Posts

Showing posts from 2016

ಭಾಗ 14

ಧೀರ ಮಹಿಳೆಯೊಬ್ಬರ ರೋಚಕ ಕಥೆ              ಅವರೇ... #ಸುರಾಖರ_ಮಗಳು: #ಭಾಗ - 14 ಒಂದು ಭಾಗದಲ್ಲಿ ನಮಾಝ್; ಇನ್ನೊಂದು ಭಾಗದಲ್ಲಿ ಮದ್ಯ ಸೇವನೆ.            ಅವನಿಗೆ ಅಚ್ಚರಿಯಾಯಿತು. ಸಹದ್ ರ.ಅ ರವರ ನೇತೃತ್ವದ ಸೈನ್ಯವು ಉತ್ತಮವದ ಸೈನ್ಯ ತಂಡವೆಂದು ಮನಸಲ್ಲೇ ಒಪ್ಪಿಕೊಂಡನು.        ಮನಸ್ಸಿನ ಒಪ್ಪಿಗೆಯ ಮೇರೆಗೆ ನಾನು ಇಸ್ಲಾಂ ಧರ್ಮ ಸ್ವೀಕರಿಸುತ್ತೇನೆಂದು ಹೇಳಿದರು. ಆದರೆ ಮೊದಲೇ ಮದ್ಯ ಸೇವಿಸಿದ್ದ ಇವರು, ಮದ್ಯದ ಅಮಲಿನಲ್ಲಿ ಹೇಳಿರ ಬಹುದೆಂದು ಮೊದಲು ಯಾರು ನಂಬಿರಲಿಲ್ಲ. ಮತ್ತೆ ಮತ್ತೆ  ನಾನು ಧರ್ಮದ ಮೇಲೆ ವಿಶ್ವಾಸ ಇಟ್ಟವನೆಂದು ಹೇಳಿದ ಕಾರಣ ಶಆ ದತ್ ಕಲಿಮ ಹೇಳಿ ಇಸ್ಲಾಮಿಗೆ ಸ್ವೀಕರಿಸಲಾಯಿತು.   *ಅವರ ಹೆಸರನ್ನು ಮುಸ್ಲಿಂ ಎಂದು ನಾಮಕರಣ ಕೂಡಾ ಮಾಡಲಾಯಿತು*      *********     ತಂಡದೊಳಗಡೆ ಚರ್ಚೆ ನಡೆಯಿತಿತ್ತು. ಹಾಗೆ ಅಲ್ಲಿಗೆ ಯಶ್ಚುದುರ್ಗ ಸೌನ್ಯದ ಇನ್ನೊಂದು ವ್ಯಕ್ತಿ ಬಂದು ಸಹದ್ ರ.ಅ ರವರಲ್ಲಿ ಸಲಾಂ ಹೇಳಿದರು. ಉದ್ದವಾದ ಗಡ್ಡದಾರೀಯಾಗಿದ್ದರು ಅವರು.   ಎಲ್ಲರೂ ಕೂತಹಲದಿಂದ ಅವರನ್ನೇ ಗಮನಿಸಿದರು.     ಅವರೇ ಸ್ವತ್ಹ ಪರಿಚಯ ಮಾಡಿಕೊಂಡರು. ನಾನು ಅನಸ್ ಬಿನ್ ಹಿಲಾಲ್. ನಾನೊಬ್ಬ ಕ್ರೈಸ್ತ ಪಂಡಿತನಾಗಿದ್ದೇನೆ. ಯಶ್ಚುದುರ್ಗ್ ಕೋಟೆಯಲ...

ಭಾಗ 13

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... *ಸುರಾಖರ ಮಗಳು* : *ಭಾಗ - 13*    ಫರಕ್ ಸಾದ್ ನನ್ನು ಬಿಟ್ಟು ಕೊಡಲು ಯಶ್ಚುದುರ್ಗ ಒಂದು ಸವಾಲು ನೀಡಿದ್ದರು.     *ಸವಾಲಿಗೆ ಸಿದ್ದರಿದ್ದಲ್ಲಿ ನಾಳೆ ಇರಾನಿನ "ಖಾದ್ಸೀಯ್ಯ" ರಣಾಂಗಣಕ್ಕೆ ಬನ್ನಿರಿ ಎಂಬ ಆಹ್ವಾನ ನೀಡಿದರು..*     ಸವಾಲನ್ನು ನಗುಮುಖದಿಂದಲೇ ಸ್ವೀಕರಿಸಿದ ಮೊಘೇರಾ ರ.ಅ "ಇನ್ಶಾ ಅಲ್ಲಾ" ಎಂದು ಹೇಳಿ, ತಮ್ಮ ಸೈನ್ಯ ತಂಡ ತಂಗಿರುವ ಸ್ಥಳಕ್ಕೆ ಮರಳಿದರು.                    ************      ನಾಯಕ ಸಅದ್ ರ.ಅ ರವರು ತಂಗಿದ್ದ ಶರಾಫಾ ಎಂಬ ಸ್ಥಳಕ್ಕೆ ಬಂದು ಮೊಘೇರಾ ರ.ಅ ಯಶ್ಚುದುರ್ಗ್ ಕೋಟೆಯಲ್ಲಾದ ಎಲ್ಲಾ ಘಟನೆಯನ್ನು ವಿವರಿಸಿದರು.            ಯಶ್ಚುದುರ್ಗ್ ರ ಮಾತಿನಂತೆ ಮರುದಿನ 'ಖಾದ್ಸೀಯ್ಯ' ರಣಾಂಗಣಕ್ಕೆ ಎರಡು ಕಡೆಯವರೂ ಬಂದು ತಲುಪಿದರು.      *ಒಂದು ಬದಿಯಲ್ಲಿ ಸಹದ್ ರ.ಅ ನೇತೃತ್ವದ ಸೈನ್ಯ ತಂಗಿದ್ದರೆ ಇನ್ನೊಂದು ಬದಿಯಲ್ಲಿ ಯಶ್ಚುದುರ್ಗ್ ಸೈನ್ಯವೂ ತಂಗಿತ್ತು.*      ಯುದ್ಧದ ಮೊದಲು ಎರಡು ಭಾಗದ ಹಲವು ನಾಯಕರ ಸಮ್ಮುಖದಲ್ಲಿ ಹಲವು ಬಾರಿ ಸಂಧಾನ ಸಭೆಯು ನಡೆಯಿತು. ಆದ...

ಭಾಗ 12

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... *ಸುರಾಖರ ಮಗಳು* : *ಭಾಗ - 12*    ಯಶ್ಚುದುರ್ಗ್ ಮೊಘೇರಾ ರ.ಅ ರವರ ಖಡ್ಗದ ಕಡೆ ಗಮನಿಸಿದರು. ಅತ್ತ ಗಮನಿಸಿದಾಗ ಖಡ್ಗದ ವರೆ (ಖಡ್ಗ ಇರಿಸುವ ಚೀಲ) ಹರಿದಿತ್ತು. ಇದನ್ನೂ ಯಶ್ಚುದುರ್ಗ್ ಅಪಹಾಸ್ಯ ಮಾಡಿದರು ..       ಮತ್ತೆ ಕೆರಳಿದ ಮೊಘೇರಾ ರ.ಅ ಖಡ್ಗವನ್ನು ವರೆಯಿಂದ ಹೊರ ತೆಗೆದು ಇದೋ ನೋಡಿ ಎಂದು, ಯಶ್ಚುದುರ್ಗ್ ಕೂತಿದ್ದ ಸಿಂಹಾಸನದ ಎದುರಲ್ಲೇ ಗರಗರನೆ ತಿರುಗಿಸಿ ಕವಾಯತು ಪ್ರದರ್ಶಿಸಿದರು. ಇದನ್ನು ಕಂಡು ಯಶ್ಚುದುರ್ಗ್ ಐಶ್ವರ್ಯಗೊಂಡರು .       ಅತ್ತ ದೂರದಿಂದಲೇ ಇದನ್ನೆಲ್ಲ ವೀಕ್ಷಿಸುತಿದ್ದ ಯಶ್ಚುದುರ್ಗ್ ರ ಮಗಳಾದ ತಹ್ಮಿನಾ ಅಲ್ಲಿಗೆ ಬಂದಳು. ಮೊಘೇರಾ ರ.ಅ ರವರ ಕವಾಯತು ಕಂಡು ತಹ್ಮಿನಾಗೆ ಸಹಿಸಿರಲಿಲ್ಲ.   ಖಡ್ಗ ಹೋರಾಟದಲ್ಲಿ ಖ್ಯಾತಿ ಹೊಂದಿರುವ ನನ್ನೆದುರು ನಿನ್ನದೇನು ಆಟ ಎಂದು, ಯಶ್ಚುದುರ್ಗ್ ಕುಳಿತ ಪಕ್ಕದಲ್ಲಿದ್ದ ಟೇಬಲಿನ ಮೇಲಿನ ಬಟ್ಟೆಯನ್ನು ಗಾಳಿಗೆ ತೂರಿ, ಎತ್ತರದಿಂದ ಹಾರಿ ಎರಡು ತುಂಡು ಮಾಡಿದಳು. (ಇದೊಂದು ಸವಾಲಾಗಿತ್ತು) ಅದರಲ್ಲಿ ಒಂದು ತುಂಡು ದೊಡ್ಡದಾಗಿ ಇನ್ನೊಂದು ತುಂಡು ಚಿಕ್ಕದಾಗಿ ಕತ್ತರಿಸಲ್ಪಟ್ಟಿತು. ದೊಡ್ಡ ತುಂಡು ಕೈಗೆತ್ತಿಕೊಂಡ ತಹ್ಮಿನಾ ಮೊಘೇರಾರವರೊಂದಿಗೆ ಹೇಳಿದಳು. ತಾಕತ್ತಿದ್ದರೆ ಈ ಕವಾಯತನ್ನು ಮಾಡಿರಿ......

ಭಾಗ 11

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... *ಸುರಾಖರ ಮಗಳು* : *ಭಾಗ - 11*    ಹಸನ್ ಮುಸನ್ನಾ ರ.ಅ  ರವರ ಮಾತಿಗೆ ಅನುಸಾರವಾಗಿ ಮೂರೂ ಗುಂಪು ಯಶ್ಚುದುರ್ಗ್ ಸೈನಿಕರ ಆಯುಧಗಳ ಶೇಖರಣಾ ಕೇಂದ್ರ ಗಿಝ್ಬಾ ಕೋಟೆಯನ್ನು ಸುತ್ತುವರಿಯಿತು.     ಹಸನ್ ಮುಸನ್ನಾ ರ.ಅ ಕೋಟೆಯ ಬಳಿ ತೆರಳಿದರು. ಅಲ್ಲಿ ಎರಡು ದೈತ್ಯ ಗಾತ್ರದ ಸೈನಿಕರು ದ್ವಾರಪಾಲಕರಾಗಿ ಇದ್ದರು.  ಅವರಲ್ಲಿ ಒಬ್ಬ ಮಲಗಿದ್ದು, ಇನ್ನೊಬ್ಬ ದ್ವಾರವನ್ನು ಕಾಯುತ್ತಿದ್ದ..    *ದ್ವಾರಪಾಲಕ :* ಹಸನ್ ಮುಸನ್ನಾ ರ.ಅ ಕಂಡಾಕ್ಷಣ :  *ಯಾರಲ್ಲಿ...   ನಿಂತುಕೊಳ್ಳಿ...*   *ಹಸನ್ ಮುಸನ್ನಾ ರ.ಅ :* ನನ್ನ ವಸ್ತ್ರ ಕಂಡು ಅರಿತಿಲ್ಲವೇ. ನಾನೊಬ್ಬ ಇರಾನಿ ಪ್ರಜೆ.  *ದ್ವಾರಪಾಲಕ:*  ಯಾಕಾಗಿ ನೀವು ಈ ರಾತ್ರಿ ಈ ಕೋಟೆಯ ಬಳಿ ಬಂದಿರುವಿರಿ.   *ಹಸನ್ ಮುಸನ್ನಾ ರ.ಅ:* ಶತ್ರುಗಳು ಈ ಕೋಟೆಯನ್ನು ಆವರಿಸಿದ್ದು, ನಿಮ್ಮ ಬಳಿ ಒಂದು ರಹಸ್ಯ ಹೇಳಲು ಬಂದಿದ್ದೇನೆ. *ದ್ವಾರಪಾಲಕ:*  ಹೇಳಿ ಏನದು ಆ ರಹಸ್ಯ. *ಹಸನ್ ಮುಸನ್ನಾ ರ.ಅ:* ಆ ರಹಸ್ಯ ಹೇಳಬೇಕಾದರೆ ನೀವು ಸ್ವಲ್ಪ ಸರಿದು ನಿಲ್ಲಿರಿ,  ಸ್ವಲ್ಪ ಸರಿದು ನಿಂತರೆ ನಾನು ಆ ರಹಸ್ಯ ಹೇಳುತ್ತೇನೆ.   ಹಸನ್ ಮುಸನ್ನಾ ರ.ಅ ರವರ ಮಾತನ್ನು ನಂಬುತ್ತಾ ದ್ವಾರಪಾ...

ಭಾಗ - 10

*ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ...         *ಸುರಾಖರ ಮಗಳು* *ಭಾಗ - 10*     ಯಶ್ಚುದುರ್ಗ್ ರ ಕೋಟೆಯನ್ನು ಗುರಿಯಾಗಿಸಿದ ಸಹದ್ ರ.ಅ ರವರ ನೇತೃತ್ವದ ಸೈನ್ಯ ಸ್ವಲ್ಪ ಸಂಚರಿಸಿದ ಬಳಿಕ ಹಸನ್ ಮುಸನ್ನಾ ರೊಂದಿಗೆ ನಾಯಕ ಸಹದ್ ರ.ಅ ಕೇಳಿದರು...     *ಈ ಶರಾಫಾ ಎಂಬ ಸ್ಥಳ ಯಾವುದು..??* ಹಸನ್ ಮುಸನ್ನಾ ರ.ಅ: ಇದುವೇ ಶರಾಫಾ.. ಕೂಡಲೇ ನೆನಪಿಸಿಕೊಂಡ ಸಹದ್ ರ.ಅ ಉಮರ್ ರ.ಅ ತನಗೆ ನೀಡಿದ್ದ ಪತ್ರವನ್ನು ಕೈಗೆತ್ತಿಕೊಂಡರು, ಪತ್ರವು ಈ ಕೆಳಗಿನಂತಿತ್ತು...       ***************       *ಅಸ್ಸಲಾಂ ಅಲೈಕುಂ..*  "ಪ್ರೀತಿಯ ಸಹದ್ ರವರೇ..        ನೀವು ಈಗ ನಿಂತಿರುವ ಸ್ಥಳ "ಶರಾಫಾ". ನೀವು ಬಲಗಡಗೆ ತಿರುಗಿದಾಗ ಎರಡು ಬೆಟ್ಟಗಳು ಕಾಣಲು ಸಿಗುತ್ತವೆ. ಆ ಬೆಟ್ಟದ ತಪ್ಪಲಲ್ಲಿ *ಗಿಝ್ಬಾ* ಎಂಬ ಮರದ ಕೋಟೆಯಿದೆ. ಅದು ಯಶ್ಚುದುರ್ಗ್ ರ ಸೈನ್ಯಾಧಿಪತಿಗಳು ಆಯುಧಗಳನ್ನು ಶೇಖರಿಸುವ ಸ್ಥಳವಾಗಿದೆ. ಮೊದಲನೆಯದಾಗಿ ನೀವು ಅದನ್ನು ನಾಶಪಡಿಸಬೇಕು. ಹೆಚ್ಚಿನ ಮಾಹಿತಿಯನ್ನು ಹಸನ್ ಮುಸನ್ನಾರೊಂದಿಗೆ ಕೇಳಿ ಅರಿಯಿರಿ..."       ***************     ಹಸನ್ ಮುಸನ್ನಾ ರ.ಅ ರವರು ನಗುತ್ತಲೇ....

ಭಾಗ 9

ಧೀರ ಮಹಿಳೆಯೊಬ್ಬರ ರೋಚಕ ಕಥೆ*                  ಅವರೇ... #ಸುರಾಖರ_ಮಗಳು #ಭಾಗ - 9     ಶೈಬಾನ್ ಬೆಟ್ಟದ ಮೇಲೆ ಬಂದ ಹಸನ್ ಮುಸನ್ನಾ ರ.ಅ : ನನ್ನ ಈ ಮುಸ್ಲಿಂ ಸಹೋದರನನ್ನು ಯಾಕಾಗಿ ಕೊಂದೆ..? ಎಂದು ಫರಕ್ ಸಾದ್ ರ ಬಳಿ ಪ್ರಶ್ನಿಸಿದರು.    ಫರಕ್ ಸಾದ್ : ಅದು ಒಂದು ಅವಘಡ ಸಂಭವಿಸಿತು... ಕ್ಷಮಿಸಿ ಎಂದು ಬೇಡಿಕೊಂಡರು...    ಹಸನ್ ಮುಸನ್ನಾ ರ.ಅ : ಹಾಗಾದರೆ ನನಗೂ ಒಂದು ಅವಘಡ ಸಂಭವಿಸಲಿದೆ. ಎಂದರು.  ಭಯಭೀತರಾದ ಫರಕ್ ಸಾದ್ ನೇರವಾಗಿ ಮತ್ತೆ ಯಶ್ಚುದುರ್ಗ್ ಕೋಟಯತ್ತ ಓಡಿದರು.       ತನ್ನ ಬಳಿ ಓಡೋಡಿ ಬರುತ್ತಿದ್ದ ಫರಕ್ ಸಾದನ್ನು ಕಂಡು ನಗುತ್ತಲೇ ಯಶ್ಚುದುರ್ಗ್ ಕೇಳಿದರು : ಯಾಕಾಗಿ ಇತ್ತ ಓಡೋಡಿ ಬಂದೆ ನೀನು..  ಫರಕ್ ಸಾದ್ : ನಾನು ಒಂದು ಮುಸ್ಲಿಮನು ನಮಾಝ್ ಮಾಡುತ್ತಿರುವಾಗ, ಬಾಣ ಬಿಟ್ಟು ಕೊಂದು ಹಾಕಿದ್ದೇನೆ. ಅದಕ್ಕಾಗಿ ಹಸನ್ ಮುಸನ್ನಾರವರು ನನ್ನನ್ನು ಬೆನ್ನಟ್ಟಿ ಬರುತ್ತಿದ್ದಾರೆ.  ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡರು, ಇದನ್ನು ಕೇಳಿ ಖುಷಿಗೊಂಡ ಯಶ್ಚುದುರ್ಗ್, ಅವರನ್ನು ಕೋಟೆಯ ಒಳ ಭಾಗದ  ಒಂದು ಬದಿಯಲ್ಲಿ ನಿಲ್ಲಿಸಿದರು.     ಹಸನ್ ಮುಸನ್ನಾ ರ.ಅ : ಫರಕ್ ಸಾದ್ ನನ್ನು ಬೆನ್ನಟ್ಟುತ್ತಾ ನೇರವಾಗಿ ಯಶ್ಚುದುರ್ಗ್  ರ ಬಳಿ ಬಂದು ನಿಂತ...

ಭಾಗ 8

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ..  #ಸುರಾಖರ_ಮಗಳು    #ಭಾಗ - 8     ಯಶ್ಚುದುರ್ಗ್ ರ ಮಗಳು(ತಹ್ಮಿನಾ) ಒಂದು ಪ್ರಕಟಣೆ ನಡೆಸಿದ್ದಳು    " ಖಡ್ಗದೊಂದಿಗಿನ ಹೋರಾಟದಲ್ಲಿ ನನ್ನನ್ನು ಸೋಲಿಸುವ ಹುಡುಗನನ್ನು ಮಾತ್ರ ನಾನು ವಿವಾಹ ಆಗುವುಂದೆಂದು"            ತಹ್ಮಿನಾಳ ಪ್ರಕಟಣೆಯನ್ನು ಕೇಳುತ್ತಲೇ ಊರಿಡೀ ಭಾರೀ ಚರ್ಚೆಯಾಗುತ್ತಿತ್ತು. ಕೆಲವರು ತಹ್ಮಿನಾಳ ಹಾವ, ಭಾವ  ನೋಡಿಯೇ ಹೋರಾಟ ನಡೆಸಲು ಹಿಂದೇಟು ಹಾಕುತ್ತಿದ್ದರು.     **************       *ಒಂದು ದಿನ, ಗವರ್ನರ್ ಖುರಾಸಾನ್  ರ ಮಗ ಫರಕ್ ಸಾದ್ ಎನ್ನುವವರು, ತಹ್ಮನಾಳೊಂದಿಗೆ ಖಡ್ಗ ಹೋರಾಟ ನಡೆಸಲು ಸಿದ್ಧರಾಗಿ ಅರಮನೆಯತ್ತ ದೌಡಾಯಿಸಿ ಬಂದರು*.         ( *ಯಶ್ಚುದುರ್ಗ್ ಗೆ ಪರಕ್ ಸಾದ್ ರ ಈ ಮೋದಲೇ ಬಹಳಾ ಪರಿಚಯವಿತ್ತು.*)  ಅರಮನೆಗೆ ಬಂದ ಫರಕ್ ಸಾದ್ ರ ಕಂಡೊಡನೆ ಯಶ್ಚುದುರ್ಗ್ ಕೇಳಿದರು ಎಲ್ಲಿಗೆ ಹೊರಟಿರುವಿರಿ...? ಫರಕ್ ಸಾದ್ : ತಮ್ಮ ಮಗಳೊಂದಿಗೆ ಖಡ್ಗ ಹೋರಾಟ ನಡೆಸಿ ಮದುವೆಯಾಗಲು ಎಂದು ಉತ್ತರಿಸಿದರು.     ಆದರೆ, ಯಶ್ಚುದುರ್ಗ್ ಈ ವಿಷಯದಿಂದ ಪರಕ್ ಸಾದ್ ರಲ್ಲಿ ಹಿಂದೇಟು ಹಾಕುವಂತೆ ಮನವಿ ಮಾಡಿದರೂ...

ಭಾಗ 7

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ*                  ಅವರೇ..#ಸುರಾಖರ_ಮಗಳು #ಭಾಗ - 7*       ಸುಮಾರು ಮೂವತ್ತು ಸಾವಿರ ಸೈನ್ಯವನ್ನು ಮುನ್ನಡೆಸುತ್ತಾ ಸಹದ್ ರ.ಅ ರವರು ಯಾತ್ರೆ ಹೊರಟುರು . ಯಾತ್ರೆಯ ದಾರಿ ಮಧ್ಯೆ ಒಂದು ನದಿ ಅಡ್ಡವಾಗಿ ಹರಿಯುತ್ತೀತ್ತು.           ನೀರು ಬಹಳಾ ರಭಸದಿಂದ ಹರಿಯುತ್ತಿತ್ತು. ಸಹದ್ ರ.ಅ ನೇತೃತ್ವದ ಸೈನ್ಯದ ಬಳಿ, ನದಿ ದಾಟುವ ಯಾವುದೇ ಸಲಕರಣೆ ಇರಲಿಲ್ಲ. ನದಿಗೆ ಯಾವುದೇ ಸೇತುವೆಯೂ ಇರಲಿಲ್ಲ, ಜೊತೆಗೆ ನದಿಯ ಬದಿಯಲ್ಲಿ ಯಾವುದೇ ದೋಣಿಯೂ ಕಾಣುತ್ತಿರಲಿಲ್ಲ.    ಹತಾಶರಾದ ಸ್ವಹಾಬಿವರ್ಯರನ್ನೊಳಗೊಂಡ ಸೈನ್ಯವು ನಾಯಕರ ಕಡೆ ಮುಖಮಾಡಿದರು. ನಾಯಕರಾದ ಸಹದ್ ರ.ಅ ರವರು ಸೈನ್ಯದೊಂದಿಗೆ ಕೇಳಿದರು.     ಈ ಧರ್ಮ ಯಾರದ್ದಾಗಿದೆ...? ಸ್ವಹಾಬಿವರ್ಯರು : ಅಲ್ಲಾಹನದ್ದಾಗಿದೆ.    ಈ ನದಿ ಯಾರದ್ದಾಗಿದೆ....? ಸ್ವಹಾಬಿವರ್ಯರು : ಅಲ್ಲಾಹನದ್ದಾಗಿದೆ.     ಹಾಗಾದಲ್ಲಿ ಅಲ್ಲಾಹನ ಧರ್ಮ ಪ್ರಚಾರಕರಾದ ನಮ್ಮನ್ನು ತಡೆಯಲು, ಅಲ್ಲಾಹನ ಸೃಷ್ಟಿಯಾದ ಈ ನದಿಗೆ ಸಾಧ್ಯವಿಲ್ಲ.    ನೀವು ನನ್ನನ್ನು ಹಿಂಬಾಲಿಸಿರಿ... ಎಂದು   ಮುಂದೆ ಸಾಗಿದರು. ಸೈನಿಕರೆಲ್ಲ ಸಹದ್ ರ.ಅ ರವರನ್ನು ಹಿಂಬಾಲಿಸಿದರೂ..         ...

ಭಾಗ 6

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ... #ಸುರಾಖರ_ಮಗಳು  #ಭಾಗ - 6         ಸುರಾಖ ರ.ಅ ರವರ ಮಾತುಗಳಿಂದ ಆವೇಶಭರಿತರಾದ ಸಹದ್ ರ.ಅ ರವರ ನೇತೃತ್ವದ ಸ್ವಹಾಬಿವರ್ಯರ ಯುದ್ಧ  ಸೈನ್ಯಕ್ಕೆ,  ಖಲೀಫ  ಉಮರ್ ರ.ಅ ಕೆಲ ಉಪದೇಶಗಳನ್ನು ನೀಡಿದರು.            ಪ್ರವಾದಿ ಸ.ಅ ರವರು ತೋರಿಸಿಕೊಟ್ಟ ರೀತಿಯಲ್ಲೇ ಯುದ್ಧ ಮಾಡಲು ಹೇಳಿಕೊಟ್ಟು, ನೀವು ಲೋಕದ ಒಂದು ಬಲಿಷ್ಠ ಸೈನ್ಯದೆದುರು ಯುದ್ಧ ಮಾಡಲು ಹೊರಟಿದ್ದೀರಿ, *ಸುಮಾರು ಒಂದು ಲಕ್ಷದಷ್ಟು ಸೈನಿಕರನ್ನು ಹೊಂದಿರುವ ಸರ್ವ ಸನ್ನಧ್ಧ ಸೈನ್ಯದೆದುರು ಕೇವಲ ಮೂವತ್ತು ಸಾವಿರದಷ್ಟಿರುವ ನಮ್ಮ ಸೈನ್ಯವು ಹೋರಾಡಲಿದೆ.*        ಕ್ರೂರರಾದ ಯಶ್ಜುದುರ್ಗ್ ಸೈನ್ಯದಲ್ಲೆಲ್ಲೂ ಮಕ್ಕಳು ಹಾಗೂ ಮಹಿಳೆಯರು ಕಂಡರೆ ಖಡ್ಗ ಝಳಪಿಸಬಾರದು. ಆರೀತಿ ಮಕ್ಕಳನ್ನು ಹಾಗೂ ಮಹಿಳೆಯರು ಕಂಡರೆ ಖಡ್ಗವನ್ನು ಅಡಗಿಸಿ ಇಡಬೇಕೆಂದು ಆಜ್ಞೆ ನೀಡಿದರು. ( *ಆಶ್ಚರ್ಯವಲ್ಲವೇ ನಮ್ಮ ಇಸ್ಲಾಂ ಧರ್ಮದ ನೀತಿ ಹಾಗೂ ನಿಯಮ*).  ಜೊತೆಗೆ, ನೀವು ಹೋಗುವ ರಾಜ್ಯದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಕಾಪಾಡಬೇಕೆಂದು ಹೇಳಿದರು.           *******   ಖಲೀಫ ಉಮರ್ ರ.ಅ ರವರಿಗೆ ಸಹದ್ ರ.ಅ ರವರು ನೆರೆ...

ಭಾಗ 5

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ*   ಅವರೇ..  #ಸುರಾಖರ_ಮಗಳು*    #ಭಾಗ - 5          ಸ್ವಹಾಬಿವರ್ಯರ ಮಕ್ಕಳು ಸಿಗದ ಚಿಂತೆಯಲ್ಲಿದ್ದ ಸುರಾಖ ರ.ಅ ಹಾಗೂ ಆಶಿಂ ರ.ಅ ರಲ್ಲಿ ಸುರಾಖರ ಮಗಳಾದ ಆಶಿಮಾ ನಾನು ಯುದ್ಧಕ್ಕೆ ಬರುವುದಾಗಿ, ನಿಮ್ಮ ಚಿಂತೆಯನ್ನು ದೂರಮಾಡುವುದಾಗಿ ಹೇಳಿದರು.     ಆದರೆ... ಆಶಿಂ ರ.ಅ ಇದನ್ನು ನಿರಾಕರಿಸಿದರು.  ನಾವು ಉಮರ್ ರ.ಅ ರವರ ಬಳಿಗೆ ತೆರಳುವುದು, ಅವರು ಅಪಾರ ಜ್ಞಾನ ಹಾಗೂ ಬುದ್ಧಿವಂತರು. ಅವರೆದುರು ನಮ್ಮ ನಾಟಕವೇನು ನಡೋಯುವುದಿಲ್ಲ ಎಂದರು.       ಮತ್ತೆ ಮತ್ತೆ ಹಠದಿಂದಿದ್ದ ಸುರಾಖರ ಮಗಳು ಆಶಿಮಾ ನಾನು ಬರುವುದಾಗಿಯೂ ಅದರ ಬಗ್ಗೆ ಚಿಂತಿಸಬೇಡಿಯೆಂದು, ರೂಮಿಗೆ ಹೋದವರೇ ನೇರವಾಗಿ ಬಟ್ಟೆ ಬದಲಾಯಿಸಿ ಬಂದರು..        ಅರೇ....  ತಂದೆ ಸುರಾಖ ರ.ಅ ರವರ ನೀಲ ಅಂಗಿ (ಅರಬಿ ಉಡುಪು) ಧರಿಸಿ ತಲೆಯನ್ನೆಲ್ಲ ಭದ್ರವಾಗಿ ಶಾಲಿನಿಂದ ಕಟ್ಟಿಕೊಂಡು ಯಾರಿಗೂ ಗುರುತು ಹಿಡಿಯಲಾಗದ ರೀತಿಯಲ್ಲಿ ಯುದ್ಧಕ್ಕೆ ಹೊರಟೇ ನಿಂತರು.        ತಂದೆ ಸುರಾಖತಿಬ್ನು ಮಾಲಿಕರ ಅನುವಾದವು ಸಿಕ್ಕಿತು. ಇಬ್ಬರೂ ಮದೀನ ಮಸೀದಿಯತ್ತ ಬಂದರು. ಮದೀನಾ ಮಸೀದಿಯ ಹೊರಾಂಗಣದಲ್ಲಿ ಜನರೆಲ್ಲ ತುಂಬಿ ತುಳುಕುತಿದ್ದರು. (ಸಮಾರು ಮೂವತ್ತು ಸಾವಿರದಷ್ಟು ಜನರನ್ನು ಹೊಂದಿತ್ತು). ಎಲ್ಲರೂ ಯುದ್ದ...

ಭಾಗ 4

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ...         #ಸುರಾಖರ_ಮಗಳು #ಭಾಗ - 4*  ಮಸ್ಜಿದುಲ್ ನಬವೀಯ ಒಂದು ಭಾಗದಿಂದ ಒಂದು ಮಹಿಳೆ ಬಂದು ಅಲ್ಲಿ ನೆರೆದಿರುವ ಸ್ವಹಾಬಿಯವರ ಗುಂಪಿಗೆ ಸಲಾಂ ಹೇಳಿದರು. ನಂತರ ಹೇಳಿದರು, ಉಮರ್ ರ.ಅ ರವರೇ...  ನೀವು ಇರಾನಿಗೆ ಯುದ್ಧಕ್ಕೆಂದು ಒಂದು ಸೈನ್ಯವನ್ನು ಕಳುಹಿಸಲು ತೀರ್ಮಾನಿಸಿದ್ದು, ನಾಯಕರ ಕೊರತೆ ನಿಮ್ಮಲ್ಲಿ ಎದ್ದು ಕಾಣುತ್ತಿದೆ.  ಆದರೆ, ಯಾರನ್ನಾದರೂ ನಾಯಕನಾಗಿ ನೀವು ಯುದ್ಧಕ್ಕೆ ಕಳುಹಿಸಿ ಕೊಟ್ಟರೂ ನಿಮ್ಮ ಪಾಲಿಗೆ ವಿಜಯ ನಿಶ್ಚಿತಾ ಎಂದು ನನ್ನ ತಂದೆ ಹೇಳಿ ಕಳುಹಿಸಿದ್ದಾರೆ ಎಂದರು.    ಕೂಡಲೇ ಕೆಲ ಸ್ವಹಾಬಿಗಳು ನಗುತ್ತಲೇ ಹೇಳಿದರು. ನೆಬಿ ಸ.ಅ ನೇತೃತ್ವ ಕೊಟ್ಟ ಉಹದ್ ಯುದ್ದದಲ್ಲಿ ಸೋತವರು ನಾವು, ನಾವು ಹೇಗೆ ವಿಜಯಿಯಾಗುವೆವು... ಇವರ ತಂದೆಗೇನು ಅಲ್ಲಾಹನ ದೂತರು ಹೇಳಿ ಕಳುಹಿಸಿದರೇ...!!       ಆದರೆ ಉಮರ್ ರ.ಅ ಈರೀತಿ ಹೇಳಿದ ಸ್ವಹಾಬಿಯವರನ್ನು ಮಾತು ನಿಲ್ಲಿ ಸಲು ಹೇಳಿ, ಮಹಿಳೆಯೊಂದಿಗೆ : ಯಾರಾಗಿದ್ದಾರೆ ನಿನ್ನ ತಂದೆ ಎಂದರು.     ಆಗ ಮಹಿಳೆ : ನಿಮ್ಮ ಮುಂಭಾಗದಲ್ಲಿ ಕೂತಿರುವ ಆಶಿಂ ರ.ಅ ರವರ ತಂದೆ ಮತ್ತು ಶೈಬಾನ್ ಬೆಟ್ಟದಲ್ಲಿ ಕೊಲ್ಲಲ್ಪಟ್ಟ ಖಾಸಿಂ ರ.ಅ ಹಾಗೂ ನನ್ನ ತಂದೆ ಸುರಾಖತಿಬ್ನು ಮಾಲಿಕ್ ರ.ಅ ರವರು ...

ಭಾಗ 3

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ... #ಸುರಾಖರ_ಮಗಳು  #ಭಾಗ - 3*    ಯುದ್ಧಕ್ಕೆ ಹೊರಟು ನಿಂತ ತಂಡದೊಳಗೆ ನಾಯಕನಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.    ಅಲೀ ರ.ಅ ಅವರನ್ನು ಉಮರ್ ರ.ಅ ಯಾಕೆ ತಿರಸ್ಕರಿಸಿದರು ಎಂಬ ಸ್ವಹಾಬಿಗಳ ಪ್ರಶ್ನೆಗೆ ಉತ್ತರಿಸಿದ ಉಮರ್ ರ.ಅ.,  ನನ್ನ ಆಡಳಿತದಲ್ಲಿ ಸಂಶಯ ನಿವಾರಕರು ಅಲೀ ರ.ಅ ರವರು ಆಗಿದ್ದಾರೆ. ಅವರನ್ನು ಯುದ್ಧಕ್ಕೆ ಕಳುಹಿಸಿಕೊಟ್ಟರೆ, ನನಗೆ ನನ್ನ ಆಡಳತದಲ್ಲಿ ಒಂದು ಸಂಶಯ ಬಂದರೆ, ಆ ಸಂಶಯ ನಿವಾರಿಸಲು ನಾನು ಯಾರ ಬಳಿಗೆ ತೆರಳಲಿ ಎಂದು ಪ್ರಶ್ನಿಸಿದರು...        ( ಅಲೀ ರ.ಅ ಆ ಕಾಲಘಟ್ಟದಲ್ಲಿನ ಅಪಾರ ಜ್ಞಾನವಂತರಾಗಿದ್ದರು. ಅಲೀ ರ.ಅ ರವರ ಕುರಿತು ನೆಬಿ ಮಹಮ್ಮದ್ ಮುಸ್ತಫಾ ಸ.ಅ ರವರು ಈ ರೀತಿ ಹೇಳಿಕೊಂಡಿದ್ದರು. " *ನಾನು ಅರಿವಿನ ಪಟ್ಟಣವಾದರೂ, ಅದರ ಬಾಗಿಲು ಅಲೀಯವರಾಗಿದ್ದಾರೆ*".)      ಇಂತಹಾ ಜ್ಞಾನ ಪಂಡಿತನನ್ನು ನಾನು ಹೇಗೆ ಯುದ್ಧಕ್ಕೆ ಕಳುಹಿಸಿ ಕೊಡಲಿ ಎಂದು ಉಮರ್ ರ.ಅ ಸಭೀಕರೊಂದಿಗೆ ಪ್ರಶ್ನಿಸಿದರು .      ನಾಯಕನಿಗಾಗಿ ಚರ್ಚೆಯು ಮುಂದುವರಿಯಿತು. ನೆರೆದಿದ್ದ ಸ್ವಹಾಬಿಗಳಲ್ಲಿ ಮತ್ತೊಬ್ಬ ಸ್ವಹಾಬಿ ಓರ್ವ ನಾಯಕನ ಹೆಸರು ಸೂಚಿಸಿದರು. ಅವರೇ *ಸಹದ್ ಇಬ್ನು ಅಬೀ ವಕ್ಕಾಸ್ ರ.ಅ*. ...

ಭಾಗ 2

#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ                  ಅವರೇ...         #ಸುರಾಖರ_ಮಗಳು       #ಭಾಗ - 2*     ಖಲೀಫ ಉಮರ್ ರ.ಅ ರವರು ಆಡಳಿತವನ್ನು ನಡೆಸತೊಡಗಿದರು. ಇಸ್ಲಾಂ ಧರ್ಮ ನಾನಾ ದೇಶಗಳತ್ತ ವ್ಯಾಪಿಸುತಿತ್ತು. ಏಕ ದೈವಾರಾಧನೆ ಹಾಗು ಸತ್ಯ ಧರ್ಮದ ಬಗೆಗಿನ ವಿಶ್ವಾಸ ಜನರಲ್ಲಿ ಮೂಡಿ ಅನೇಕ ರಾಜ್ಯ ಹಾಗೂ ರಾಷ್ಟ್ರಗಳು ಇಸ್ಲಾಂ ಧರ್ಮವನ್ನು ಆವರಿಸುತಿತ್ತು. ಆದರೆ ಲೋಕದ ಚಿತ್ತ ಪುಣ್ಯ ಮದೀನದ ಕಡೆಗೆ ಇತ್ತು, ಜೊತೆಗೆ ಆಡಳಿತಗಾರ ಖಲೀಫ ಉಮರ್ ರ.ಅ ರವರ ಮೇಲೆ ಇತ್ತು.       ಒಂದು ದಿನ ಮದೀನಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ ಉಮರ್ ರ.ಅ ರವರು ಹೇಳಿದರು...  ಎಲ್ಲರೂ ಅಲ್ಪ ಹೊತ್ತು ಅಲ್ಲೇ ಕುಳಿತುಕೊಳ್ಳಿರಿ....   ಸ್ವಹಾಬಿಗಳೆಲ್ಲರೂ ಗಮನವನ್ನು ಅತ್ತ ಅಮೀರುಲ್ ಮುಹ್ಮಿನೀನ್ ಕಡೆಗೆ ನೆಟ್ಟರು... ಉಮರ್ ರ.ಅ ವಿಷಯವನ್ನು ಪ್ರಸ್ತಾಪಿಸಿದರು..    ಈ ಮದೀನಾದ ಪ್ರತಿನಿಧಿಯಾಗಿ ಅಥವಾ ಈ ಇಸ್ಲಾಂ ಧರ್ಮದ ಪ್ರತಿನಿಧಿಯಾಗಿ ಇರಾನಿನ ಪರ್ಶಿಯನ್ ಗೆ ನಾನು ಕಳುಹಿಸಿಕೊಟ್ಟ ನನ್ನ ಪ್ರತಿನಿಧಿ *ಸುರಾಖತಿಬ್ನು ಮಾಲಿಕರ ಮಗ ಖಾಸಿಂ ಸುರಾಖರನ್ನು* ಇರಾನ್ ಹಾಗೂ ಇರಾಖಿನ ಮಧ್ಯೆ ಇರುವ ಶೈಬಾನ್ ಬೆಟ್ಟದಲ್ಲಿ ಕಾರಣವಿಲ್ಲದೆ ಇರಾನಿನ ಪರ್ಶಿಯನ್ನರು ಕೊಂದು ಹಾಕಿದ್ದಾರೆ. ಅದು ನನ್ನ ಧೀರತ...

ಭಾಗ 1

#ಅಸ್ಸಲಾಂ_ಅಲೈಕುಂ ಇಸ್ಲಾಂ ಧರ್ಮದೊಳಗಡೆ ಹಾಗೂ ಗ್ರಂಥಗಳಲ್ಲಿ, ಪುಸ್ತಕಗಳಲ್ಲಿ ಹಲವಾರು ಚರಿತ್ರೆಗಳು ಹಾಗೂ ಇತಿಹಾಸಗಳು ಕಾಣಲು ಸಿಗುತ್ತದೆ. ಈ ರೀತಿಯ ಚರಿತ್ರೆಗಳನ್ನು ತಿಳಿದವರು ಕೆಲವರು, ಆದರೆ... ತಿಳಿಯದವರು ಹಲವರು....      ನನ್ನ ಅರಿವಿನಲ್ಲಿ ಹಾಗೂ ಕೇಳಿ ತಿಳಿಯಲ್ಪಟ್ಟ ಕೆಲ ಚರಿತ್ರೆಗಳನ್ನು ಇತರರೊಂದಿಗೆ ಹಂಚುವ ಇರಾದೆ ನನ್ನದಾಗಿದೆ..  ಇನ್ಶಾ ಅಲ್ಲಾ....         ------*******------- ಮಹಿಳೆಯ ಬಗ್ಗೆ ಇಸ್ಲಾಂ ಧರ್ಮ ಸ್ವಾತಂತ್ರ ನೀಡುತ್ತಿಲ್ಲ. ಅವರನ್ನು ಧಾರ್ಮಿಕ ಚೌಕಟ್ಟಿನೊಳಗೆ ಬಂಧನದಲ್ಲಿಡಲಾಗಿದೆ, ಎಂಬಿತ್ಯಾದಿ ಸುಳ್ಳು ವಾದ, ಅಪವಾದಗಳ ಎಡೆಯಲ್ಲಿ..  ನಾವು ತಿಳಿಯಲೇ ಬೇಕಾದ ಹದಿನೈದು ಶತಮಾನದ ಹಿಂದಿನ ಒಂದು ಸ್ವಹಾಬಿಯವರ ಮಗಳ ಸುಂದರ ಕಥೆ.... ಧೀರ ಮಹಿಳೆಯೊಬ್ಬರ ರೋಚಕ ಕಥೆ                  ಅವರೇ...         #ಸುರಾಖರ_ಮಗಳು                 ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರು ಹಿಜಿರಾ ಯಾತ್ರೆ ಹೊರಡುವ ಸಮಯದಲ್ಲಿ ಪ್ರವಾದಿ (ಸ.ಅ) ರನ್ನು ಕೊಲ್ಲಲು ಖಡ್ಗದೊಂದಿಗೆ ಹೊರಟು ನಿಂತ ಮಕ್ಕಾ ಮುಶ್ರಿಕರ ತಂಡದಲ್ಲಿದ್ದ ಕುದುರೆ ಪಡೆಯ  ಓರ್ವ ನಾಯಕರಾಗಿದ್ದರು. ಅವರೇ *ಸುರಾಖತಿಬ್ನು ಮಾಲಿಕ್*. ...

ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"

*ನಮ್ಮೊಳಗೆ ಇರಬೇಕಾದ "ಅಪ್ಪ ಮಕ್ಕಳು"*       ಕೆಲವೊಂದು ಕುಟುಂಬ ಮದುವೆಯ ನಂತರ ಬೇರ್ಪಡುವುದುಂಟು. ಇನ್ನೂ ಕೆಲವರು ಒಟ್ಟಿಗೇನೇ ತಂದೆ ತಾಯಿಯೊಂದಿಗೆ ಹೆಂಡತಿ ಹಾಗೂ ಮಕ್ಕಳು ಜೊತೆಗೇ ಇರುತ್ತಾರೆ. ತಂದೆ ತಾಯಿಯ ಜೊತೆಗೆ ಬೆಳೆಯುವ ಕೆಲವೊಂದು ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತಿದ್ದಾರೆ. ಕೆಲಸದ ಒತ್ತಡ, ಹಣಕ್ಕಾಗಿ ಕೆಲಸದ ಅನಿವಾರ್ಯತೆ, ಮನೆಯಲ್ಲಿ ಕೂರದೆ ಗೆಳೆಯ ಮನೆಯಲ್ಲಿ ನೆಮ್ಮದಿ ಈ ರೀತಿಯಾಗಿ ಕಾರಣ ಹೇಳಿ ಮನೆಯಿಂದ ಕಾಲ್ಕಿತ್ತವರು ಮಕ್ಕಳನ್ನು ಬಂಧಿಯಾಗಿಸುತ್ತಿದ್ದಾರೆ. ಇದು ಸಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತಪ್ಪು. ಇದನ್ನು ತಿದ್ದಿ ಕೊಳ್ಳುವ ಅನಿವಾರ್ಯತೆ ನಮ್ಮೆಡೆಯಲ್ಲಿದೆ.      ದಿನಂಪ್ರತೀ ಬೆಳಿಗ್ಗೆ ಸೂರ್ಯೋದಯದ ಮೊದಲು ತನ್ನ ದಿನಚರಿ ವಸ್ತುಗಳೊಂದಿಗೆ ಮನೆ ಬಿಟ್ಟು ದೂರದ ಆಫೀಸಿಗೋ ಅಥವಾ ಹೊಲಕ್ಕೆ ಕೆಲಸಕ್ಕೆಂದು ಹೊರಟ ಅಪ್ಪ ನಂತರ ಸಾಯಂಕಾಲ ಆರು ಘಂಟೆಗೆ ಬಳಲಿದ ದೇಹದೊಂದಿಗೆ ಮನೆಯ ಕಡೆ ಬರುತ್ತಾನೆ. ಮಧ್ಯಾಹ್ನ ಸಾಬಾನ ಕೈಯಿಂದ ಖರೀದಿಸಿದ ಮೀನಿನ ಜೊತೆಗೆ ಗಂಜಿ ಚಟ್ನಿಯನ್ನೂ ಸೇವಿಸಿ ಸ್ವಲ್ಪ ಹೊತ್ತು ಮೊಬೈಲಲ್ಲೋ ಅಥವಾ ದಿನ ಪತ್ರಿಕೆ ಓದಿಯೋ ಕಾಲ ಕಳೆದು ಮಲಗುತ್ತಾನೆ...  ಮರುದಿನ ಅದೇ ಅಪ್ಪ, ಅದೇ ರೀತಿ..       ಒಂದು ರೀತಿಯಾಗಿ ಹೇಳಬೇಕಾದರೆ, ದೂರದ ದುಬಾಯಿ ಅಥವಾ ಸೌದಿಯಲ್ಲಿರುವ ಉದ್ಯೋಗಿ ತನ್ನ ವರ್ಷದ ಅವಧಿಯ ತಿಂಗಳ ರಜೆಯಲ್ಲಿ ಬಂದು ಮ...

ಖಲೀಫರ ಚರಿತ್ರೆ

*ಶ್ರೀಮಂತರೂ, ಖಲೀಫರೂ, ಶಹೀದರೂ*  *ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ*  *ಕಿರು ಪರಿಚಯ*           ಇಸ್ಲಾಂ ಧರ್ಮದ ಚರಿತ್ರೆಯ ಇತಿಹಾಸದ ಮೂರನೇ ಖಲೀಫರಾದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ಕ್ರಿ.ಶ 576 ರಲ್ಲಿ ಸೌದಿ ಅರೇಬಿಯಾದ ತಾಯಿಫ್ ಎಂಬ ಪ್ರದೇಶದಲ್ಲಿ ತಂದೆ ಅಫ್ಫಾನ್ ಇಬ್ನ್ ಅಲ್ ಅಸ್ ಹಾಗೂ ತಾಯಿ ಅರ್ವಾ ಬಿಂತ್ ಕುರಯ್ಯ ಇವರ ಮಗನಾಗಿ ಜನಿಸಿದರು. ಇಸ್ಲಾಂ ಇತಿಹಾಸದಲ್ಲಿ ಕಿ.ಶ 644 ರ ನವೆಂಬರ್ ತಿಂಗಳಿನಿಂದ ಕಿ.ಶ 656 ರ ಜೂನ್ ತಿಂಗಳ ವರೆಗೆ ಖಲೀಫರಾಗಿ ಅಧಿಕಾರ ನಿರ್ವಹಿಸಿದರು.   ತನ್ನ ಜೀವನದ 79ನೇ ವರ್ಷದಲ್ಲಿ ಕಿ.ಶ 656 ಜೂನ್ 17 ರಂದು  (18 Dhul-Hijjah 35 AH) ಸೌದಿ ಅರೇಬಿಯಾದ ಮದೀನಾ ಎಂಬ ಪ್ರದೇದಲ್ಲಿ ವಿಧಿವಶರಾದರು. *ಆಡಳಿತ, ತ್ಯಾಗ, ಮರಣ*....           ಇಸ್ಲಾಮಿನ ಇತಿಹಾಸದಲ್ಲಿ ಕೊಟ್ಯಾದಿಪತಿಯಾದ ಶ್ರೀಮಂತರಾದ ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ರಹಸ್ಯವಾಗಿಯೂ ಪರಸ್ಯವಾಗಿಯೂ ಕೊಡುಗೈ ದಾನಿಯಾಗಿದ್ದರು. ಇವರು ಪ್ರವಾದಿ ಮಹಮ್ಮದ್ ಮುಸ್ತಫಾ ಸ.ಅ ರವರ ಸ್ವರ್ಗಲೋಕದ ಆತ್ಮೀಯ ಗೆಳೆಯನಾಗಿದ್ದಾರೆಂದು ಹದೀಸ್'ಗಳಲ್ಲಿ ಕಾಣಬಹುದು. ಪ್ರವಾದಿ ಮಹಮ್ಮದ್ ಸ.ಅ ರವರು ಜೀವಿತಾವಧಿಯಲ್ಲೇ ಅನಸ್ ರ.ಅ ರವರೊಂದಿಗೆ ಹೇಳುತ್ತಾರೆ, ಉಸ್ಮಾನ್ ಇಬ್ನ್ ಅಫ್ಫಾನ್ ರ.ಅ ರವರು ತನ್ನ ತ್ಯಾಗದ ಫಲವಾಗಿ ಅವರಿಗೆ ಸ್ವರ್ಗಲೋಕವು ನಿಶ್ಚಯವಾಗಿ...

*ನಕಲಿ ಹಾವಳಿ*

*ನಕಲಿ ಹಾವಳಿ* ನಕಲಿ ಗಾಂಧಿಯರೆಡೆಯಲಿ ಅಸಲಿ ಗಾಂಧಿಯು ಮರೆಯಾದವೇ..? ಕೊಳ್ಳೆ ಹೊಡೆಯಲು ನೆನಪು ಉಳಿಯಿತು ಗಾಂಧಿ ನೋಟದು ಮಾತ್ರವೇ..!!! ಖಾದಿ ವಸ್ತ್ರವ ಧರಿಸಿದವನಲಿ ಅಹಂಕಾರದೊಳೇನಿದು ನೋಟವೇ...? ಬಟ್ಟೆಗಿಲ್ಲದ ಬಡವನಿರುವನು ಅವನೆದುರು ಇವನದು ಹವ್ಯಾಸವೇ...!!! ಮನೆಯ ಕಸವನು ಗುಡಿಸದವನು ದೇಶ ಸ್ವಚ್ಚ ಹೇಗೆ ಮಾಡುವ ತಟ್ಟನೇ..? ಪರರ ಮೆಚ್ಚಿಸಲು ಬಂದ ತಂಡವು ಸ್ವ ಪ್ರಚಾರಕೆ ನೋಟನು ಕೊಟ್ಟನೇ...!! ದೋಚಿ ಬಾಚಿದ ಹೊಟ್ಟೆ ಬಾಕರು ತಿಂಡು ತೇಗುತ ಹೋದರೇ...? ಗಾಂಧಿ ಹೆಸರನು ಬಳಸಿ ಕಲಸುತ ಉಂಡು ಕೊಂಡು ಹೋದರೇ...!!! ಜಾತಿ ನೆಪದಲಿ ದಿನವ ದೂಡುತ ಅಂಟುರೋಗ ಜ್ವರವನು ಬಿಟ್ಟರೇ...? ಜ್ಯೋತಿ ಬೆಳಗುವ ದೇಶ ದೊರೆಗಳು ಗಂಟು ಕೂಡಿಸಿ ಇಟ್ಟರೇ...!!! ಧರಿಸಿ ಹರಸುವ ದಿನಗೆಳೆಡೆಯಲಿ ಗಾಂಧಿಯ ಅಹಿಂಸೆ ತತ್ವವು ಬೆಳೆದವೇ...? ಬಾಪುಜಿ ಬಾಳಿನ ಧ್ಯೇಯ ನೆನಪದು ದೇಶ ಉಳಿಸಲು ನೆನಪಿಸೋಣವೇ....!!! - ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

ಲೇಖನ

Image
ಜೀವನ ಮತ್ತು ಬಹುಮಾನ*        ಈ ಜಗದ ಸುಂದರ ಪ್ರಕೃತಿ, ಪ್ರಕೃತಿಯ ಸುತ್ತ ಅತಿಥಿಯಾಗಿ ಸಿಹಿ,ಕಹಿಯ ಅವಲಂಬಿತ ಜೀವನ, ಇಲ್ಲೇ ಜನನ, ಇಲ್ಲೇ ಮರಣ, ಮಧ್ಯೆ ಬಾಲ್ಯ, ಯವ್ವನ, ಮದುವೆ, ಮಕ್ಕಳು, ಉದ್ಯೋಗ, ಆಸ್ತಿ, ಪಾಸ್ತಿ.ಆದರೂ ಕೇವಲ ನಾಲ್ಕು ಗೆರೆಗಳಲ್ಲಿ ಬರೆದು ತೀರಿಸುವಂತಹದಲ್ಲ ಜೀವನ. ಜೀವನ ಅಂದರೆ ಅದಕ್ಕೆ ಆರಂಭ ಹಾಗೂ ಅಂತ್ಯ ಇದ್ದೇ ಇದೆ.ಅದರಲ್ಲೂ ಮನುಷ್ಯನ ಜೀವನದಲ್ಲಿ ಸತ್ಯ ಮಿಥ್ಯಗಳ ಮಧ್ಯೆ ಜೀವನದ ಸ್ವಾಧವನ್ನು ಸವೆಯಲು ಜೀವನದ ಉದ್ದೇಶವನ್ನು ಅರಿಯದವರಿಗೆ ಕಲಿತು ಅರಿತರೆ, ಕಲಿತವರು ಉಪದೇಶಿಸಿದರೆ ಜೀವನದ ಕೆಲ ಕುಂದು ಕುಂದು ಕೊರತೆಗಳಿಗೆ ಕಡಿವಾಣಾಕಲು ಸಾಧ್ಯ,ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನವಷ್ಟೇ.        ಈ ಪ್ರಪಂಚದಲ್ಲಿ ಕೋಟ್ಯಾನು ಕೋಟಿ ಜೀವ ಜಲಚರಗಳಲ್ಲಿ ಜೀವಿಸುವ ಒಂದು ಜೀವವಾಗಿದೆ ಮನುಷ್ಯ ಅಥವಾ ಮಾನವ. ಎಲ್ಲಾ ಜೀವಿಗಳು ಬಳಸುವ ಗಾಳಿ, ನೀರು, ಬೆಳಕು, ವಾಸ ಎಲ್ಲವೂ ಒಂದೇ... ಆದರೆ ಇವುಗಳಂತಲ್ಲ ಮನುಷ್ಯ...ನೀರಿನಲ್ಲೂ ಪ್ರಯಾಣಿಸಲು,ಭೂಮಿ ಮೇಲಿಂದ ಗಾಳಿಯ ಹಿಂದಿಕ್ಕಿ ಹಕ್ಕಿಯಂತೆ ಪ್ರಯಾಣಿಸಲು ಕಲಿತಿರುವ ಮಾನವ ಬುದ್ದಿ ಜೀವಿ.        ಎಲ್ಲೋ ಮರದಲ್ಲಿ ವಾಸಿಸುವ ಹಕ್ಕಿಯಂತೆಯೋ, ನೀರಿನ ಒಳಗೆ ವಾಸಿಸುವ ಜಲಚರದಂತೆಯೋ, ಕಾಡಲ್ಲಿ ವಾಸಿಸುವ ಪ್ರಾಣಿಗಳಂತೆಯೂ ಆಗಿರದೆ, ಅಲ್ಲಾಹನ ಸೃಷ್ಠಿಗಳಲ್ಲಿಯೇ ಶ್ರೇಷ್ಠನಾಗಿದ್ದಾನೆ/ಳೆ.  ...

ನನ್ನ ರೂಮಿನಲ್ಲಾದ ಈದ್.....!! ಇದು ಬಹುತೇಕ ಪ್ರವಾಸಿಯ ಈದ್....

ನನ್ನ ರೂಮಿನಲ್ಲಾದ ಈದ್.....!!  ಇದು ಬಹುತೇಕ ಪ್ರವಾಸಿಯ ಈದ್....                             n.u.t - ತಬೂಕ್         ವಿಶ್ವದಲ್ಲೆಡೆ ಮುಸಲ್ಮಾನರು ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವಾಗಿದೆ ಈ ಬಕ್ರೀದ್.          ಅಂದು ಬಕ್ರೀದ್ ಹಬ್ಬದ ದಿನವಾಗಿತ್ತು.   ಬೆಳಿಗ್ಗೆ ಫಜರ್ ನಮಾಝ್ ಮುಗಿಸಿ ರೂಮಿಗೆ ಬಂದೆವು. ಹೆಚ್ಚು ಹಸಿವಾಗಿದ್ದರಿಂದ ಕಾಲಿ ಹೊಟ್ಟೆಗೆ ಏನಾದರು ತಿನ್ನಲು ಅಡುಗೆ ಕೋಣೆಗೆ ತೆರಳಿದಾಗ, ಕಳೆದ ದಿನದ ದಾಲ್ ಕರಿ ಹಾಗೂ ಕುಬ್ಬೂಸ್ ರೆಡಿಯಾಗಿತ್ತು. ಅದನ್ನು ಹತ್ತಿರದಲ್ಲಿ ನೋಡಿದಾಗ ಹೊಟ್ಟೆ ತುಂಬಿದ ಅನುಭವವಾಯಿತು....!!    ಹಬ್ಬದ ದಿನಗಳಂದು ಗೆಳೆಯನಾದ ಮುಸ್ತಫಾ ನನ್ನ ರೂಮಿಗೆ ಬರುವುದು ರೂಡಿ. ಅವರ ಕೆಲ ತಮಾಷೆಗಳೊಂದಿಗೆ ಅವರ ನಡವಳಿಕೆಯು ನಮ್ಮ ರೂಮಿನವರಿಗೆ ತುಂಭಾ ಹಿಡಿಸುವ ವ್ಯಕ್ತಿಯಾಗಿದ್ದರು. ಅವರ ತಮಾಷೆ ಹಾಗೂ ಮಾತಿನೊಂದಿಗೆ ಮಸೀದಿಗೆ ತೆರಳಲು ರೆಡಿಯಾಗತೊಡಗಿದೆವು.      ಆರು ನಲವತ್ತೈದಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಆರಂಭವಾಯಿತು. ನಮಾಝ್, ಖುತುಬಾದ ನಂತರ ಮಸೀದಿಯ ಹೊರಾಂಗಣದಲ್ಲಿ ನಿಂತಿದ್ದ ಪರಿಚಯಸ್ತರೊಂದಿಗೆ ಅಪ್ಪುಗೆಯ ಈದ್ ಮುಬಾರಕ್ ವಿನಿಮಯ ಮಾಡಿಕೊಂಡೆವು.    ...
Image
#ಸಿಗದ_ಸ್ವಾತಂತ್ರ್ಯ ಕಿಂಚಿತ್ತೂ ಕರುಣೆ ತೋರಿಸದ ಬಿಳಿಯರ ನರಕ ಗುಂಡಿಯಿಂದ ಹೋರಾಡಿ ಗೆದ್ದು ಬಂದ ಭಾರತೀಯರು ನಾವು... ಅಧಿಕಾರ, ವ್ಯಾಮೋಹ, ಹಣದಾಸೆಗಾರರ ಬಲೆಯಲ್ಲಿ ಸಿಕ್ಕಿಕೊಂಡಿರುವುದು ಒಗ್ಗಟ್ಟಿನ ಕೊರತೆಯೇ ಸರಿ, ಒಂದರ್ಥದಲ್ಲಿ... ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದೂ ಅದನ್ನು  ಉಪಯೋಗಿಸುತ್ತಿರುವುದು ಸಾಮಾನ್ಯ ದೇಶ ಪ್ರೇಮಿ ಭಾರತೀಯರಲ್ಲ, ದಚಶ ದ್ರೋಹಿ ಭಾಗ್ಯವಂತರು ಎನ್ನುವಷ್ಟರ ಮಟ್ಟಿಗೆ ದೇಶ ಮುಂದುವರಿಯುತ್ತಿದೆ...! *ಹೌದು..* ಸ್ವಾತಂತ್ಯ ಹೋರಾಟಗಾರರು ರಕ್ತ ಹರಿಸುತ್ತಿದ್ದು ಶಾಂತಿ ಸಹಬಾಳ್ವೆಗಾಗಿಯಾದರೂ,ಇಂದು ರಕ್ತ ಕಸಿದು ಅಶಾಂತಿ ಸೃಷ್ಟಿಸುವುದು ಮೇಲ್ಜಾತಿಗಳ ದೊಡ್ಡಸ್ತಿಕೆ ಉಳಿಸಿಕೊಳ್ಳಲು... ಏಕೆಂದರೆ -- ಹೊಡಿ, ಬಡಿ, ಕಡಿ, ಎಂದು ಆಜ್ಞೆಮಾಡುತ್ತಿರುವ ಮೇಲ್ಜಾತಿ ಪಿಶಾಚಿಗಳು ಸಾಮಾನ್ಯ ಜನರ ವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿರುವುದು ಕಂಡೂ ದೇಶದ ಪ್ರೌಢ ಪ್ರಜೆಗಳು ಸುಮ್ಮನಾಗಿರುವುದು ಖೇದಕರ, ಎಲ್ಲಿಯವರೆಗೆ ಮೌನಮುರಿದು ಒಗ್ಗಟ್ಟು ಸಾರಿ ಮುಂದುವರಿಯುವುದಿಲ್ಲವೋ ಅಲ್ಲಿಯವರೆಗೆ ಸ್ವಾತಂತ್ರ್ಯ ಕೇವಲ ಕನಸು ಮಾತ್ರ.. *ಓ ಅಧಿಕಾರ ದಾಹಿಗಳೇ ಕೇಳಿರಿ,..!!* ನೈಜ ಭಾರತೀಯರ ಹಣ, ಅಧಿಕಾರ, ಸಂಪತ್ತು, ನ್ಯಾಯ, ರಕ್ಷಣೆ, ಸಮಾನತೆ, ಐಕ್ಯತೆ ಮತ್ತೆ ಒಂದಾಗಿ ಮತ್ತೆ ಪಡೆಯುವೆವು ಕೇಸರಿ,ಬಿಳಿ,ಹಸಿರಿನ ಧ್ಯೇಯವನ್ನು ಎತ್ತಿ ಕಟ್ಟುವೆವು,ಇದು ದೇಶಭಕ್ತ ನೈಜ ಪ್ರಜೆಗಳ ಸ್ವಾತಂತ್ರ್ಯದ ನಮ್ಮ ಗುರಿ...

ಉಮರ್ ರ.ಅ 2

*ಉಮರ್ ರ.ಅ ರವರ*       *ನ್ಯಾಯಸಮ್ಮತ ಆಡಳಿತ*            ಉಮರ್ ರ.ಅ ರವರು ಇಸ್ಲಾಂ ಧರ್ಮ ಸ್ವೀಕಾರದ ನಂತರ, ನೆಬಿ ಸ.ಅ ವಫಾತಿನ ನಂತರ ಅಬೂಬಕ್ಕರ್ ಸಿದ್ದೀಕ್ ರ.ಅ ರವರ ಕಾಲಾನಂತರ ಎರಡನೇ ಖಲೀಫರಾಗಿ ಅಧಿಕಾರಕ್ಕೇರಿದರು. ತನ್ನ ಧರ್ಮನಿಷ್ಠೆ, ಕಾಳಜಿ, ನ್ಯಾಯ, ಕರುಣೆ, ವಿನಯ ಹಾಗೂ ಆಡಳಿತದಲ್ಲಿ ಜಗತ್ತನ್ನೇ ಅಚ್ಚರಿಗೊಳಿಸಿದ್ದರು. ಅವರ ಜೀವಾನಾದರ್ಶವೇ ಇಂದಿನ ಆಧುನಿಕ ನಾಯಕರ ಕನಸು. ಆದರೆ ಹಣ ಹಾಗೂ ಅಧಿಕಾರದ ವ್ಯಾಮೋಹ ಹಾಗೂ ಪೈಪೋಟಿಯ ಆಡಳಿತದ ನಡುವೆ ಉತ್ತಮ ಆಡಳಿತದ ಕನಸು ಕಮರಿಹೋಗುತ್ತಿದೆ.                *******            ಉಮರ್ ರ.ಅ ಆಡಳಿತದ ಅಂದಿನ ಕಾಲಘಟ್ಟದ  ಜನ ನಿವಾಸಿಗಳು ನ್ಯಾಯಯುತವಾಗಿ ಜೀವಿಸುತಿದ್ದರು. ಉಮರ್ ರ.ಅ ಎಷ್ಟು ವಿನಯವಂತರೆಂದರೆ, ತಮ್ಮ ಆಡಳಿತಾ ದಿನಗಳಲ್ಲಿ ಯಾರಿಗೂ ಅರಿಯದಂತೆ ಪ್ರತೀದಿನ ರಾತ್ರಿ ಒಂದು ಮನೆಗೆ ಭೇಟಿ ಕೊಡುತಿದ್ದರು. ಇದನ್ನು ಮನಗಂಡ ಓರ್ವ ಸ್ವಹಾಬಿ ಇವರ ಈ ಅಚ್ಚರಿಯ ಭೇಟಿಯ ರಹಸ್ಯ ಭೇಧಿಸಲು ಒಂದು ದಿನ ರಾತ್ರಿ ಅಡಗಿ ಕುಳಿತು ವೀಕ್ಷಿಸಿದರು. ಅಂದು ರಾತ್ರಿಯೂ ಉಮರ್ ರ.ಅ ರವರು ಆ ಮನೆಗೆ ಭೇಟಿ ನೀಡಿದರು. ಅಲ್ಪ ಸಮಯದ ನಂತರ ಅವರು ಆ ಮನೆಯಿಂದ ತೆರಳಿದರು. ಆ ಸ್ವಹಾಬಿ ಆ ಮನೆಯ ಒಳಗೆ ಭೇಟಿ ನೀಡಿದರು. ಆದರೆ ಅಲ್ಲಿ ಒಂದು ಕಣ್ಣು ಸರಿಯ...

ಉಮರ್ ರ.ಅ

#ಪ್ರಪಂಚವೇ_ನಿಬ್ಬೆರಗಾದ_ದಿನವದು #ಉಮರ್_ರಅ #ರವರ_ಇಸ್ಲಾಂ_ಸ್ವೀಕಾರ         ಕತ್ತಾಬ್ ಎನ್ನವ ಆಡುಗಳ ಸಾಕುವ ಒಬ್ಬ ವ್ಯಕ್ತಿ ಮಕ್ಕಾದಲ್ಲಿದ್ದು, ಹಲವಾರು ಮಡದಿಯರಿದ್ದರೂ ಮಕ್ಕಳಾಗಿರಲಿಲ್ಲ. ಕೆಲ ದಿನಗಳ ನಂತರ ಮಡದಿಯರಲ್ಲಿ ಒಬ್ಬಳಾದ ಹಂತಮಾ ಬಿನ್ತ್ ಹಾಶಿಮ್ ಎನ್ನುವ ಮಡದಿ ಕಿ.ಶ 583 ರಲ್ಲಿ ಮಕ್ಕಾ ಎಂಬ ಪ್ರದೇಶದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ನೋಡಲು ಸುಂದರನೂ, ದಷ್ಟ ಪುಷ್ಟವಾಗಿದ್ದ ಮಗುವನ್ನು ಕಂಡು ಅಲ್ಪ ಖುಷಿಪಟ್ಟ ಕತ್ತಾಬ್ ಮಗುವಿಗೆ ಉಮರ್ ಎಂದು ನಾಮಕರಣ ಮಾಡಿದ. ನಂತರ ಮಡದಿಯ ಪ್ರಸವದ ಬಗ್ಗೆ ಸಂತೋಷಗೊಂಡು ಊರಲ್ಲೆಲ್ಲ ಸಿಹಿ ತಿಂಡಿ ಹಂಚಿದ.        ದಿನ ಕಳೆದಂತೆ ಮಗು ಉಮರ್ ಬೆಳೆಯತೊಡಗಿದರು.  ತಂದೆ ಕತ್ತಾಬರಲ್ಲಿ ಮಗ ಬೆಳೆದು ದೊಡ್ಡವನಾದಲ್ಲಿ ಆಡು ಮೇಯಿಸಲು ಸಹಕಾರಿಯಾಗಬಹುದು, ನನಗೂ ಸ್ವಲ್ಪ ಆರಾಮ ಸಿಗಬಹುದೆಂದು ಮನಸ್ಸಿನಲ್ಲೆ ತೃಪ್ತಿ ಪಟ್ಟುಕೊಂಡಿದ್ದರು. ಮಗ ಉಮರಿನ ಬೆಳವನಣಿಗೆಯೂ... ದಷ್ಟ ಪುಷ್ಟನಾಗಿ ಉದ್ದದ ಕಾಲುಗಳು ಹೊಂದಿದ್ದರು.            ಒಂದು ದಿನ ಬೆಟ್ಟದ ಕಡೆ ಆಡು ಮೇಯಿಸಲು ಉಮರ್ ರ.ಅ   ತಂದೆ ಕತ್ತಾಬರು ಹಳುಹಿಸಿಕೊಟ್ಟರು. ಅದರೆ ಅಲ್ಲಿ ಒಂದು ಆಡು ಸತ್ತು ಹೋಯಿತು. ಆದರೆ ಸಂಜೆ ಮರಳುವ ವೇಳೆಗೆ ತನ್ನ ಅಜಾಗರೂಕತೆಯಿಂದ ಕೂಟದ ಆಡುಗಳಲ್ಲಿ ಒಂದು ಆಡು ಸತ್ತು ಹೋದ ವಿಷಯ ಅರಿತ ತಂದೆ ಕತ್ತಾಬರು, ಮಗ...

ಹಂಝ ರ.ಅ

*"ಸಾಹಸ ಸಿಂಹ" ಶಹೀದ್ ಹಂಝ (ರ.ಅ)*        ಲೋಕ ಪ್ರವಾದಿ ಮಹಮ್ಮದ್ ಮಸ್ತಫಾ ಸ.ಅ ರವರ ಚಿಕ್ಕಪ್ಪರಾದ ಹಂಝ ರ.ಅ ರವರ ಜೀವನ ಹಾಗೂ ಅವರ ವ್ಯಕ್ತಿತ್ವ ಮತ್ತು ಪ್ರವಾದಿ ಪ್ರೇಮವನ್ನು ಇತಿಹಾಸ ಪುಟಗಳಿದ ನಾವು ತಿಳಿಯಬೇಕು. ಹಂಝ ರ.ಅ ರವರ ಚರಿತ್ರೆ ಬರೆಯಲು ಅದೆಷ್ಟು ಪುಟಗಳಿದ್ದರೂ ಸಾಲದು.           ಪ್ರವಾದಿ ಪ್ರೇಮ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಕೇವಲ ಮಾತುಗಳು ಬರಹಗಳು ಮುಖಾಂತರ ಕಚ್ಚಾಡುವ  ಆಧುನಿಕ ಮುಸ್ಲಿಮರಿಗೆ ನಿಜವಾಗಿ ಹಂಝ ರ.ಅ ರವರ ರೋಮದಷ್ಟು ಧರ್ಮನಿಷ್ಟೆ, ಪ್ರವಾದಿ ಪ್ರೇಮ, ಹಾಗೂ ಧೀರತೆ ಇರಲು ಸಾಧ್ಯವೇ...?                  ನೆಬಿ ಸ.ಅ ರವರಿಗೆ ಕಿರುಕುಳ ಕೊಟ್ಟಾಗ ಅಬೂಜಾಹಿಲನ ಕೋಟೆಗೆ ನುಗ್ಗಿ ಘರ್ಜಿಸಿದ ಸಿಂಹ ಹಂಝ ರ.ಅ, ಉಹುದ್ ರಣಾಂಗಣದಲ್ಲಿ ವಿರೋಧಿಗಳೆದುರು ಘರ್ಜಿಸಿದ ಸಿಂಹವಾಗಿದ್ದರು ಈ ಹಂಝ ರ.ಅ.         ನೀರಿಲ್ಲದ ಬರುಡು ಭೂಮಿಯಾಗಿದ್ದ ಬದ್ರ್ ರಣಾಂಗಣ. ಸಹಾಬತ್ ಎಲ್ಲರೂ ನೀರಿಗಾಗಿ ಪರದಾಡುವ ಸಂಧರ್ಬ, ರಸೂಲರಾದ ಮುಹಮ್ಮದ್ ನೆಬಿ ಸ.ಅ ರವರಲ್ಲಿ ನೀರಿನ ಗಂಭೀರ ಪರಿಸ್ಥಿತಿಯನ್ನು ಹೇಳಿದಾಗ, ಅಲ್ಲಾಹನಲ್ಲಿ ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು. ಆಗಲೇ ಸುರಿದ ಕಾರುಣ್ಯದ ಮಳೆಯ ನೀರು, ನೀರು ಎಲ್ಲೊಂದರಲ್ಲಿ ಹರಿಯುತಿತ್ತು. ನೀರನ್ನು ಶೇಖರಿಸಿಡಲು ಸ್ವಹಾಬಿಗಳ ಮಾರ್ಗ...

ಭಾಗ 13

#ಚರಿತ್ರೆಯ_ಅರೇಬಿಯಾ.... ಭಾಗ -13  n.u.t #ಝಲ್‌ಕರ್‌ನೈನ್_ಚಕ್ರವರ್ತಿ.      ಯುರೋಪ್ ರಾಷ್ಟ್ರದ ಸೋವಿಯತ್ ಜೋರ್ಜ್ ದೇಶದ ರಾಜದಾನಿಯಾದ ತಬ್ಲೀಷ್ ಎಂಬಲ್ಲಿ, ಕಿ.ಪೂರ್ವ 600 ರಲ್ಲಿ ಝಲ್‌ಕರ್‌ನೈನ್ ಚಕ್ರವರ್ತಿ ಹಾಗೂ ಅವರ ಜನತೆಯು ಜೀವಿಸುತಿದ್ದರು.   ಇವರ ಕಾಲದಲ್ಲಿ ನೂಹ್ ನೆಬಿಯವರ ಮಗನಾದ ಯಾಪಿಸ್ ಇವರ ಸಂತತಿಗಳಾಗಿದ್ದ ಯಹ್ಜೂಜ್ ಮಹ್ಜೂಜ್ ವಂಶಸ್ಥರೂ ವಾಸಿಸುತಿದ್ದರು .        ತಬ್ಲೀಷ್ ನಿಂದ ದಾರಿಯಲ್ ಪ್ರದೇಶಕ್ಕೆ ಸಂಚರಿಸುವಾಗ ಸಿಗುವ ಬೈಹತ್ ಆಕಾರದ ಬೆಟ್ಟಗಳ ತಪ್ಪಲಲ್ಲಿ ಜೀವಿಸುತಿದ್ದ ಸಮೂಹವಾಗಿತ್ತು ಯಹ್ಜೂಜ್ ಮಹ್ಜೂಜ್.  ತೀರ ಅಸಂಸ್ಕೃತಿ ಹಾಗೂ ದರೋಡೆಕೋರರಾಗಿದ್ದರು ಇವರು. ಇವರು ದಾರಿಯಲ್ ಬೆಟ್ಟವನ್ನು ದಾಟಿ ಬಂದು ಕಾಕಸಸ್ ಎಂಬ ಪ್ರದೇಶದಲ್ಲಿ ದರೋಡೆ ನಡೆಸುತಿದ್ದರು.      ಇವರ ದರೋಡೆಯ ಸಂಖ್ಯೆಯು ಹೆಚ್ಚಾಗತೊಡಗಿದಾಗ ಅವರಿಂದ ನಮ್ಮನ್ನು ರಕ್ಷಿಸುವಂತೆ ಜೋರ್ಜಿಯನ್ ದೇಶದ ಜನತೆ ಝಲ್‌ಕರ್‌ನೈನ್ ಚಕ್ರವರ್ತಿಯಲ್ಲಿ ಬೇಡಿಕೆ ಇಟ್ಟರು.               ಆಗ ಝಲ್‌ಕರ್‌ನೈನ್ ಹೇಳಿದರು. ನೀವು ಜನ ಬಲದ ಮೂಲಕ ನನಗೆ ನೆರವಾಗಿರಿ. ನಾನು ನಿಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸುವೆನು. ಮತ್ತೆ  ನನಗೆ ಉಕ್ಕಿನ ಹಾಳೆಗಳನ್ನು ತಂದು ಕೊಡಿರಿ. ಹೀಗೆ, ಅವರು ಎರಡು ಪರ್ವತಗಳ ನಡ...

ಭಾಗ 12

*ಚರಿತ್ರೆಯ ಅರೇಬಿಯಾ.. ಭಾಗ 12   n.u.t* *ಮಸ್ಜಿದುಲ್ ಅಕ್ಸಾ...*   ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾವನ್ಪು ಖಿಬ್ಲಾ (ಕೇಂದ್ರ) ಮಾಡುವ ಮೊದಲು, ಈ ಮಸ್ಜಿದುಲ್ ಅಕ್ಸಾದ ಕಡೆಗೆ ತಿರುಗಿ ಆಗಿತ್ತು ಮುಸ್ಲಿಮರು ಪ್ರಾರ್ಥನೆ (ನಮಾಝ್) ಮಾಡುತ್ತಿದ್ದರು. ವಿಶ್ವದ ಮೂರು ಶ್ರೇಷ್ಠ ಮಸೀದಿಗಳಾಗಿದೆ ಮಕ್ಕಾದ ಮಸ್ಜಿದುಲ್ ಹರಂ, ಮದೀನಾದ ಮಸ್ಜಿದುಲ್ ನಬವಿ, ಹಾಗೂ ಪೆಲೆಸ್ತೀನಿನ ಈ ಮಸ್ಜಿದುಲ್ ಅಕ್ಸಾ ಅಥವಾ ಬೈತುಲ್ ಮಕದ್ದಸ್.       ಈ ಮಸೀದಿಯು ಪೆಲೆಸ್ತೀನಿನ ಜೆರುಸಲೇಂನಲ್ಲಿ ಇದೆ. ಈ ಮಸೀದಿಯನ್ನು ಸುಲೈಮಾನ್ ನೆಬಿಯು ನಿರ್ಮಿಸಿದ್ದಾರೆ. ಹಲೇಯ ಮಸೀದಿ ಇದ್ದ ಸ್ಥಳದಲ್ಲೇ ಉಮರ್ ಇಬ್ನು ಖತ್ತಾಬ್ ರ.ಅ ಹಾಗೂ ತದನಂತರ ಹುಮವೀ ಖಲೀಫ ಅಬ್ದುಲ್ ಮಲಿಕ್ ನಿರ್ಮಿಸಿದ ಸೌಧವಾಗಿದೆ, ಕುಬ್ಬತು ಸುಖ್ರಾ ಅಥವಾ ಡೋಮ್ ಆಫ್ ದಿ ರಾಕ್. *ಯೂನುಸ್ ನೆಬಿ (ಅ.ಸ)*       ಇರಾಕ್ ದೇಶದ ರಾಜಧಾನಿ ಬಗ್ದಾದಿನಿಂದ ನಾಲ್ಕುನೂರು ಕಿ.ಮೀ ಸಂಚರಿಸಿದಾಗ ಸಿಗುವ ಪ್ರದೇಶವೇ ನೀರವ ಅಥವಾ ಮೂಸುಲ್. ಟೈಗ್ರೀಸ್ ನದಿಯ ತೀರ ಪ್ರದೇಶವಾದ ನೀರಾವಾ ಪ್ರದೇಶದ ಪ್ರವಾಜಗರಾಗಿದ್ದರು ಯೂನುಸ್ ನೆಬಿ.       ಯೂನುಸ್ ನೆಬಿಯ ಪ್ರವಚನ ಹಾಗೂ ಉಪದೇಶವನ್ನು ಆ ನಾಡಿನ ಜನರು ವಿರೋಧಿಸಲ್ಪಟ್ಟಾಗ, ಅಲ್ಲಿಯ ಜನರೊಂದಿಗೆ ಕೋಪಗೊಂಡು ಆ ಪ್ರದೇಶದಿಂದ ಹಡಗನ್ನೇರಿ ಊರು ತೊರೆದರು. ಹಡಗಿನಲ್ಲಿ ಅವಘಡ ಸಂಭವಿಸುವ ಪರಿ...

ಭಾಗ 11

*ಚರಿತ್ರೆಯ ಅರೇಬಿಯಾ ಭಾಗ - 11      n.u.t* *ಬಲ್ಕೀಸ್ ರಾಣಿ*    ಪೆಲೆಸ್ತೀನ್ ದೇಶದಲ್ಲಿ ಜೀವಿಸುತಿದ್ದ ದಾವೂದ್ ನೆಬಿಯವ ಪುತ್ರ ಸುಲೈಮಾನ್ ನೆಬಿಯವರು ತಂದೆ ಕಲಾನಂತರ ಅಧಿಕಾರಕ್ಕೇರಿದರು. ಅವರಿಗೆ ಅಲ್ಲಾಹು ನೀಡಿದ ಹಲವು ಮೂಹ್ಜಿಝತ್ತುಗಳಲ್ಲಿ ಒಂದಾಗಿತ್ತು ಪಕ್ಷಿಗಳೊಂದಿಗೆ ಮಾತಾಡುವುದು.               ಯಮನ್ ದೇಶದ ಮಗ್ರಿಬ್ ಪ್ರದೇಶದ ಹತ್ತಿರದ ಸಬಗ್ ಗೋತ್ರದವರು ಜೀವಿಸುತಿದ್ದರು. ಅವರ ರಾಣಿಯಾದ ಬಲ್ಕೀಸಿನ ನೇತೃತ್ವದಲ್ಲಿ ಸೂರ್ಯನನ್ನು ಆರಾದಿಸುತ್ತಿರುವ ವಿವವರವನ್ನು ಮರ ಕುಟುಕ ಪಕ್ಷಿಯು ಸುಲೈಮಾನ್ ನೆಬಿಯಲ್ಲಿ ತಿಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಸುಲೈಮಾನ್ ನೆಬಿಯು ಬಲ್ಕೀಸ್ ರಾಣಿಗೆ ಪತ್ರ ಬರೆದರು. ದೇವರ ನಾಮದಲ್ಲಿ ಆರಂಭವ ಪತ್ರದಲ್ಲಿ ಸೂರ್ಯದೇವರ ಆರಧನೆಯಲ್ಲಿ ನಿಲ್ಲಿಸುವಂತೆಯೂ, ಈ ಜಗತ್ತಿನ ಸೃಷ್ಟಿಕರ್ತನಾದ ಅಲ್ಲಾಹನನ್ನು ಮಾತ್ರ ವಿಸ್ವಾಸವಿಟ್ಟು ಸತ್ಯದ ಪಥದಲ್ಲಿ ಸಂಚರಿಸುವಂತೆಯೂ ಆ ಪತ್ರದಲ್ಲಿ ಬರೆಯಲಾಯಿತು. ಈ ಪತ್ರವನ್ನು ಪೆಲೆಸ್ತೀನ್ ನಿಂದ ಯಮನಿಗೆ ಈ ಮರಕುಟುಕ ಪಕ್ಷಿಯೇ ತಲುಪಿಸಿತು. ಪತ್ರವನ್ನು ಓದಿದ ನಂತರ ಬಲ್ಕೀಸ್ ರಾಣಿ ಹೇಳಿದರು; ಸರದಾರರೇ, ಈ ವಿಷಯದಲ್ಲಿ ನೀವು ನನಗೆ ಸಲಹೆ ನೀಡಿರಿ. ನಿಮ್ಮ ಉಪಸ್ಥಿತಿ ಇಲ್ಲದೆ ನಾನು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಆಗ ಆ ಜನಾಂಗದವರು ಪ್ರತ್ಯುತ್ತರ ನೀಡುತ್ತಾ.. ನಾವು ತುಂ...

ಭಾಗ 10

*ಚರಿತ್ರೆಯ ಅರೇಬಿಯಾ...* *ಭಾಗ - 10   n.u.t* ರಮಳಾನ್ ತಿಂಗಳ ಮೊದಲು ನಾನು ಬರೆಯುತ್ತೀದ್ದಂತಹ ಚರಿತ್ರೆಯ ಅರೇಬಿಯಾ ಇದರ ಒಂಭತ್ತು ಭಾಗಗಳ ನಂತರ ಹತ್ತನೇಯ ಭಾಗವನ್ನು ಇಂದು ನಾನು ಆರಂಬಿಸುತಿದ್ದೇನೆ.   *ಖಾರೂನ್*   ಮೂಸಾ ನೆಬಿಯ ಸಂತತಿಯಲ್ಲಿ ಜೀವಿಸಿದಂತಹದ ಒಬ್ಬ ಬಲಾಡ್ಯನು ಕಿ.ಪೂ 1300 ರಲ್ಲಿ ಇಜಿಪ್ಟ್ ದೇಶದಲ್ಲಿ ವಾಸಿಸುತಿದ್ದನು.  ಈಜಿಫ್ಟ್ ದೇಶದ ರಾಜಧಾನಿ ಕೈರೋಯಿಂದ ನೂರೈವತ್ತು ಕಿ.ಮೀ ದೂರದಲ್ಲಿ ಕಸರ್ ಕಾರೂನ್ ಎಂಬ ಸ್ಥಳದಲ್ಲಾಗಿತ್ತು ಇವನ ವಾಸ. ಈಗಲೂ ಅಲ್ಲಿ ಇವನ ದೇವಾಲಯ, ಬಾವಿ ಹಾಗೂ ಅನೆಕಟ್ಟುಗಳನ್ನು ಕಾಣಬಹುದು. ಖಾರೂನಿನ ಬಗ್ಗೆ ಪವಿತ್ರ ಕುರಾನ್ ತಿಳಿಸುದೇನೆಂದರೆ, *ಅಧ್ಯಾಯ 28: ಅಲ್‌ ಕಸಸ್ (ಕಥೆಗಳು), ಸೂಕ್ತ  76 ﺇِﻥَّ ﻗَٰﺮُﻭﻥَ ﻛَﺎﻥَ ﻣِﻦ ﻗَﻮْﻡِ ﻣُﻮﺳَﻰٰ ﻓَﺒَﻐَﻰٰ ﻋَﻠَﻴْﻬِﻢْ ۖ ﻭَءَاﺗَﻴْﻨَٰﻪُ ﻣِﻦَ ٱﻟْﻜُﻨُﻮﺯِ ﻣَﺎٓ ﺇِﻥَّ ﻣَﻔَﺎﺗِﺤَﻪُۥ ﻟَﺘَﻨُﻮٓﺃُ ﺑِﭑﻟْﻌُﺼْﺒَﺔِ ﺃُﻭ۟ﻟِﻰ ٱﻟْﻘُﻮَّﺓِ ﺇِﺫْ ﻗَﺎﻝَ ﻟَﻪُۥ ﻗَﻮْﻣُﻪُۥ ﻻَ ﺗَﻔْﺮَﺡْ ۖ ﺇِﻥَّ ٱﻟﻠَّﻪَ ﻻَ ﻳُﺤِﺐُّ ٱﻟْﻔَﺮِﺣِﻴﻦَ* ಕಾರೂನನು ಮೂಸಾರ ಜನಾಂಗದವನೇ ಆಗಿದ್ದನು ಮತ್ತು ಅವನು ಅವರ ವಿರುದ್ಧ ವಿದ್ರೋಹಿಯಾದನು. ನಾವು ಅವನಿಗೆ ಅನೇಕ ಖಜಾನೆಗಳನ್ನು ನೀಡಿದ್ದೆವು. ಎಷ್ಟೆಂದರೆ, ಅವುಗಳ ಚಾವಿಗಳು ಒಂದು ಶಕ್ತಿಶಾಲಿ ತಂಡದ ಪಾಲಿಗೂ ಭಾರವೆನಿಸುತ್ತಿದ್ದವು. ಅವನ ಜನಾಂಗವು ಅವನೊಡನೆ ಹೇಳ...

ಭಾಗ 9

#ಚರಿತ್ರೆಯ #ಅರೇಬಿಯಾ.... #ಭಾಗ - 9   n.u.t #ಈಜಿಫ್ಟಿಯನ್ #ಮ್ಯೂಸಿಯಂ ಹಾಗೂ #ಫಿರ್-#ಹೌನ್ #ಮೃತದೇಹ         ಫರೋವಾಗಳು ಉಪಯೋಗಿಸಿದ ವಸ್ತುಗಳು ಹಾಗೂ ಅವರ ಪಳೆಯುಳಿಕೆಗಳು ಕೈರೋವಿನ ಈಜಿಫ್ಟಿಯನ್ ಮ್ಯೂಸಿಯಂನಲ್ಲಿ ಶೇಖರಿಸಿಡಲಾಗಿದೆ. ಈ ಮ್ಯೂಸಿಯಂನಲ್ಲಿ  ಚಿನ್ನಾಭರಣಗಳು, ನಾಣ್ಯಗಳು,  ಈಜಿಫ್ಟ್ ಸರಕಾರ ಮೂಸಿಯಂಗೆ ರವಾನಿಸಿದ,   ಫರೋವಾಗಳ ಆ ಪಿರಮಿಡ್ ಗಳ ಒಳಗೆ ಹೂತಿಟ್ಟಿದ್ದ ಮೃತದೇಹವನ್ನು ಬಂದಿಸಿದ್ದ ಮಮ್ಮಿ (ಕಲಾಕೃತಿಯ ಪೆಟ್ಟಿಗೆಗಳು) ಇದೆ. ಇದರಲ್ಲಿ ಕೆಲವು ಮಮ್ಮಿಗಳು ಸಂಪೂರ್ಣ ಚಿನ್ನದಿಂದ ನಿರ್ಮಿಸಲಾಗಿದೆ.           ಫಿರ್ ಹೌನ ಕೂಟರಿಂದ ಅನ್ಯಾಯಕ್ಕೊಳಪಡುತ್ತಿದ್ದ ಇಸ್ರಾಯಿಲರನ್ನು ರಕ್ಷಿಸಲು ಮೂಸಾ ನೆಬಿಯು ತೀರ್ಮಾನಿಸಿದರು. ರಾತ್ರಿ ಸಮಯದಲ್ಲಿ ಮೂಸಾ ನೆಬಿಯು, ಹಾರೂನ್ ನೆಬಿಯನ್ನು ಹಾಗೂ ಸಾವಿರಾರು ಇಸ್ರಾಯಿಲರೊಂದಿಗೆ ಊರಿನಿಂದ ಪಲಾಯನ ಮಾಡಲು ತೀರ್ಮಾನಿಸಿದರು. ಈ ವಿವರ ಅರಿತ ಫಿರ್ ಹೌನ್ ದೊಡ್ಡ ಒಂದು ಸೈನ್ಯದೊಂದಿಗೆ ಅವರನ್ನು ಬಂಧಿಸಲು ಹೊರಟರು. ಸಮುದ್ರವು ಸಮೀಪಿಸುತಿದ್ದಂತೆಯೇ ಇರ್ವರೂ ಮುಖಾ ಮುಖಿಯಾದರು. ಆಗ ಅಲ್ಲಾಹನು ಮೂಸನೆಬಿಗೆ ಕಲ್ಪಿಸಿದ ವಿವರವನ್ನು ಕುರಾನ್ ವ್ಯಕ್ತಪಡಿಸುತ್ತಿದೆ. *ಅಧ್ಯಾಯ 26:* ಅಶ್ಶು ಅರಾ (ಕವಿಗಳು), ಸೂಕ್ತ  63 *ﻓَﺄَﻭْﺣَﻴْﻨَﺎٓ ﺇِﻟَﻰٰ ﻣُﻮﺳَﻰٰٓ ﺃَﻥِ ٱﺿْﺮِﺏ ﺑِّﻌَﺼَﺎﻙَ ٱﻟْﺒ...

ಭಾಗ 8

#ಚರಿತ್ರೆಯ #ಅರೇಬಿಯಾ.. #ಭಾಗ - 8  n.u.t* #ಈಜಿಫ್ಟಿನ #ಅದ್ಭುತ #ಪಿರಮಿಡ್'ಗಳು*       ಇಸ್ರಾಯಿಲರನ್ನು ಅಡಿಯಾಳುಗಲಾಗಿ ಅವರ ಕಾರ್ಮಿಕತೆಯಿಂದ ಈಜಿಫ್ಟ್ ದೇಶದ ಗೀಸಾ ಪ್ರದೇಶದಲ್ಲಿ ಫರೋವಾ ರಾಜರುಗಳು ಈ ಪಿರಮಿಡ್ ಗಳನ್ನು ನಿರ್ಮಿಸಿದರು. *4500* ವರ್ಷಗಳ ಮುಂಚೆ ಈ ಪಿರಮಿಡ್ ಗಳ ನಿರ್ಮಾಣವಾಯಿತು.      *ಇದು ವಿಶ್ವ ಕಂಡ ಏಳು ಅದ್ಭುತಗಳಲ್ಲಿ ಒಂದಾಗಿದೆ*.       *Bc 5000 ರಿಂದ Bc 332 ರ ವರೆಗೆ* ಈಜಿಫ್ಟ್ ದೇಶವನ್ನು ಆಳಿದವರು ಈ ಫರೋವಾಗಳು. ತಮ್ಮ ಮರಣಾನಂತರ ಅವರ ಶರೀರಗಳು ಕೊಳೆಯಬಾರದೆಂದು ಮಮ್ಮಿಗಳಾಗಿ (ಪೆಟ್ಟಿಗೆಯಲ್ಲಿ ಹಾಕಿ) ಇರಿಸಲು ಈ ಪಿರಮಿಡ್ ಗಳನ್ನು ನಿರ್ಮಿಸಲಾಗಿದೆ. ಈ ಪಿರಮಿಡ್ ಗಳ ಪೈಕಿ ದೊಡ್ಡದಾದ ಪಿರಮಿಡ್ *ಕುಫು* ರಾಜನದ್ದಾಗಿತ್ತು. ಸರಾಸರಿ *2500 ಕಿಲೋ ಭಾರವಿರುವ 23 ಲಕ್ಷ ಕಲ್ಲುಗಳಿಂದ ಈ ಪಿರಮಿಡಿನ ಕಟ್ಟಲಾಗಿದೆ. ಇದರ ಎತ್ತರ 147 ಮೀಟರ್. ಸುಮಾರು ಮೂರು ಲಕ್ಷ ಜನರು ವರ್ಷಗಳಿಂದ ಕೆಲಸ ನಿರ್ವಹಿಸಿ ಇದನ್ನು ನಿರ್ಮಿಸಲಾಗಿದೆ*.                           ಕ್ರೇನ್'ಗಳು ಅಥವಾ ಯಂತ್ರೋಪಕರಣ ಇಲ್ಲದೆ 4500 ವರ್ಷಗಳ ಮುಂಚೆ ಈ ಕಲ್ಲುಗಳನ್ನು ಮೇಲೆತ್ತಿ ನಿರ್ಮಿಸಲು ಕಾರ್ಮಿಕರು ಅದೆಷ್ಟು ಪಾಡು ಪಟ್ಟಿರಬಹುದೆಂದು ಊಹಿಸಲಸಾಧ್ಯ.       ...

ಭಾಗ 7

#ಚರಿತ್ರೆಯ #ಅರೇಬಿಯಾ....   #ಭಾಗ - 7  n.u.t* #ಮೂಸಾ #ನೆಬಿ* ಅ.ಸ ನಿನ್ನೆಯ ಸಂಚಿಕೆಯಿಂದ...                  ಹಾಗೆ ಮೂಸಾ ನೆಬಿಯು ಶುಐಬರ ಬಳಿಗೆ ಬಂದರು. ನಂತರ ನಡೆದ ವಿಷಯವನ್ನೆಲ್ಲಾ ತಿಳಿಸಿದರು. ಆಗ ಶುಐಬ್ ನೆಬಿ ಹೇಳಿದರು ನೀವೇನೂ ಹೆದರಬೇಡಿ. ನೀವೀಗ ಅಕ್ರಮಿತ ಜನಾಂಗದವರಿಂದ ಸುರಕ್ಷಿತರಾಗಿರುವಿರಿ.                         ನಂತರ ಶೊಐಬರ ಮಗಳಲ್ಲಿ ಒಬ್ಬಾಕೆ ಹೇಳಿದಳು ಅಪ್ಪಾ ಈತನನ್ನು ಸೇವಕನಾಗಿ ನೇಮಿಸಿಕೊಳ್ಳಿರಿ. ನೀವು ಸೇವಕನಾಗಿ ನೇಮಿಸುವುದಕ್ಕೆ ಶಕ್ತಿವಂತ ಹಾಗೂ ನಂಬಲರ್ಹ ವ್ಯಕ್ತಿಯು ಯೋಗ್ಯರಲ್ಲವೇ ಎಂದಳು.       ಹಾಗೆಯೇ ಶುಐಬ್ ಹೇಳಿದರು ನೀವು ಎಂಟು ವರ್ಷ ನನ್ನ ಬಳಿ ಸೇವೆ ಸಲ್ಲಿಸುವುದಾದರೆ ನಾನು ಈ ನನ್ನ ಇಬ್ಬರು ಪುತ್ರಿಯರ ಪೈಕಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುವೆನು. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಇಷ್ಟಕ್ಕನುಸಾರವಾಗಿದೆ. ನಾನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಜ್ಜನನಾಗಿ ಕಾಣುವಿರಿ ಎಂದರು.      ಅದಕ್ಕುತ್ತರವಾಗಿ ಮೂಸಾ ನೆಬಿ ಹೇಳಿದರು ಇದು ನನ್ನ ಹಾಗೂ ನಿಮ್ಮ ನಡುವಣ ಒಪ್ಪಂದವಾಗಿದೆ, ನಾನು ಈ ಎರಡು ಅವಧಿಗಳ ಪೈಕಿ ಯಾ...