಕೆಡಿಸುವ ತಂದೆತಾಯಿಯ ಬಗ್ಗೆ ಇಲ್ಲ ಚರ್ಚೆ....

ಅಲ್ಲಾಹನ ವಿದಿಯಾಟದ ಆಕ್ಸಿಡೆಂಟ್ನಲ್ಲಿ ಕಾಲು
ತುಂಡಾಗಿ ಮನೆಯಲ್ಲಿ ಕಣ್ಣೀರಿಡವವನ ಬಗ್ಗೆ ಇಲ್ಲ ಚರ್ಚೆ....
ಅನಾವಷ್ಯಕ ಕರ್ಚಿನಿಂದ ಆಡಂಬರದ ಮದುವೆ,
ಮಾಡಿ ಊರ ಬಡ ಹೆಣ್ಣುಮಕ್ಕಳಲಿ ಆಸೆ ಉಟ್ಟಿಸೊರ ಬಗ್ಗೆ ಇಲ್ಲ ಚರ್ಚೆ...

ಯಾವುದೊ ಒಬ್ಬನ ಕಾಮಕೃತ್ಯಕ್ಕೆ ತುತ್ತಾದ
ಮಕ್ಕಳ ಬವಿಷ್ಯದ ಬಗ್ಗೆ ಇಲ್ಲ ಚರ್ಚೆ...
ಪಾಶ್ಚಾತ್ಯ ಸಂಸ್ಕೃತಿಗೆ ತುತ್ತಾಗಿ
ಅನ್ಯನೊಂದಿಗೆ ಓಡಿಹೊಗೊರ ಬಗ್ಗೆ  ಇಲ್ಲ ಚರ್ಚೆ...

ಬುದ್ದಿ ಇರುವ ಓ ನನ್ನ ಸಹೊದರ ....
ಯಾರದೊ ಆಚರನೆಯ ಬಗ್ಗೆ ಚರ್ಚಿಸದೆ,
ಸಮುದಾಯದ ಕಷ್ಟದ ಬಗ್ಗೆ ಚರ್ಚಿಸು ಬಾ.....

                ..
                 ನಿಝಾಮುದ್ದೀನ್
                   ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ