***** #ಸಮುದಾಯ ಸಮಸ್ಯೆಗಳು# ******

      ಕೆಲದಿನಗಳಿಂದ ಏನೊ ಗೊತ್ತಿಲ್ಲ ನಮ್ಮೂರು ಮಂಗಳೂರು ಎನ್ನಲು ಪ್ರವಾಸಿಗರಾದ ನಮಗೆ ಮುಜುಗರವಾಗುತ್ತಿದೆ. ದಿನಾಲು ಒಂದಲ್ಲ ಒಂದು ವಿಷಯದಲ್ಲಿ ಪ್ರಚಾರ ಪಡೆಯುತ್ತಿರುವ ಊರ ನೆನೆಯುವಾಗ ಸಂಬಳ ಇಲ್ಲದೆ ದುಡಿಯುವ ಮರಳುಗಾಡೇ ವಾಸಿ ಅನ್ನೊತರ ಇದೆ ಈಗಿನ ಪರಿಸ್ಥಿತಿ.
       ಅತ್ಯಾ(ಆ)ಚಾರ ಎಂಬುದು ತಿಳಿಯದ ವಿದ್ಯಾರ್ಥಿಗಲು ಅದರ ಕಡೆ ಗಮನ  ಹರಿಸಿ. ತನ್ನ ಕಾಮ ಉನ್ನತಿಗಾಗಿ ಏನೆಲ್ಲಾ ಕಸರತ್ತು ನಡೆಸುದು , ಅದನ್ನು ಬೆಂಬಲಿಸುವಂತೆ ಊರಿನ ತಿಳಿದವರ ನಡವಳಿಕೆ ಏನೊ ಕಾಲೇಜಿನ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.
       ಒಂದತ್ತು ನಿಮಿಷಗಳ ಕಾಮದಾಟದ ಮೊಹಕ್ಕಾಗಿ ತನ್ನ ಹೆತ್ತು ಸಾಕಿ ಸಲಕಿದ ಮನೆಯವರ ದಿಕ್ಕರಿಸಿ ಗಂಡ ವಿದೇಶದಲ್ಲಿ ನಿಂತು ಕಷ್ಟಪಟ್ಟು ದುಡಿದು ತನಗೆ ಕಳುಹಿಸಿದ ಸೆಲ್ಪೊನ್ನಿಂದ ಯಾರೊ ತಿಳಿಯದ ಅಪರಿಚಿತನ ಮಾತಿಗೆ ಮರುಳಾಗಿ ಮನೆ ಬಿಟ್ಟು ಓಡಿ ಹೊಗೊ ರೀತಿ.
        ಸಮುದಾಯದಲ್ಲಿ ಆಗುತ್ತಿರುವ ತೊಡಕಿನಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಗುರುವರ್ಯರು ಪಾರ್ಟಿಗಳೆ ಕಚ್ಚಾಟದಲ್ಲಿ ತೊಡೆತಟ್ಟಿ ಇನ್ನೊಂದು ಗುಂಪನ್ನು ಮಟ್ಟಹಾಕಲು ಕಾತುರದಿಂದ ಕಾಯುತ್ತಿರುದು.
     ವರದಕ್ಷಿಣೆಯ ಬಗ್ಗೆ ಬೊಗಲೇ ಬಿಡೊ ಊರ ಯುವಕರದಂಡು ವರದಕ್ಷಿಣೆಯ ಹಣ ಬೇಡ ಚಿನ್ನ , ಕಾರು ಸಾಕು ಎಂಬ ಪಟ್ಟು ಹಿಡಿಯುವಿಕೆ .
        ಸಮುದಾಯದಲ್ಲಿ ಇರುವ ಅದೆಷ್ಟೋ ಬಡವರ ಬಗ್ಗೆ ದಾನ ಧರ್ಮ ನಡೆಸಬೇಕಾದವದ ಜವಾಬ್ದಾರಿಯುತರು ತನ್ನ ಹೆಸರಿನ ಉನ್ನತೀಕರನ ಹಾಗು ಮಾದ್ಯಮಜಾಹಿರಾತಿನ ಮೊಡಿಗೆ ಬಲಿಯಾಗಿರುದು.
     ಅವರೆಲ್ಲ ಒಳ್ಳೆಯವರು , ಇವರು ಮಾತ್ರ ಕೆಟ್ಟವರು ಎಂದು ಸಾರಿ ಸಾರಿ ಹೇಳಿ ಒಗ್ಗಟ್ಟಾಗುತ್ತಿರು ಬಾರತೀಯರನ್ನು ದಿಕ್ಕುಪಾಲಾಗಿ ಓಡಿಸಲು ಮುಂಚೂಣಿ ಹೊಂದುತ್ತಿರುವ ಮಾದ್ಯಮವರ್ಯರು.
          ಹೇಳಲು ಹೊದರೆ ತುಂಬಾನೆ ಇದೆ .
 ಆದರೆ ನಮ್ಮ ಸಮುದಾಯದವರಿಗೆ ಬುದ್ದಿ ಬರುದು ಯಾವಾಗ , ಅಲ್ಲ ಕೊನೆವರೆಗೆ ಇವರಿಗೆ ಬುದ್ದಿಯೇ ಬರಲ್ವ.?

ಕೊಮುವಾದಿಗಳ ಗುಂಪೊಂದು ಸಮುದಾಯದೊಳಗೆ  ಕಚ್ಚಾಡಿಸಲು ಏನೆಲ್ಲ ಷಡ್ಯಂತ್ರಗಳು ನಡೆಸುತ್ತಿರುದು ಕಣ್ಣಿಗೆ ಕಾನುತಿದೆ . 
    ನಾವು  ಎಚ್ಚೆತ್ತು ಕೊಳ್ಳದೆ ಯಾರನ್ನು ವಿರೊದಿಸಿ ಕಾರ್ಯವಿಲ್ಲ.
      ಇನ್ನಾದರು ಸಮುದಾಯದ ಉನ್ನತೀಕರನಕ್ಕಾಗಿ ದುಡಿಯೊಣ.
     

                    ನಿಝಾಮುದ್ದೀನ್ 
                  ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ